Kinetic Zulu: ಮರುಕಳಿಸುತ್ತಾ ಗತವೈಭವ.. ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಬೆಲೆ ತುಂಬಾ ಕಡಿಮೆ!
ಭಾರತದಲ್ಲಿ ಒಂದು ಕಾಲದಲ್ಲಿ 'ಕೈನೆಟಿಕ್ ಸ್ಕೂಟರ್‌ಗಳು' ಉತ್ತುಂಗ ಸ್ಥಿತಿಯಲ್ಲಿದ್ದವು. ಕಾಲ ಕಳೆದಂತೆ ಹೊಸ ಸ್ಕೂಟರ್‌ಗಳ ತೀವ್ರ ಸ್ಪರ್ಧೆಯಿಂದ ಮಾರುಕಟ್ಟೆಯಿಂದ ದೂರವಾದವು. ಈಗಲೂ 90ರ ದಶಕದವರ ನೆಚ್ಚಿನ ದ್ವಿಚಕ್ರ ವಾಹನಗಳಾಗಿ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಮತ್ತೆ ಕೈನೆಟಿಕ್ ಸ್ಕೂಟರ್ ಎಲೆಕ್ಟ್ರಿಕ್ ಅವತಾರದಲ್ಲಿ ಬಂದಿದೆ.
ಪುಣೆ - ಮೂಲದ ಕೈನೆಟಿಕ್ ಗ್ರೀನ್ (Kinetic Green) ಸೋಮವಾರ ದೇಶೀಯ ಮಾರುಕಟ್ಟೆಯಲ್ಲಿ ಜುಲು ಎಲೆಕ್ಟ್ರಿಕ್ ಸ್ಕೂಟರ್ (Zulu electric scooter) ಅನ್ನು ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ರೂ.94,990 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಆಸಕ್ತ ಗ್ರಾಹಕರು ಅಧಿಕೃತ ವೆಬ್‌ಸೈಟ್ ಅಥವಾ ಕಂಪನಿಯ ಡೀಲರ್‌ಶಿಪ್‌ಗಳ ಮೂಲಕ ಈ ಸ್ಕೂಟರ್‌ನ್ನು ಬುಕ್ಕಿಂಗ್ ಮಾಡಬಹುದು.

ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್, 2.27 kWh ಸಾಮರ್ಥ್ಯದ ಲಿಥಿಯಂ - ಐಯಾನ್ (Lithium - ion) ಬ್ಯಾಟರಿ ಪ್ಯಾಕ್ ಹೊಂದಿದೆ. ಇದರಲ್ಲಿ ಉಪಯೋಗ ಮಾಡಲಾಗಿರುವ ಹಬ್ ಎಲೆಕ್ಟ್ರಿಕ್ ಮೋಟಾರ್ (Hub - Electric Motor), 2.8 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ನೂತನ ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ (Kinetic Zulu electric scooter) ಸಂಪೂರ್ಣ ಚಾರ್ಜ್ ನಲ್ಲಿ 104 ಕಿಲೋಮೀಟರ್ (km) ರೇಂಜ್ ನೀಡಲಿದ್ದು, 60 kmph ಟಾಪ್ ಸ್ವೀಡ್ ಹೊಂದಿದೆ. 15 - ಎಎಂಪಿ ಸಾಕೆಟ್ ಬಳಕೆಯಲ್ಲಿ ಇದರ ಬ್ಯಾಟರಿ ಪ್ಯಾಕ್ ಅರ್ಧ ಗಂಟೆಯಲ್ಲಿ ಶೇಕಡ 80% ಚಾರ್ಜ್ ಆಗುತ್ತದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಮುಖ್ಯವಾಗಿ, ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ DRL, ಡಿಜಿಟಲ್ ಸ್ಪೀಡೋಮೀಟರ್ (Digital Speedometer) ಆಟೋ - ಕಟ್ ಚಾರ್ಜರ್, ಸೈಡ್ ಸ್ಟ್ಯಾಂಡ್ ಸೆನ್ಸರ್, ಬೂಟ್ ಲೈಟ್ ಸೇರಿದ್ದು, ಇವುಗಳೊಂದಿಗೆ ಹಲವು ಅತ್ಯಾಧುನಿಕ ಫೀಚರ್ಸ್ ಕೂಡ ಇವೆ.
ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ಸುತ್ತಳತೆ ಬಗ್ಗೆ ಹೇಳುವುದಾದರೆ, 1,830 ಎಂಎಂ ಉದ್ದ, 715 ಎಂಎಂ ಅಗಲ, 1,135 ಎಂಎಂ ಎತ್ತರವನ್ನು ಹೊಂದಿದೆ. 1,360 ಎಂಎಂ ಅಳತೆಯ ವೀಲ್ ಬೇಸ್ ಅನ್ನು ಪಡೆದಿದ್ದು, 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಒಳಗೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 93 ಕೆಜಿ ತೂಕವಿದ್ದು, 150 ಕೆಜಿ ವರೆಗೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ತಿಳಿಯುವುದಾದರೆ, ಇದು ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಫ್ರಂಟ್ ಫೋರ್ಕ್ಸ್ ಮತ್ತು ರೇರ್ ಡ್ಯುಯಲ್ ಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಪಡೆದಿದೆ. ಈ ಸ್ಕೂಟರ್, ಓಲಾ ಹಾಗೂ ಓಕಿನಾವಾ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿಯೇ ಈ ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್‌ಗಳು ತಯಾರಾಗಲಿದ್ದು, 2024ರ ಆರಂಭದಲ್ಲಿ ವಿತರಣೆ ಶುರುವಾಗಲಿದೆ. ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಕೈನೆಟಿಕ್ ಕಂಪನಿ ತಿಳಿಸಿದೆ. ಇದು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬಂದರೂ ಅಚ್ಚರಿಯಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








