ಅಗ್ನಿ ನಿರೋಧಕ ಬ್ಯಾಟರಿ.. ಒಳ್ಳೆ ರೇಂಜ್: ನವೀಕರಿಸಿದ 'ಕೊಮಾಕಿ TN 95 ಸ್ಪೋರ್ಟ್‌' ಇ-ಸ್ಕೂಟರ್ ಬಿಡುಗಡೆ

ಭಾರತದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (ಇವಿ) ಜನಪ್ರಿಯತೆ ಗಳಿಸುತ್ತವೆ. ಅದರಲ್ಲೂ ಸ್ಕೂಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಈ ತಿಂಗಳು ಸಾಲು ಸಾಲು ಇವಿಗಳು ಬಿಡುಗಡೆಯಾಗಿವೆ. ಇದೀಗ, ಕೊಮಾಕಿ ಕಂಪನಿ ಸಹ ಹೊಸ ಸೇರ್ಪಡೆಯಾಗಿದೆ. ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.

ದೇಶೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಮುನ್ನೆಲೆಗೆ ಬರುತ್ತಿರುವ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಕೊಮಾಕಿ, ಕಡಿಮೆ ಬೆಲೆಯಲ್ಲಿ ನವೀಕರಿಸಿದ 'TN 95 ಸ್ಪೋರ್ಟ್‌' ಇ-ಸ್ಕೂಟರ್ ಬಿಡುಗಡೆ ಮಾಡಿದೆ. ಗರಿಷ್ಠ 150 ಕಿಲೋಮೀಟರ್ ರೇಂಜ್ ನೀಡುವ ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.31 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. 180 ಕಿಮೀ ರೇಂಜ್ ಕೊಡುವ ಅಡ್ವಾನ್ಸ್ಡ್ ವೇರಿಯೆಂಟ್ ರೂ.1.4 ಲಕ್ಷ ದರವನ್ನು ಪಡೆದಿದೆ.

ಅಗ್ನಿ ನಿರೋಧಕ ಬ್ಯಾಟರಿ.. ಒಳ್ಳೆ ರೇಂಜ್: ನವೀಕರಿಸಿದ ಕೊಮಾಕಿ TN 95 ಸ್ಪೋರ್ಟ್‌ ಇ-ಸ್ಕೂಟರ್ ಬಿಡುಗಡೆ

ಈ ಹೊಸ ಕೊಮಾಕಿ TN 95 ಸ್ಪೋರ್ಟ್‌ ಎಲೆಕ್ಟ್ರಿಕ್ ಸ್ಕೂಟರ್ ಯಾವೆಲ್ಲ ನವೀಕರಣಗಳನ್ನು ಪಡೆದುಕೊಂಡಿದೆ ಎಂಬುದನ್ನು ನೋಡುವುದಾದರೆ, ಇದು ಆಂಟಿ ಸ್ಕಿಡ್ ಟೆಕ್ನಾಲಜಿ, ಅಪ್‌ಗ್ರೇಡ್ ಮಾಡಲಾದ ಅಪ್ಲಿಕೇಶನ್ ಆಧಾರಿತ ಸ್ಮಾರ್ಟ್ ಬ್ಯಾಟರಿಯನ್ನು ಹೊಂದಿದೆ. ಜೊತೆಗೆ ಇದರಲ್ಲಿ ಉಪಯೋಗ ಮಾಡಲಾಗಿರುವ ಬ್ಯಾಟರಿ ಅಗ್ನಿ ನಿರೋಧಕವಾಗಿದೆ (fire-resistant). ಇದೇ ಈ ನೂತನ ಸ್ಕೂಟರ್ ಹೈಲೆಟ್ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸ್ಕೂಟರ್ ಗಳು ಪಡೆದಿರುವಂತೆ ಈ ಕೊಮಾಕಿ TN 95 ಸ್ಪೋರ್ಟ್‌ ಕೂಡ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ TFT ಸ್ಕ್ರೀನ್, ಆನ್ ಬೋರ್ಡ್ ನ್ಯಾವಿಗೇಶನ್, ವೈರ್ ಲೆಸ್ ಕಂಟ್ರೋಲ್, ಬ್ಲೂಟೂತ್, ಆನ್ ರೈಡ್ ಕಾಲಿಂಗ್ ಫೆಸಿಲಿಟಿ ಹಾಗೂ ಸೌಂಟ್ ಸಿಸ್ಟಮ್ ಕಂಟ್ರೋಲ್ ಅನ್ನು ಪಡೆದಿದೆ.

