'KM5000' ಎಲೆಕ್ಟ್ರಿಕ್ ಬೈಕ್ ಬರುತ್ತೆ: 330 ಕಿ.ಮೀ ರೇಂಜ್.. ಕರ್ನಾಟಕದಲ್ಲೇ ಉತ್ಪಾದನೆ!

ಕಬೀರಾ ಮೊಬಿಲಿಟಿ 'KM5000' ಎಲೆಕ್ಟ್ರಿಕ್ ಬೈಕ್‌ನ್ನು ಭಾರತದ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳು ಅನಾವರಣ ಮಾಡಲಿದೆ. ಈ ಎಲೆಕ್ಟ್ರಿಕ್ ಬೈಕ್, ಸಂಪೂರ್ಣ ಚಾರ್ಜ್‌ನಲ್ಲಿ ಅತ್ಯಂತ ಗರಿಷ್ಠ ರೇಂಜ್ ನೀಡುವ ಸಾಮರ್ಥ್ಯವನ್ನು ಪಡೆದಿದ್ದು, ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಈ ನೂತನ ಬೈಕ್, ಇವತ್ತಿನ ಯುವ ಜನರು ಇಷ್ಟಪಡುವಂತಹ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿದ್ದು, ಹಿಂದಿನ ಮಾದರಿಗಳಾದ KM4000, KM3000 ಹೋಲಿಕೆ ಮಾಡಿದರೆ, ಗರಿಷ್ಠ ರೇಂಜ್ ನೀಡುವ ಸಾಮರ್ಥ್ಯ ಪಡೆದುಕೊಂಡಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 330 ಕಿ.ಮೀ ಪ್ರಯಾಣಿಸಬಹುದು. ಕಡಿಮೆ ಬೆಲೆಯ KM5000 ಎಲೆಕ್ಟ್ರಿಕ್ ಬೈಕ್, ಟಾಟಾದ ಟಿಯಾಗೊ ಇವಿಗಿಂತ (ಬ್ಯಾಟರಿ ಪ್ಯಾಕ್ ಅನುಗುಣವಾಗಿ 250 ಕಿ.ಮೀ, 315 ಕಿಮೀ) ಹೆಚ್ಚಿನ ರೇಂಜ್ ಕೊಡಲಿದೆ.

KM5000 ಎಲೆಕ್ಟ್ರಿಕ್ ಬೈಕ್ ಬರುತ್ತೆ: ಸಂಪೂರ್ಣ ಚಾರ್ಜ್‌ನಲ್ಲಿ 330 ಕಿ.ಮೀ ರೇಂಜ್.. ಕರ್ನಾಟಕದಲ್ಲೇ ಉತ್ಪಾದನೆ?

KM5000 ಎಲೆಕ್ಟ್ರಿಕ್ ಬೈಕ್, 8.1 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, 0 - 80% ಚಾರ್ಜ್ ಆಗಲು ಕೇವಲ ಎರಡು ಗಂಟೆ ತೆಗೆದುಕೊಳ್ಳಬಹುದು. ಅಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳಲು ಕಬೀರಾ ಮೊಬಿಲಿಟಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಕತಾರ್ ಮೂಲದ 'ಅಲ್ ಅಬ್ದುಲ್ಲಾ' ಗ್ರೂಪ್‌ನಿಂದ 50 ಮಿಲಿಯನ್ ಡಾಲರ್ (ರೂ.412 ಕೋಟಿ) ಬಂಡವಾಳ ಹೂಡಿಕೆಯನ್ನು ಪಡೆಯಲಾಗಿದೆ ಎಂದು ಕಂಪನಿ ಘೋಷಿಸಿದೆ.

ಇದರಿಂದ ಭಾರತದಲ್ಲಿ ಕಬೀರಾ ಮೊಬಿಲಿಟಿ ಮಾರಾಟ ಮಾಡುವ ಎಲೆಕ್ಟ್ರಿಕ್ ಬೈಕ್‌ಗಳಾದ KM3000, KM4000 ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಜೊತೆಗೆ ಮುಂಬರಲಿರುವ KM5000 ಬೈಕ್ ತಯಾರಿಕೆ ಹಾಗೂ ಮಾರಾಟಕ್ಕೂ ಸಹಾಯವಾಗುತ್ತದೆ. ಕಂಪನಿಯು ಧಾರವಾಡದ ಸಮೀಪ ಉತ್ಪಾದನಾ ಘಟಕವನ್ನು ಹೊಂದಿದ್ದು, ತಿಂಗಳಿಗೆ 40,000 ಯುನಿಟ್ ಎಲೆಕ್ಟ್ರಿಕ್ ಬೈಕ್ ರೆಡಿ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಬಹುತೇಕ ನೂತನ KM5000 ಎಲೆಕ್ಟ್ರಿಕ್ ಬೈಕ್ ಇಲ್ಲೇ ತಯಾರಾಗಬಹುದು.

