LML: ಭಾರತದಲ್ಲಿ ಡೀಲರ್‌ಶಿಪ್‌ ಸ್ಥಾಪನೆ... ಬಹುನೀರಿಕ್ಷಿತ 'ಸ್ಟಾರ್' ಎಲೆಕ್ಟ್ರಿಕ್ ಸ್ಕೂಟರ್ ಆಟ ಶುರುವಾಗುತ್ತೆ!

ಭಾರತದಲ್ಲಿ ಕೆಲವು ದಶಕಗಳ ಹಿಂದೆ, ತನ್ನ ದ್ವಿಚಕ್ರ ವಾಹನಗಳ ಮಾರಾಟದ ಮೂಲಕ ಉತ್ತುಂಗ ಸ್ಥಿತಿಯಲ್ಲಿದ್ದ LML (ಲೋಹಿಯಾ ಮೆಷಿನರಿ ಲಿಮಿಟೆಡ್) ಮತ್ತೆ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಮಾರುಕಟ್ಟೆಗೆ ರೀ ಎಂಟ್ರಿ ಕೊಡಲು ಸಿದ್ದತೆ ನಡೆಸುತ್ತಿದೆ. ಅದರ ಭಾಗವಾಗಿ ಡೀಲರ್‌ಶಿಪ್‌ ಸ್ಥಾಪನೆ ಕಾರ್ಯವನ್ನು ಪ್ರಾರಂಭಿಸಿದೆ.

ಈಗಾಗಲೇ ದೇಶಾದ್ಯಂತ ಡೀಲರ್ ನೆಟ್‌ವರ್ಕ್ ವಿಸ್ತರಣೆಯ ಕೆಲಸದಲ್ಲಿ ಎಲ್ಎಂಎಲ್ ಕಂಪನಿ ನಿರತವಾಗಿದ್ದು, ಮೊದಲ ಹಂತವಾಗಿ 50 ಡೀಲರ್‌ಶಿಪ್‌ ಪ್ರಾರಂಭಿಸಲು ಸಹಿ ಹಾಕಿದೆ. ಮಾರ್ಚ್ 2024ರೊಳಗೆ ಈ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದೆ. ಇಷ್ಟೇ ಅಲ್ಲದೆ, ತನ್ನ ಗತವೈಭವವನ್ನು ಪುನಃ ಸ್ಥಾಪಿಸಲು ನೂತನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಉತ್ಪಾದನೆ ಮಾಡಲು ಕಂಪನಿಯು ರೂ.500 ಕೋಟಿವರೆಗೆ ಬಂಡವಾಳ ಹೂಡಿಕೆ ಮಾಡಿದೆ.

LML: ಭಾರತದಲ್ಲಿ ಡೀಲರ್‌ಶಿಪ್‌ ಸ್ಥಾಪನೆ ಆರಂಭ: ಬಹುನೀರಿಕ್ಷಿತ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಆಟ ಶುರುವಾಗುತ್ತೆ!

ಈ ಬಗ್ಗೆ ಮಾತನಾಡಿರುವ ಎಲ್‌ಎಂಎಲ್‌ನ ಎಂಡಿ ಹಾಗೂ ಸಿಇಒ ಯೋಗೇಶ್ ಭಾಟಿಯಾ ಅವರು, 'ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉದ್ಯಮವು ವೇಗವಾಗಿ ಬೆಳವಣಿಗೆಯಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ತಾಪಮಾನ ಏರಿಕೆ ತಡೆಯಲು ಎಲೆಕ್ಟ್ರಿಕ್ ವಾಹನಗಳು ಪರ್ಯಾಯ ಆಯ್ಕೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಡೀಲರ್‌ಶಿಪ್‌ ಸ್ಥಾಪನೆ ಕಾರ್ಯ ಶುರು ಮಾಡಿದ್ದೇವೆ' ಎಂದು ಹೇಳಿದ್ದಾರೆ.

