ಈ ಅವಕಾಶವನ್ನು ಕಳೆದುಕೊಳ್ಳಬೇಡಿ: 'JOY' ಕಂಪನಿಯಿಂದ ಸೂಪರ್ ಆಫರ್

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಜಾಯ್ ಇ ಬೈಕ್ (Joy E Bike) ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿಯೊಂದನ್ನು ನೀಡಿದೆ. ಹೋಳಿ ಹಬ್ಬ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಸಂಭ್ರಮವನ್ನು ದ್ವಿಗುಣಗೊಳಿಸಲು ವಿವಿಧ ಮಾದರಿಗಳ ಮೇಲೆ ರೂ.12,000ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

ಈ ಕೊಡುಗೆಗಳು ಮಾರ್ಚ್ 31ರವರೆಗೆ ಚಾಲ್ತಿಯಲ್ಲಿರುತ್ತದೆ. ಗ್ಲೋಬ್ (Glob) ವುಲ್ಫ್ (Wolf) ಮತ್ತು ಜೆನ್ ನೆಕ್ಸ್ಟ್ ನ್ಯಾನೂ (Gen Next Nanu) ಮೇಲೆ ರೂ.7,000. ವುಲ್ಫ್ ಪ್ಲಸ್ (Wolf+) ಮತ್ತು ಜೆನ್ ನೆಕ್ಸ್ಟ್ ನ್ಯಾನೂ ಪ್ಲಸ್ (Gen Next Nanu+) ರೂ.12,000. ವೂಲ್ಫ್ ಇಕೋ (Wolf Eco) ಹಾಗೂ ಜೆನ್ ನೆಕ್ಸ್ಟ್ ನ್ಯಾನೂ ಇಕೋ (Gen Next Nano Eco) ರೂ.4,000 ರಿಯಾಯತಿ ಪ್ರಯೋಜನಗಳನ್ನು ಒಳಗೊಂಡಿದೆ.

ಈ ಅವಕಾಶವನ್ನು ಕಳೆದುಕೊಳ್ಳಬೇಡಿ: JOY ಕಂಪನಿಯಿಂದ ಸೂಪರ್ ಆಫರ್

ವಿಶೇಷವಾಗಿ ವಿಶ್ವ ಮಹಿಳಾ ದಿನ (ಮಾರ್ಚ್ 8)ದಿಂದ ಮಾರ್ಚ್ 11ರವರೆಗೆ ಜಾಯ್ ಸ್ಕೂಟರ್ ಖರೀದಿಸುವ ಮಹಿಳಾ ಗ್ರಾಹಕರು, ರೂ.2,000 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಲಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಜಾಯ್ ಗ್ಲೋಬ್ ಸ್ಕೂಟರ್ ರೂ.76,200, ವುಲ್ಫ್ ಸ್ಕೂಟರ್ ರೂ.78,414, ಜೆನ್ ನೆಕ್ಸ್ಟ್ ನ್ಯಾನೂ ರೂ.1.12 ಲಕ್ಷ, ವುಲ್ಫ್ ಪ್ಲಸ್ ರೂ.78,414 ಹಾಗೂ ಜೆನ್ ನೆಕ್ಸ್ಟ್ ನ್ಯಾನೂ ಪ್ಲಸ್ ರೂ.1.12 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದೆ.

ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಜಾಯ್ ಇ ಬೈಕ್ ಬಹುನೀರಿಕ್ಷಿತ ರೆಟ್ರೋ ಶೈಲಿಯ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.1.35 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಿ, ಬುಕಿಂಗ್ ಕೂಡ ಆರಂಭಿಸಿತ್ತು. ಈ ಸ್ಕೂಟರ್ ವಿತರಣೆಗಳು ಏಪ್ರಿಲ್ ತಿಂಗಳಿಂದ ಶುರುವಾಗಲಿದ್ದು, ಆಸಕ್ತ ಗ್ರಾಹಕರು, ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಡೀಲರ್‌ಶಿಪ್‌ಗೆ ಭೇಟಿ ನೀಡಿ ರೂ.999 ಮುಂಗಡ ಹಣ ಪಾವತಿಸಿ, ಬುಕ್ ಮಾಡಬಹುದು.

ಈ ಅವಕಾಶವನ್ನು ಕಳೆದುಕೊಳ್ಳಬೇಡಿ: JOY ಕಂಪನಿಯಿಂದ ಸೂಪರ್ ಆಫರ್

ಈ ನೂತನ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ 2.5 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 km ರೇಂಜ್ ನೀಡಲಿದೆ. ಕೇವಲ 7 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದೆ. ಮೆಟಾಲಿಕ್ ಬ್ಲೂ, ಸಾಲಿಡ್ ಬ್ಲ್ಯಾಕ್ ಗ್ಲೋಸಿ, ಸಾಲಿಡ್ ಯೆಲ್ಲೋ ಗ್ಲೋಸಿ ಹಾಗೂ ಪರ್ಲ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ ಎಂದು ಹೇಳಬಹುದು.

ಮಿಹೋಸ್ ಸ್ಕೂಟರ್ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಬಗ್ಗೆ ಮಾತನಾಡುವುದಾದರೆ, ಇದು ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್‌, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದ್ದು, ಫ್ರಂಟ್ ಮತ್ತು ರೇರ್, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಅಲ್ಲದೆ, ಹೊಸ ಖರೀದಿದಾರನ್ನು ಆರಕರ್ಷಿಸುವಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, ಬ್ಲೂಟೂತ್ ಕನೆಕ್ಷನ್, ರಿವರ್ಸ್ ಮೋಡ್, ಆಂಟಿ ಥೆಫ್ಟ್ ಸಿಸ್ಟಮ್ ಹಾಗೂ ಜಿಪಿಎಸ್.

ಜಾಯ್ ಕಂಪನಿಯ ಸ್ಕೂಟರ್ ಗಳು ಮೊದಲೇ ಅಗ್ಗದ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಈ ಡಿಸ್ಕೌಂಟ್ ಆಫರ್ ನಿಂದ ಬೆಲೆ ಮತ್ತಷ್ಟು ಕಡಿಮೆಯಾಗಿದೆ. ಬಹುತೇಕ ಈ ತಿಂಗಳ ಪೂರ್ತಿ ರಿಯಾಯಿತಿ ಕೊಡುಗೆಗಳು ಇರಲಿದ್ದು, ನಿಮ್ಮ ಬಜೆಟ್ ಗೆ ಸೂಕ್ತವೆನಿಸಿರುವ ಸ್ಕೂಟರ್ ಗಳನ್ನು ಖರೀದಿಸಿ. ಅಲ್ಲದೆ, ಮಾರ್ಚ್ 11ರೊಳಗೆ ಮಹಿಳಾ ಗ್ರಾಹಕರಿಗೆ ರೂ.ರೂ.2,000 ಹೆಚ್ಚುವರಿ ರಿಯಾಯಿತಿ ದೊರೆಯಲಿದ್ದು, ಒಟ್ಟು ರೂ.14,000 ಡಿಸ್ಕೌಂಟ್ ಸಿಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, March 8, 2023, 12:40 [IST]
English summary
Joy e bike special offers holi international women s day details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+