344 ಕಿ.ಮೀ ರೇಂಜ್, ಆಕರ್ಷಕ ಬೆಲೆಯಲ್ಲಿ ಬರಲಿದೆ ಹೊಸ ಕಬೀರಾ KM5000 ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕಬೀರಾ ಮೊಬಿಲಿಟಿ ತನ್ನ ಫ್ಲ್ಯಾಗ್‌ಶಿಪ್ ಎಲೆಕ್ಟ್ರಿಕ್ ಬೈಕ್ KM5000 ಅನ್ನು ಅನಾವರಣಗೊಳಿಸಿದೆ .ಹೊಸ ಕಬೀರಾ KM5000 ಎಲೆಕ್ಟ್ರಿಕ್ ಬೈಕ್ 188 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದ್ದು. ಈ ಎಲೆಕ್ಟ್ರಿಕ್ ಬೈಕ್ ಸಿಂಗಲ್ ಚಾರ್ಜ್‌ನಲ್ಲಿ ಬರೊಬ್ಬರಿ 344 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಕಬೀರಾ ಮೊಬಿಲಿಟಿ ಕಂಪನಿಯು ತನ್ನ ಈ KM5000 ಎಲೆಕ್ಟ್ರಿಕ್ ಬೈಕ್ ಔಪಚಾರಿಕವಾಗಿ ಈ ವರ್ಷದ ಕೊನೆಯಲ್ಲಿ ಬೈಕ್ ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. ಈ ಹೊಸ ಕಬೀರಾ KM5000 ಎಲೆಕ್ಟ್ರಿಕ್ ಬೈಕ್ 2024 ರಲ್ಲಿ ವಿತರಣೆಯಾಗುವ ಸಾಧ್ಯತೆಗಳಿದೆ, ಈ ಹೊಸ ಹೊಸ ಕಬೀರಾ KM5000 ಎಲೆಕ್ಟ್ರಿಕ್ ಬೈಕ್ ಮಿಡ್‌ನೈಟ್ ಗ್ರೇ, ಡೀಪ್ ಖಾಕಿ ಮತ್ತು ಅಕ್ವಾಮರೀನ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

Kabira KM5000

ಈ ಹೊಸ ಕಬೀರಾ KM5000 ಎಲೆಕ್ಟ್ರಿಕ್ ಬೈಕ್ ಬೈಕ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3,15,000 ಆಗಿರಬಹುದು. ಈ ವರ್ಷದ ಕೊನೆಯಲ್ಲಿ ಬೈಕ್ ಬಿಡುಗಡೆಯಾಗುವ ವೇಳೆ ಈ ಬೈಕಿನ ಬೆಲೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. KM5000 ಎರಡು ವಿಧದ ಚಾರ್ಜಿಂಗ್ ಆಯ್ಕೆಗಳೊಂದಿಗೆ ಬರುತ್ತದೆ: ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ವಾಹನವನ್ನು 0 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದಾದ ಹೈ-ಸ್ಪೀಡ್ ಬೂಸ್ಟ್ ಚಾರ್ಜರ್ ಆಗಿದೆ.

ಇನ್ನು ರಾತ್ರಿಯ ಚಾರ್ಜಿಂಗ್‌ಗೆ ಸ್ಟ್ಯಾಂಡರ್ಡ್ ಚಾರ್ಜರ್ ಎಂದು ಕಂಪನಿ ಹೇಳಿದೆ. ಇನ್ನು ಗೋವಾ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟಪ್ ತನ್ನ ಮೊದಲ ಇ-ಬೈಕ್‌ಗಳಾದ KM3000 ಮತ್ತು KM4000 2021ರ ಫೆಬ್ರವರಿ ತಿಂಗಳುಗಳಲ್ಲಿ ಬಿಡುಗಡೆ ಮಾಡಿತು. ಕಬೀರಾ KM5000 ಎಲೆಕ್ಟ್ರಿಕ್ ಬೈಕ್ 11.6 kWh ವಾಟರ್-ಕೂಲ್ಡ್ LFP ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಂಡಿದೆ, ಬೈಕು ಸಿಂಗಲ್ ಚಾರ್ಜ್‌ನಲ್ಲಿ 344 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಹೊಸ ಕಬೀರಾ KM5000 ಎಲೆಕ್ಟ್ರಿಕ್ ಬೈಕ್ 4G ಕನೆಕ್ಟಿವಿಟಿಯೊಂದಿಗೆ 7-ಇಂಚಿನ ಸ್ಮಾರ್ಟ್ ಟಚ್ ಸ್ಕ್ರೀನ್ ಡಿಜಿಟಲ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ, ಇನ್ನು ಈ ಬೈಕ್ ಡ್ಯಾಶ್‌ಬೋರ್ಡ್ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್ ನೀಡುತ್ತದೆ ಮತ್ತು ಸವಾರರಿಗೆ ಆಳವಾದ ವಾಹನ ಮಾಹಿತಿ ಮತ್ತು ಸವಾರಿ ಅಭ್ಯಾಸಗಳನ್ನು ಒದಗಿಸುತ್ತದೆ. ಡ್ಯಾಶ್‌ಬೋರ್ಡ್ ಬ್ಯಾಟರಿ ಆರೋಗ್ಯ ಮತ್ತು ಮಾಹಿತಿಯನ್ನು ಸಹ ಪ್ರದರ್ಶಿಸುತ್ತದೆ.

