mXmoto mX9: ಎಂಎಕ್ಸ್‌ಮೊಟೊ ಎಂಎಕ್ಸ್‌9 ಎಲೆಕ್ಟ್ರಿಕ್ ಬೈಕ್ ಕೈಗೆಟುಕುವ ಬೆಲೆಗೆ ಬಿಡುಗಡೆ, ಭರ್ಜರಿ ವೈಶಿಷ್ಟ್ಯಗಳಿವೆ

ದೇಶದಲ್ಲಿ ಕಳೆದ ಎರಡು ವರ್ಷದಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳು ಅಬ್ಬರಿಸುತ್ತಿವೆ. ಈ ವಿಭಾಗದಲ್ಲಿ ಮೋಟಾರ್ ಸೈಕಲ್ ಕೊರತೆ ಸಾಕಷ್ಟುಯಿದೆ. ಇದನ್ನು ