ಕೈಗೆಟುಕುವ ಬೆಲೆಯ TVS ರೋನಿನ್ ಬೈಕ್ ವಿತರಣೆ ಪಡೆದ ಎಂ.ಎಸ್.ಧೋನಿ: ಏನಿದರ ವಿಶೇಷತೆ?
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬೈಕ್ ಕ್ರೇಜ್ ಬಗ್ಗೆ ಎಲ್ಲರಿಗೂ ತಿಳಿದಿದ್ದು, ಅವರ ಗ್ಯಾರೇಜ್‌ನಲ್ಲಿ ದೊಡ್ಡಮಟ್ಟದ ಬೈಕ್‌ಗಳ ಸಂಗ್ರಹವಿದೆ. ಅವರು, ಹಲವು ಬಾರಿ ರಸ್ತೆಗಳಲ್ಲಿ ಬೈಕ್ ಓಡಿಸುತ್ತಿರುವ ವಿಡಿಯೋಗಳು ಕೂಡ ಭಾರೀ ವೈರಲ್ ಆಗುತ್ತಿರುತ್ತವೆ. ಇದೀಗ, ಟಿವಿಎಸ್ ಪ್ರೀಮಿಯಂ ಮೋಟಾರ್‌ಸೈಕಲ್‌ನ್ನು ವಿತರಣೆ ಪಡೆದಿದ್ದಾರೆ.
ಭಾರತದಲ್ಲಿ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಿವಿಎಸ್ ಕಂಪನಿಯ ಕೈಗೆಟುಕುವ ಬೆಲೆಯ 'ರೋನಿನ್' ಪ್ರೀಮಿಯಂ ಬೈಕ್‌ನ್ನು ಎಂ.ಎಸ್ ಧೋನಿ ವಿತರಣೆ ಪಡೆದಿದ್ದಾರೆ. ಈ ಬೈಕ್, ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಮೂಲಕ ಈಗಾಗಲೇ ಸಾಕಷ್ಟು ಯುವ ಗ್ರಾಹಕರನ್ನು ಆಕರ್ಷಿಸುತ್ತಿದೆ. ಅಂದಹಾಗಿ ಇದು ಧೋನಿ ಅವರ ಎರಡನೇ ಟಿವಿಎಸ್ ಮೋಟಾರ್‌ಸೈಕಲ್ ಆಗಿದೆ. ಈ ಮೊದಲ ಅವರು, ಟಿವಿಎಸ್ ಅಪಾಚೆ RR 310ಯನ್ನು ಖರೀದಿಸಿದ್ದರು.

ಈ ಬಗ್ಗೆ ಖುದ್ದು ಟಿವಿಎಸ್ ಕಂಪನಿಯೇ ಪತ್ರಿಕಾ ಪ್ರಕರಣೆ ಬಿಡುಗಡೆ ಮಾಡಿದ್ದು, 'ಲೆಜೆಂಡರಿ ಕ್ರಿಕೆಟ್ ಆಟಗಾರ ಎಂ.ಎಸ್.ಧೋನಿ ಅವರಿಗೆ ನಮ್ಮ ಪ್ರೀಮಿಯಂ ಮೋಟಾರ್‌ಸೈಕಲ್ ಬಿಸಿನೆಸ್ ಹೆಡ್ ವಿಮಲ್ ಸುಂಬ್ಲಿ ಅವರು, ರೋನಿನ್ ಬೈಕ್ ಕೀಯನ್ನು ವಿತರಿಸಿದ್ದಾರೆ. ಇದೊಂದು ಪ್ರೀಮಿಯಂ ಮೋಟಾರ್‌ಸೈಕಲ್ ಆಗಿದ್ದು, ಹೆಚ್ಚಿನ ಖರೀದಿದಾರರು ಲೈಕ್ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಧೋನಿ ಅವರು ಟಿವಿಎಸ್ ರೋನಿನ್ ಬೈಕ್ ಮಾಲೀಕರಾಗುತ್ತಿರುವುದು ಸಂತೋಷ ತಂದಿದೆ' ಎಂದು ಹೇಳಿದೆ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಟಿವಿಎಸ್ ರೋನಿನ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, 225.9 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 7750 rpmನಲ್ಲಿ 20.4 bhp ಗರಿಷ್ಠ ಪವರ್ ಹಾಗೂ 3750 rpmನಲ್ಲಿ 19.93 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೆ, 5 ಸ್ವೀಡ್ ಗೇರ್ ಬಾಕ್ಸ್ ನೊಂದಿಗೆ ಖರೀದಿಗೆ ಲಭ್ಯವಿದ್ದು, ಸ್ಲಿಪ್ಪರ್-ಕ್ಲಚ್ ಹಾಗೂ ಸೈಲೆಂಟ್ ಸ್ಟಾರ್ಟ್‌ಗಾಗಿ ಇಂಟಿಗ್ರೇಟೆಡ್ ಸ್ಟಾರ್ಟರ್ ಆಯ್ಕೆಯನ್ನು ಪಡೆದಿದೆ.