ಇದರೊಂದಿಗೆ ಸ್ಮಾರ್ಟ್ ಡಯಾಗ್ನೋಸ್ಟಿಕ್ಸ್ ಫೀಚರ್ ಅನ್ನು ಹೊಂದಿದ್ದು, ಇದು ವಾಹನವನ್ನು ಪರಿಪೂರ್ಣ ಸ್ಥಿತಿಯಲ್ಲಿ ಇರಿಸಿಕೊಳ್ಳಲು ಸವಾರನಿಗೆ ಅನುವು ಮಾಡಿಕೊಡುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಡ್ಯುಯಲ್ ಚಾನೆಲ್ ABS ನೊಂದಿಗೆ ಟ್ವಿನ್ ಫ್ರಂಟ್ ಮತ್ತು ಸಿಂಗಲ್ ರಿಯರ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದ್ದು, ಸುಧಾರಿತ ಸುರಕ್ಷತೆ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ. ಬೈಕ್‌ನಲ್ಲಿ ನೈಟ್ರಾಕ್ಸ್ ಹಿಂಬದಿ ಸಸ್ಪೆನ್ಷನ್‌ಗಳು ಮತ್ತು ಶೋವಾದಿಂದ ಇನ್ವರ್ಟೆಡ್ ಫ್ರಂಟ್ ಫೋರ್ಕ್‌ಗಳನ್ನು ಅಳವಡಿಸಲಾಗಿದೆ.

ಕಬೀರಾ ಮೊಬಿಲಿಟಿ ಕಂಪನಿಯ ಸಿಇಒ ಜೈಬೀರ್ ಸಿವಾಚ್ ಅವರು ಮತನಾಡಿ, ಎಲೆಕ್ಟ್ರಿಕ್ ಬೈಕ್ ವಿಭಾಗದಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂಬುದರ ಪಟ್ಟಿಯನ್ನು ನಾವು ನಿರಂತರವಾಗಿ ಹೆಚ್ಚಿಸುತ್ತಿದ್ದೇವೆ. KM5000 ಎಲೆಕ್ಟ್ರಿಕ್ ಬೈಕ್‌ಗಳು ಈಗ ಸರಿಸಮಾನವಾಗಿವೆ ಎಂಬ ನಮ್ಮ ನಂಬಿಕೆಗೆ ಸಾಕ್ಷಿಯಾಗಿದೆ, ಕಾರ್ಯಕ್ಷಮತೆ ಮತ್ತು ಸುರಕ್ಷತೆಯ ವಿಷಯದಲ್ಲಿ ICE ಕೌಂಟರ್‌ಪಾರ್ಟ್‌ಗಳಿಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಕಬೀರಾ ಮೊಬಿಲಿಟಿ ಹಲವಾರು ಹೊಸ ಮಾದರಿಗಳನ್ನು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಶೀಘ್ರದಲ್ಲೇ ತರಲಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕಂಪನಿಯು ಎಲೆಕ್ಟ್ರಿಕ್ ಬೈಕಿನ ಕಾನ್ಫಿಗರೇಶನ್‌ಗಳ ಜೊತೆಗೆ, ಕಬಿರಾ ಮೊಬಿಲಿಟಿಯು ಬಳಕೆದಾರರಿಗೆ ತಮ್ಮ ಸವಾರಿಯನ್ನು ಇನ್ನಷ್ಟು ಕಸ್ಟಮೈಸ್ ಮಾಡಲು ಅಕ್ಸೆಸರೀಸ್ ಗಳನ್ನು ಸಹ ಪ್ರಾರಂಭಿಸುತ್ತದೆ. ಒಟ್ಟಿನಲ್ಲಿ ಕಬೀರಾ ಮೊಬಿಲಿಟಿ ಎಲೆಕ್ಟ್ರಿಕ್ ಬಿಭಾಗದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗುತ್ತಿದೆ.

More from DriveSpark

Article Published On: Saturday, May 20, 2023, 8:40 [IST]
English summary
Kabira km5000 cruiser electric bike unveiled range details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+