ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಸೂಪರ್ ಮೆಟಿಯರ್ 650 ಪ್ರತಿಸ್ಪರ್ಧಿ ಕವಾಸಕಿ ಎಲಿಮಿನೇಟರ್ 400
ಈ ಹಿಂದೆ ಕವಾಸಕಿ-ಬಜಾಜ್‌ನ ಜಂಟಿ ಉದ್ಯಮದಲ್ಲಿ ಭಾರತದಲ್ಲಿ ಎಲಿಮಿನೇಟರ್ 175 ಕ್ರೂಸರ್ ಬೈಕ್‌ಗಳನ್ನು ಮಾರಾಟ ಮಾಡಲಾಗಿದೆ. ಇದು ಭಾರತದಲ್ಲಿ ತಯಾರಾದ ಕ್ರೂಸರ್ ಮೋಟಾರ್‌ಸೈಕಲ್ ಆಗಿದ್ದು, ಜಾಗತಿಕ ಮಾರುಕಟ್ಟೆಗಳಿಗೂ ರಫ್ತು ಮಾಡಲಾಗಿತ್ತು. ಬಜಾಜ್ ಎಲಿಮಿನೇಟರ್ ಪ್ರಸ್ತುತ ಅವೆಂಜರ್ ಹೆಸರಿನಲ್ಲಿ ಮಾರಾಟವಾಗುವ ಮೋಟಾರ್‌ಸೈಕಲ್‌ಗೆ ಆಧಾರವಾಗಿದೆ.
ಇತ್ತೀಚಿಗಿನ ಕವಾಸಕಿಯ ಟೀಸರ್‌ಗಳನ್ನು ಗಮನಿಸಿದರೆ, ಜಪಾನಿನ ಬ್ರ್ಯಾಂಡ್ ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸುವ ಸುಳಿವು ನೀಡುತ್ತಿದೆ. ಅವುಗಳಲ್ಲಿ ಒಂದು ಕಡಿಮೆ-ಸ್ಲಂಗ್ ಕ್ರೂಸರ್ ಆಗಿದೆ. ಕವಾಸಕಿ ಎಲಿಮಿನೇಟರ್ ಅನ್ನು ಮತ್ತೆ ಮಾರುಕಟ್ಟೆಗೆ ತರುವ ಊಹಾಪೋಹಗಳೂ ಇವೆ. ಈ ಬಗ್ಗೆ ಒಂದು ಕಣ್ಣಾಯಿಸೋಣ, 2023 ಒಸಾಕಾ ಮೋಟಾರ್ ಶೋ ಇದೇ ಮಾರ್ಚ್ 15 ರಂದು ಜಪಾನ್‌ನಲ್ಲಿ ನಡೆಯಲಿದೆ. ಕವಾಸಕಿ ತಯಾರಕರು ತಮ್ಮ ಮುಂಬರುವ ಉತ್ಪನ್ನಗಳು ಯಾವುದಾದರೂ ಇದ್ದರೆ ಇಲ್ಲಿ ಪ್ರದರ್ಶಿಸಲಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಕವಾಸಕಿಯ ಮೊದಲ ಟೀಸರ್ ಮೂರು ಮೋಟಾರ್ ಸೈಕಲ್‌ಗಳನ್ನು ತೋರಿಸಿದ್ದು, ಇದರಲ್ಲಿ ZX-4RR, ADV ಮತ್ತು ಕ್ರೂಸರ್ ಮೋಟಾರ್‌ಸೈಕಲ್ ಇವೆ. ಕವಾಸಕಿಯ ಎರಡನೇ ಟೀಸರ್ ಒಸಾಕಾ ಮೋಟಾರ್ ಶೋನಲ್ಲಿ ಮುಸುಕು ಹಾಕಿರುವ ಮೋಟಾರ್‌ಸೈಕಲ್‌ಗಳನ್ನು ತೋರಿಸಲಿದೆ. ನಮಗೆ ತಿಳಿದಿರುವಂತೆ ವೃತ್ತಾಕಾರದ ORVM ಗಳು, ಟೈಲ್ ಲೈಟ್‌ಗಳು ಮತ್ತು ಅದರ ಹ್ಯಾಂಡಲ್‌ಬಾರ್ ಮತ್ತು ಹಿಂಭಾಗದ ಸಬ್‌ಫ್ರೇಮ್ ನಡುವಿನ ಎತ್ತರ ವ್ಯತ್ಯಾಸವನ್ನು ನೋಡಿದರೆ, ಇದು ಕ್ರೂಸರ್ ಬೈಕ್ ಆಗಿರಬಹುದು ಎಂದು ಸೂಚಿಸುತ್ತಿದೆ.