ಈ ಬೈಕ್, ವಿನ್ಯಾಸ ಹಾಗೂ ವೈಶಿಷ್ಟ್ಯಗಳ ಬಗ್ಗೆ ನೋಡುವುದಾದರೆ, ಇದು ಎಲ್ಇಡಿ ಹೆಡ್‌ಲ್ಯಾಂಪ್ಸ್, ಟಿ-ಆಕಾರದ ಎಲ್ಇಡಿ DRLಗಳು, ಸಿಂಗಲ್ ಪೀಸ್ ಬ್ಲ್ಯಾಕ್ ಕಲರ್ ಸೀಟ್, ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್,ವಾಯ್ಸ್ ಅಸಿಸ್ಟಂಟ್ಸ್ ಹಾಗೂ ಕಾಲ್, ಮೆಸೇಜ್ ಅಲರ್ಟ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದು ಎರಡು ರೈಡಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, ಅರ್ಬನ್ ಹಾಗೂ ರೇನ್. ಇವುಗಳನ್ನು ನೋಡಿದಾಗ ಈ ಬೈಕ್ ಅತ್ಯುನ್ನತವಾಗಿದೆ ಎಂದು ಹೇಳಬಹುದು.
ಟಿವಿಎಸ್ ರೋನಿನ್ ಬೈಕ್, ಸಸ್ಪೆನ್ಷನ್ ಹಾಗೂ ಬ್ರೇಕಿಂಗ್ ವ್ಯವಸ್ಥೆ ಬಗ್ಗೆ ಹೇಳುವುದಾದರೆ, ಇದು ಫ್ರಂಟ್ 41 ಎಂಎಂ USD ಫೋರ್ಕ್ ಹಾಗೂ ರೇರ್ ಗ್ಯಾಸ್-ಚಾರ್ಜ್ಡ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. 17-ಇಂಚಿನ ಅಲಾಯ್ ವೀಲ್ಸ್ ಹೊಂದಿರುವ ಈ ಬೈಕ್, ಫ್ರಂಟ್ ಮತ್ತು ರೇರ್ ಡಿಸ್ಕ್ ಬ್ರೇಕ್ ಅನ್ನು ಪಡೆದಿದೆ. ಜೊತೆಗೆ ಟಾಪ್ ಎಂಡ್ ಮಾದರಿಗಳಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ಈ ಮೋಟಾರ್‌ಸೈಕಲ್ ಬೆಲೆ ವಿವರಗಳನ್ನು ನೋಡುವುದಾದರೆ, ಬೆಂಗಳೂರಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಸಿಸ್ಟಮ್ ಹೊಂದಿರುವ ಟಿವಿಎಸ್ ರೋನಿನ್ ಬೈಕ್ ಆನ್ ರೋಡ್ ಬೆಲೆ 1,97,820 ಇದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಮ್ ಹೊಂದಿರುವ ಬೈಕ್ ದರ ರೂ. 2,22,480 ಇದೆ. ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಬೈಕ್, ಗ್ರಾಹಕರಿಗೆ ಇಷ್ಟವಾಗಲಿದ್ದು. ಧೋನಿಯಂತಹ ಸೆಲೆಬ್ರಿಟಿಗಳು ಈ ಬೈಕ್ ವಿತರಣೆಯನ್ನು ಪಡೆದಿರುವುದರಿಂದ ಮತ್ತಷ್ಟು ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು.
ಟಿವಿಎಸ್ ರೋನಿನ್ ಮೋಟಾರ್‌ಸೈಕಲ್, ರಾಯಲ್ ಎನ್‌ಫೀಲ್ಡ್ ಹಂಟರ್, ಯಮಹಾ FZ-X, ಮತ್ತು ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್ ಗಳಿಗೆ ಭಾರೀ ಪೈಪೋಟಿ ನೀಡಲಿದೆ. ಟಿವಿಎಸ್ ಕಂಪನಿ ಮುಂಬರುವ ದಿನಗಳಲ್ಲಿ ಅಪಾಚೆ RTR 310 ಬೈಕ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ಧವಾಗಿದೆ. ಈ ಬೈಕ್ ರೂ.1.99 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು. ಇದು BS6 ಎಂಜಿನ್ ಆಧಾರಿತವಾಗಿದ್ದು,
34 PS ಗರಿಷ್ಠ ಪವರ್ ಹಾಗೂ 27.3 Nm ಪೀಕ್ ಟಾರ್ಕ್ ಉತ್ಪಾದಿಸುವ ಜೊತೆಗೆ ನೂತನ ವೈಶಿಷ್ಟ್ಯಗಳನ್ನು ಹೊಂದಿರಲಿದೆ.


Click it and Unblock the Notifications