ಈ ಬಗ್ಗೆ ಮಾತನಾಡಿರುವ ಕಬೀರಾ ಮೊಬಿಲಿಟಿ ಸಿಇಒ ಜೈಬಿರ್ ಸಿವಾಚ್ ಅವರು, 'ಕಂಪನಿಯು 50 ಮಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಿದ್ದು, ಧಾರವಾಡದಲ್ಲಿರುವ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ತಿಂಗಳಿಗೆ 60,000 ಯುನಿಟ್‌ಗಳಿಗೆ ಹೆಚ್ಚಿಸಲಾಗುವುದು. ಭಾರತದಾದ್ಯಂತ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಉತ್ತರ ಪ್ರದೇಶದ ಜೇವಾರ್ ಸಮೀಪ ಮಾಸಿಕ 1.25 ಲಕ್ಷ ಯುನಿಟ್‌ ಬೈಕ್ ತಯಾರಿಸಲು ಸಾಧ್ಯವಾಗುವಂತಹ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸ್ಥಳವನ್ನು ಹುಡುಕುತ್ತಿದ್ದೇವೆ ಎಂದು ಹೇಳಿದ್ದಾರೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ KM4000 ಬೈಕ್ ಕುರಿತು ಮಾತನಾಡುವುದಾದರೆ, ಇದು ರೂ.1.37 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. 4.3 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಈ ಎಲೆಕ್ಟ್ರಿಕ್ ಬೈಕ್, 8kW BLDC ಮೋಟಾರ್ ನಿಂದ ಕಾರ್ಯನಿರ್ವಹಿಸಲಿದ್ದು, ಇಕೋ ಮೋಡ್ ನಲ್ಲಿ 150 km, ಸಿಟಿ ಮೋಡ್ ನಲ್ಲಿ 110 km ಹಾಗೂ ಸ್ಪೋರ್ಟ್ ಮೋಡ್ ನಲ್ಲಿ 90 km ರೇಂಜ್ ನೀಡಲಿದೆ. 120 kmph ಟಾಪ್ ಸ್ವೀಡ್ ಹೊಂದಿದೆ.

KM3000 ಎಲೆಕ್ಟ್ರಿಕ್ ಬೈಕ್, ರೂ.1.23 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದ್ದು, ಇಕೋ ಮೋಡ್ ನಲ್ಲಿ 120 km, ಸಿಟಿ ಮೋಡ್ ನಲ್ಲಿ 95 km ಹಾಗೂ ಸ್ಪೋರ್ಟ್ ಮೋಡ್ ನಲ್ಲಿ 60 km ರೇಂಜ್ ನೀಡಲಿದೆ.100 kmph ಟಾಪ್ ಸ್ವೀಡ್ ಹೊಂದಿದೆ. ಕೇವಲ 3.3 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದೆ. ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಕಬೀರಾ ಮೊಬಿಲಿಟಿಯ KM5000 ಬೈಕ್ ಬಹುತೇಕ ಮುಂದಿನ ತಿಂಗಳು ಭಾರತದ ಮಾರುಕಟ್ಟೆಗೆ ಬರಲಿದೆ. ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಯುಗಾರಂಭವಾಗುತ್ತಿದ್ದು, ಹೆಚ್ಚಿನ ಯುವಕರು ಇಷ್ಟಪಟ್ಟು ಈ ಎಲೆಕ್ಟ್ರಿಕ್ ಬೈಕ್ ಖರೀದಿಸಬಹುದು. ಇದು ಕಡಿಮೆ ಬೆಲೆಯಲ್ಲಿಯೇ 330 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯ ಹೊಂದಿದ್ದು, KM3000, KM4000 ಎಲೆಕ್ಟ್ರಿಕ್ ಬೈಕ್ ಗಳಿಗಿಂತ ಎರಡುಪಟ್ಟು ಹೆಚ್ಚು ಎಂದೇ ಬಿಂಬಿಸಲಾಗಿದೆ. ಬಿಡುಗಡೆಯಾದ ಮೇಲೆ ಎಷ್ಟರಮಟ್ಟಿಗೆ ಗ್ರಾಹಕರನ್ನು ಆಕರ್ಷಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

More from DriveSpark

Article Published On: Saturday, March 18, 2023, 10:40 [IST]
English summary
Kabira mobility km 5000 electric bike unveil details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+