ಅಗ್ನಿ ನಿರೋಧಕ ಬ್ಯಾಟರಿ.. ಒಳ್ಳೆ ರೇಂಜ್: ನವೀಕರಿಸಿದ ಕೊಮಾಕಿ TN 95 ಸ್ಪೋರ್ಟ್‌ ಇ-ಸ್ಕೂಟರ್ ಬಿಡುಗಡೆ

ಕೊಮಾಕಿ TN 95 ಸ್ಪೋರ್ಟ್‌ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಇದು ಹೊಸದಾದ ಎಲ್ಇಡಿ DRL ಹಾಗೂ ಡುಯೆಲ್ ಎಲ್ಇಡಿ ಹೆಡ್ ಲ್ಯಾಂಪ್ ಪಡೆದಿದೆ. ಇದಿಷ್ಟೇ ಅಲ್ಲದೆ, ಈ ಸ್ಕೂಟರ್ ಬ್ಯಾಟರಿ ಪ್ಯಾಕ್ ಶೇಕಡ 0-100% ಚಾರ್ಜ್ ಆಗಲು 5 ಗಂಟೆಬೇಕು. ಜೊತೆಗೆ ಪಾರ್ಕಿಂಗ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ರಿವರ್ಸ್ ಅಸಿಸ್ಟ್‌, ರೈಡ್ ಅಸಿಸ್ಟ್ ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ.

ಈ ನೂತನ ಎಲೆಕ್ಟ್ರಿಕ್ ಸ್ಕೂಟರ್, ಮೂರು ರೈಡಿಂಗ್ ಮೋಡ್‌ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, ಇಕೋ, ಸ್ಪೋರ್ಟ್ಸ್ ಮತ್ತು ಟರ್ಬೊ. ಇದರ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ. ಇದು ಡುಯಲ್
ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. 5,000 ವಾಟ್ ಹಬ್ ಮೋಟಾರ್ ನಿಂದ ಕಾರ್ಯನಿರ್ವಹಿಸಲಿದ್ದು, 85 kmph ಟಾಪ್ ಸ್ವೀಡ್ ಹೊಂದಿದೆ. ಮೆಟಲ್ ಗ್ರೇ ಹಾಗೂ ಚೆರ್ರಿ ರೆಡ್ ಬಣ್ಣದ ಆಯ್ಕೆಯಲ್ಲಿ ದೊರೆಯುತ್ತದೆ.

ಕಳೆದ ಎರಡು ದಿನದ ಹಿಂದೆಯಷ್ಟೇ ಎನಿಗ್ಮಾ ಕಂಪನಿ, ಜಿಟಿ 450 ಪ್ರೊ ಮತ್ತು ಕ್ರಿಂಕ್ ವಿ1 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಇವೆರೆಡು ಕ್ರಮವಾಗಿ ರೂ.89,000 ಮತ್ತು ರೂ.94,000 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಜಿಟಿ 450 ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜಿನಲ್ಲಿ 120 km ರೇಂಜ್ ನೀಡಲಿದ್ದು, ಕ್ರಿಂಕ್ ವಿ1 ಎಲೆಕ್ಟ್ರಿಕ್ ಸ್ಕೂಟರ್‌ 140 km ರೇಂಜ್ ಕೊಡಲಿದೆ.

ಒಟ್ಟಾರೆ, ಸ್ಪರ್ಧಾತ್ಮಕ ಬೆಲೆಯಲ್ಲಿ ನವೀಕರಿಸಿದ ಕೊಮಾಕಿ TN 95 ಸ್ಪೋರ್ಟ್‌ ಇ-ಸ್ಕೂಟರ್ ಬಿಡುಗಡೆಯಾಗಿದ್ದು, ಇದರ ಬ್ಯಾಟರಿ ಅತ್ಯಂತ ಸುರಕ್ಷಿತವಾಗಿದೆ. ಈ ಸ್ಕೂಟರ್ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಓಲಾ, ಎಥರ್, ಟಿವಿಎಸ್ ಹಾಗೂ ಸಿಂಪಲ್ ಎನರ್ಜಿ ಕಂಪನಿ ಸ್ಕೂಟರ್ ಗಳೊಂದಿಗೆ ಸ್ಪರ್ಧಿಸಬೇಕಾಗಿದ್ದು, ಗ್ರಾಹಕರಿಂದ ಮುಂಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

More from DriveSpark

Article Published On: Saturday, May 27, 2023, 18:45 [IST]
English summary
Komaki launches updated tn 95 electric scooter india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+