ಸದ್ಯ, ದೊಡ್ಡ ಮಟ್ಟದಲ್ಲಿ ನೀರಿಕ್ಷೆ ಹುಟ್ಟು ಹಾಕಿರುವ ಎಲ್ಎಂಎಲ್ ಕಂಪನಿಯ 'ಸ್ಟಾರ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದನ್ನು ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಲಾಯಿತು. ಜೊತೆಗೆ ಬುಕಿಂಗ್ ಕೂಡ ಪ್ರಾರಂಭಿಸಲಾಗಿತ್ತು. ಆಸಕ್ತ ಗ್ರಾಹಕರು ಯಾವುದೇ ಮುಂಗಡ ಹಣ ಪಾವತಿಸದೇ ಈ ಸ್ಕೂಟರ್ ಖರೀದಿಗೆ ಹೆಸರು ನೋಂದಾಯಿಸಬಹುದು ಎಂದು ಕಂಪನಿ ಹೇಳಿತ್ತು. ಬಹುತೇಕ ಈ ಸ್ಕೂಟರ್, ರೂ.1 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

LML: ಭಾರತದಲ್ಲಿ ಡೀಲರ್‌ಶಿಪ್‌ ಸ್ಥಾಪನೆ ಆರಂಭ: ಬಹುನೀರಿಕ್ಷಿತ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಆಟ ಶುರುವಾಗುತ್ತೆ!

ಈ ನೂತನ ಎಲ್‌ಎಂಎಲ್‌ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್, 3.4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ100 km ರೇಂಜ್ ನೀಡಲಿದೆ ಎಂದು ಅಂದಾಜಿಸಲಾಗಿದೆ. ಕೇವಲ 4.2 ಸೆಕೆಂಡುಗಳಲ್ಲಿ 40 kmph ಟಾಪ್ ಸ್ವೀಡ್ ಪಡೆಯಲಿದ್ದು, ಈ ಸ್ಕೂಟರ್ ಎರಡು ರೈಡಿಂಗ್ ಮೋಡ್‌ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, ಎಕಾನಮಿ ಹಾಗೂ ಪವರ್. ಇದೊಂದು ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಸಾಕಷ್ಟು ತಾಂತ್ರಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಟಿವಿಎಸ್ ಐಕ್ಯೂಬ್, ಓಲಾ ಎಸ್1, ವಿಡಾ ವಿ1, ಸಿಂಪಲ್ ಒನ್, ಎಥರ್ 450X ಹಾಗೂ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ 'ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಭಾರೀ ಪೈಪೋಟಿ ನೀಡುವಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅವುಗಳೆಂದರೆ, 360 ಡಿಗ್ರಿ ಕ್ಯಾಮೆರಾ, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಡಿಸ್ಕ್ ಬ್ರೇಕ್, ರಿವರ್ಸ್ ಮೋಡ್ ಹಾಗೂ TPMS (ಟೈರ್ ಪ್ರೆಜರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.

ಒಟ್ಟಾರೆಯಾಗಿ ದೇಶಾದ್ಯಂತ ಡೀಲರ್‌ಶಿಪ್‌ ಸ್ಥಾಪನೆಯ ಕೆಲಸವನ್ನು ಎಲ್ಎಂಎಲ್ ಕಂಪನಿ ಪ್ರಾರಂಭಿಸಿದೆ. ಇದನ್ನು ಗಮನಿಸಿದಾಗ ಶೀಘ್ರದಲ್ಲಿಯೇ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಮೂಲಕ ಕೆಲವೇ ವರ್ಷಗಳಲ್ಲಿ ಎಲ್ಎಂಎಲ್ ಮತ್ತೆ ತನ್ನ ಗತವೈಭವಕ್ಕೆ ಮರಳಲು ಪ್ರಯತ್ನಿಸುತ್ತಿದೆ. ಆದರೆ, ಅದೆಲ್ಲವೂ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮೇಲೆ ಅವಲಂಭಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, March 28, 2023, 10:51 [IST]
English summary
Lml commences setting dealerships india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+