90 ರ ದಶಕದಿಂದ ಕವಾಸಕಿಯ ಶ್ರೇಣಿಯ ಜನಪ್ರಿಯ ಸರಣಿ:
90 ರ ದಶಕದಿಂದ ಕವಾಸಕಿಯ ಶ್ರೇಣಿಯ ಜನಪ್ರಿಯ ಸರಣಿಗಳಲ್ಲಿ ಎಲಿಮಿನೇಟರ್ ಒಂದಾಗಿದೆ. ಇದು ಕ್ರೂಸರ್ ಮಾದರಿಯ ಮೋಟಾರ್‌ಸೈಕಲ್ ಆಗಿತ್ತು, ಇದನ್ನು ಮೊದಲು 1985 ರಲ್ಲಿ ಮಾರಾಟ ಮಾಡಲಾಯಿತು. ಈ ಮಾದರಿಯನ್ನು ಎಲಿಮಿನೇಟರ್ 900 ನೊಂದಿಗೆ ಪ್ರಾರಂಭಿಸಲಾಗಿತ್ತು. ಶೀಘ್ರದಲ್ಲೇ ಹಿಟ್ ಆದ ಕಾರಣ 125 cc ಮಾಡೆಲ್‌ಗಳಿಂದ 1000 cc ಮಾದರಿಗಳವರೆಗೆ ಬಹು ಎಂಜಿನ್‌ಗಳನ್ನು ಹುಟ್ಟುಹಾಕಿತು.

ಮಾದರಿ ಶ್ರೇಣಿಯು EL125, EL175 (ಭಾರತದಲ್ಲಿ ಬಜಾಜ್ ಎಲಿಮಿನೇಟರ್), EL250, VN250, ZL400, ZL600, ZL750, ZL900 ಮತ್ತು ZL1000 ಅನ್ನು ಒಳಗೊಂಡಿದೆ. ಹೆಚ್ಚಾಗಿ, ಎಲಿಮಿನೇಟರ್ ಸರಣಿಯಲ್ಲಿ ಕವಾಸಕಿ ತನ್ನ ನಿಂಜಾ ಕೌಂಟರ್ ಪಾರ್ಟ್ ಗಳಿಂದ ಎಂಜಿನ್‌ಗಳನ್ನು ಬಳಸಿದೆ. ಇಂದು, ಕವಾಸಕಿ ಮಧ್ಯಮ ತೂಕದ ಕ್ರೂಸರ್ ಅನ್ನು ವಲ್ಕನ್ ಎಸ್ ರೂಪದಲ್ಲಿ ರೂ. 6.4 ಲಕ್ಷ (ಎಕ್ಸ್ ಶೋ ರೂಂ) ಮಾರಾಟ ಮಾಡುತ್ತಿದೆ.
ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ:
ಕವಾಸಕಿ ಎಲಿಮಿನೇಟರ್ 400 ನೈಜವಾಗಿದ್ದರೇ, ಸೂಪರ್ ಮೆಟಿಯರ್ 650 ವಿರುದ್ಧ ಇದು ಸೂಕ್ತವಾದ ಪ್ರತಿಸ್ಪರ್ಧಿಯಾಗಬಹುದು. ಕವಾಸಕಿಯು ನಿಂಜಾ 400 ನಂತೆಯೇ ಅದೇ ಎಂಜಿನ್ ಅನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ. ಇದು 399 cc ಪ್ಯಾರಲಲ್-ಟ್ವಿನ್ ಮೋಟಾರ್ ಪ್ಯಾಕಿಂಗ್ 44.7 bhp ಮತ್ತು 37 ಎನ್ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಇದಕ್ಕೆ ವಿರುದ್ಧವಾಗಿ, RE ನ 648 cc ಸಮಾನಾಂತರ ಟ್ವಿನ್ ಎಂಜಿನ್ 47 bhp ಮತ್ತು 52 Nm ಟಾರ್ಕ್ ಹೊರ ಹಾಕುತ್ತದೆ.
ನಿಂಜಾ 400 ಕೇವಲ 168 ಕೆ.ಜಿ ತೂಗುತ್ತದೆ ಎಂದು ಪರಿಗಣಿಸಿದರೆ, ಕವಾಸಕಿ ಎಲಿಮಿನೇಟರ್ 400 ಸುಮಾರು 200 ಕೆ.ಜಿ ತೂಗುವ ಸಾಧ್ಯತೆಯಿದೆ. ಇದು ಸೂಪರ್ ಮೆಟಿಯರ್ 650 ನ 240 ಕೆ.ಜಿಗಿಂತ ಕಡಿಮೆಯಾಗಿದೆ. ಕಡಿಮೆ ತೂಕದ ಜೊತೆಗೆ, ಎಲಿಮಿನೇಟರ್ ಸಂಪೂರ್ಣ ಪ್ರದರ್ಶನದಲ್ಲಿ ಸೂಪರ್ ಮೆಟಿಯರ್ 650 ಅನ್ನು ಸೋಲಿಸಬಹುದು. ಕ್ರೂಸರ್ ಪಾತ್ರಕ್ಕೆ ಸರಿಹೊಂದುವಂತೆ ಎಂಜಿನ್ ಅನ್ನು ಟ್ಯೂನ್ ಮಾಡುವುದು ಸಹ ಅತ್ಯಗತ್ಯವಾಗಿದೆ.


Click it and Unblock the Notifications








