ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್: Matter ಏರಾ ಬುಕಿಂಗ್‌ಗೆ ಡೇಟ್ ಫಿಕ್ಸ್, ಎಲ್ಲರ ಕಣ್ಣು ಇದರ ಮೇಲೆಯೇ..!

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳೇ ಪಾರುಪತ್ಯ ಸಾಧಿಸುತ್ತಿವೆ. ಆದರೆ, ಈ ವಿಭಾಗದಲ್ಲಿ ಮೋಟಾರ್‌ಸೈಕಲ್ ಕೊರತೆಯಿತ್ತು. ಅದನ್ನು ನೀಗಿಸಲು ಸ್ವದೇಶಿ ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಮ್ಯಾಟರ್ ಎನರ್ಜಿ (Matter Energy) ಮುಂದಾಗಿದ್ದು, ತನ್ನ ಏರಾ (Aera) ಮೋಟಾರ್‌ಸೈಕಲ್ ಬಗ್ಗೆ ಮಹತ್ವದ ಮಾಹಿತಿ ನೀಡಿದೆ.

'ಮ್ಯಾಟರ್ ಏರಾ' ದೇಶದಲ್ಲಿಯೇ ಗೇರ್ ಬಾಕ್ಸ್ ಹೊಂದಿರುವ ಮೊದಲ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಮೇ.17 ರಿಂದ ಭಾರತದ 25 ನಗರಗಳಲ್ಲಿ ಇದರ ಬುಕಿಂಗ್‌ನ್ನು ಕಂಪನಿ ಪ್ರಾರಂಭಿಸಲಿದೆ. ಆಸಕ್ತ ಗ್ರಾಹಕರು, ಈ ಮೋಟಾರ್‌ಸೈಕಲ್ ಅನ್ನು ಅಧಿಕೃತ ವೆಬ್‌ಸೈಟ್ ಅಥವಾ ಫ್ಲಿಪ್‌ಕಾರ್ಟ್ ಮೂಲಕ ಆರ್ಡರ್ ಮಾಡಬಹುದಾಗಿದ್ದು, ಶೀಘ್ರದಲ್ಲಿಯೇ ಅದ್ದೂರಿಯಾಗಿ ಲಾಂಚ್ ಆಗಲಿದೆ.

ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್: Matter ಏರಾ ಬುಕಿಂಗ್‌ಗೆ ಡೇಟ್ ಫಿಕ್ಸ್, ಎಲ್ಲರ ಕಣ್ಣು ಇದರ ಮೇಲೆಯೇ..!

ಮ್ಯಾಟರ್ ಏರಾ 5000 ಹಾಗೂ 5000 ಪ್ಲಸ್ ಎಂಬ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, 5000 ವೇರಿಯೆಂಟ್ ರೂ.1.44 ಲಕ್ಷ ಹಾಗೂ 5000 ಪ್ಲಸ್ ರೂ.1.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಲಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೇ ಈ ದರಗಳು FAME II ಸಬ್ಸಿಡಿ ಪಡೆದುಕೊಂಡಿವೆ. ಆದರೆ, ರಾಜ್ಯಗಳ ಸಬ್ಸಿಡಿಯನ್ನು ಒಳಗೊಂಡಿಲ್ಲ.

ಮ್ಯಾಟರ್ ಏರಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 5 kWh ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಹೊಂದಿದ್ದು, 10kW (13.4bhp) ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ 4 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಅಲ್ಲದೆ, ರಿವರ್ಸ್ ಮೋಡ್ ಸೇರಿದಂತೆ ನಾಲ್ಕು ರೈಡಿಂಗ್ ಮೋಡ್ ಹೊಂದಿದೆ.

ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್: Matter ಏರಾ ಬುಕಿಂಗ್‌ಗೆ ಡೇಟ್ ಫಿಕ್ಸ್, ಎಲ್ಲರ ಕಣ್ಣು ಇದರ ಮೇಲೆಯೇ..!

ಮ್ಯಾಟರ್ ಏರಾ 5000 ಹಾಗೂ 5000 ಪ್ಲಸ್ ರೂಪಾಂತರಗಳು ಸಂಪೂರ್ಣ ಚಾರ್ಜಿನಲ್ಲಿ 125 ಕಿಲೋಮೀಟರ್ ರೇಂಜ್ ನೀಡಲಿವೆ. ಸದ್ಯ, ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್ ಗಳ ರೇಂಜ್ ಗೆ ಹೋಲಿಸಿದ್ರೆ ಇದು ಕಡಿಮೆ. ಆದರೂ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ದೊಡ್ಡದಾದ 7 ಇಂಚಿನ ಟಚ್‌ಸ್ಕ್ರೀನ್ LCD ಡಿಸ್ಪ್ಲೇ, 9-Axis IMU, 4G, Wi-Fi, ಬ್ಲೂಟೂತ್ 5.0 ಹಾಗೂ ಎಲ್ಇಡಿ ಲೈಟಿಂಗ್ ಅನ್ನು ಪಡೆದಿದೆ.

ಮ್ಯಾಟರ್ ಏರಾ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, ಸಿಂಗಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ. 5000 ಹಾಗೂ 5000 ಪ್ಲಸ್ ರೂಪಾಂತರಗಳು 3 ವರ್ಷ/ ಅನಿಯಮಿತ ಕಿಲೋಮೀಟರ್ ವಾರಂಟಿಯನ್ನು ಹೊಂದಿವೆ. ಇದೇ ನಿಯಮ ಬ್ಯಾಟರಿ ಪ್ಯಾಕ್ ಗೂ ಅನ್ವಯವಾಗಲಿದೆ.

ಇನ್ನು, ದೇಶದಲ್ಲಿಯೇ ಗೇರ್ ಬಾಕ್ಸ್ ಹೊಂದಿರುವ ಪ್ರಥಮ ಎಲೆಕ್ಟ್ರಿಕ್ ಬೈಕ್ ಎಂಬ ಹೆಗ್ಗಳಿಕೆಗೆ ಮ್ಯಾಟರ್ ಏರಾ ಪಾತ್ರವಾಗಿದೆ. ಇದೀಗ, ಕೆಲವೇ ದಿನಗಳಲ್ಲಿ ಬುಕಿಂಗ್ ಆರಂಭವಾಗಲಿದ್ದು, ಹೆಚ್ಚಿನ ಯುವ ಗ್ರಾಹಕರನ್ನು ಸೆಳೆಯಬಹುದು. ಕೊಂಚ ಮಟ್ಟಿಗೆ ರೇಂಜ್ ಕಡಿಮೆ ಇರುವುದು ಬೇಸರ ತರಿಸಬಹುದು. ಆದರೂ, ಹೆಚ್ಚಿನ ಖರೀದಿದಾರರ ಕಣ್ಣು ಇದರ ಮೇಲೆಯೇ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 10, 2023, 18:11 [IST]
English summary
Matter aera bookings commence may 17 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+