'Matter Aera' ಎಲೆಕ್ಟ್ರಿಕ್ ಬೈಕ್‌ಗೆ ರೂ.50,000 ಆಫರ್.. ಬೆಲೆಯು ಕೈಗೆಟುಕುತ್ತೆ: ಇದರಲ್ಲಿದೆ ವಿಶೇಷ ಫೀಚರ್
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (ಇವಿ) ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದೆ. ಅದರಲ್ಲೂ ಸ್ಕೂಟರ್‌ಗಳು ಈ ವಿಭಾಗದಲ್ಲಿ ಭಾರೀ ಜನಪ್ರಿಯತೆಗಳಿಸಿವೆ. ಇದೀಗ, ಮೋಟಾರ್‌ಸೈಕಲ್ ಗಳು ಮುನ್ನೆಲೆಗೆ ಬರುತ್ತಿದ್ದು, ಅಹಮದಾಬಾದ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಮ್ಯಾಟರ್ (Matter) ತನ್ನ 'ಏರಾ' ಬೈಕ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಿಸಿದೆ.
ವಿಶ್ವ ಪರಿಸರ ಸಪ್ತಾಹ (World Environment Week) ಭಾಗವಾಗಿ ತನ್ನ 'ಏರಾ' ಎಲೆಕ್ಟ್ರಿಕ್ ಬೈಕ್ ಕೊಳ್ಳುವ ಗ್ರಾಹಕರಿಗೆ ಕಂಪನಿಯು, ರೂ.30,000 ಪ್ರೈಸ್ ಬೆನಿಫಿಟ್ ಹಾಗೂ ರೂ.20,000 ಮೊತ್ತದ ಮ್ಯಾಟರ್ ಕೇರ್ ಪ್ಯಾಕೇಜ್ ಅನ್ನು ನೀಡುವುದಾಗಿ ಮಂಗಳವಾರ ತಿಳಿಸಿದೆ. ಈ ಪ್ರಯೋಜನಗಳು ಜೂನ್ 5 ರವರೆಗೆ ಮಾತ್ರ ಸಿಗಲಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

FAME II ಸಬ್ಸಿಡಿಯಲ್ಲಿ ಮಾಡಿರುವ ಕೆಲವೊಂದು ಬದಲಾವಣೆಗಳಿಂದ ಮ್ಯಾಟರ್ ಏರಾ ರೂಪಾಂತರಗಳಾದ 5000 ಮತ್ತು 5000 ಪ್ಲಸ್ ಬೆಲೆ ರೂ.30,000ವರೆಗೆ ಹೆಚ್ಚಳವಾಗಲಿದೆ. ಜೂನ್ 6 ರಿಂದ, ಏರಾ 5000 ಬೆಲೆ ರೂ.1,73,999 ಹಾಗೂ ಏರಾ 5000 ಪ್ಲಸ್ ದರ ರೂ.1,83,999 ಆಗಲಿದೆ. ಆ ಮೊದಲು ಬುಕಿಂಗ್ ಮಾಡಿದವರಿಗೆ ಹಳೆಯ ದರಗಳೇ ಅನ್ವಯಿಸಲಿದೆ.
ಆಸಕ್ತ ಗ್ರಾಹಕರು, ಈ ಮೋಟಾರ್‌ಸೈಕಲ್ ಅನ್ನು ಅಧಿಕೃತ ವೆಬ್‌ಸೈಟ್ ಅಥವಾ ಫ್ಲಿಪ್‌ಕಾರ್ಟ್ ಮೂಲಕ ರೂ.999 ಟೋಕನ್ ಮೊತ್ತ ಪಾವತಿಸಿ ಆರ್ಡರ್ ಮಾಡಬಹುದಾಗಿದ್ದು, ಸೆಪ್ಟೆಂಬರ್ ತಿಂಗಳಿನಿಂದ ವಿತರಣೆಗಳು ಶುರುವಾಗಲಿದೆ. ನಿಮಗೆ ಗೊತ್ತಿರಲಿ.. ಈ ಬೈಕ್ ರೂಪಾಂತರಗಳು ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದ್ದು, ಒಂದು ಕಿಲೋಮೀಟರ್ ಕ್ರಮಿಸಲು 25 ಪೈಸೆ ಖರ್ಚಾಗುತ್ತದೆ.
ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, 5 kWh ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಹೊಂದಿದ್ದು, 10kW (13.4bhp) ಪವರ್ ಉತ್ಪಾದಿಸುತ್ತದೆ. ಇದು, 4 ಸ್ವೀಡ್ ಗೇರ್ ಬಾಕ್ಸ್ ಆಯ್ಕೆ ಪಡೆದಿರುವ ದೇಶದ ಮೊದಲ ಎಲೆಕ್ಟ್ರಿಕ್ ಬೈಕ್ ಆಗಿದೆ. ರಿವರ್ಸ್ ಮೋಡ್ ಸೇರಿದಂತೆ ನಾಲ್ಕು ರೈಡಿಂಗ್ ಮೋಡ್ ಹೊಂದಿದೆ.
ಈ ಬೈಕ್, ಕೇವಲ 6 ಸೆಕೆಂಡುಗಳಲ್ಲಿ 0 ಯಿಂದ 60 kmph ವೇಗವನ್ನು ಪಡೆಯಲಿದ್ದು, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಸಿಂಗಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ. ಜೊತೆಗೆ ಸಂಪೂರ್ಣ ಚಾರ್ಜ್‌ನಲ್ಲಿ 125 ಕಿಲೋಮೀಟರ್ ರೇಂಜ್ ನೀಡಲಿದೆ. ಆದರೆ, ಇದು ಕೊಂಚ ಗ್ರಾಹಕರಿಗೆ ಬೇಸರ ತರಿಸಲಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಲೆಕ್ಟ್ರಿಕ್ ಸ್ಕೂಟರ್ ಗಳಂತೆ ಈ ಬೈಕ್ ಕೂಡ ಹತ್ತು ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ದೊಡ್ಡದಾದ 7 ಇಂಚಿನ ಟಚ್‌ಸ್ಕ್ರೀನ್ LCD ಡಿಸ್ಪ್ಲೇ, 9 Axis IMU, 4G, Wi - Fi, ಬ್ಲೂಟೂತ್ 5.0 ಹಾಗೂ ಎಲ್ಇಡಿ ಲೈಟಿಂಗ್ ಅನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications








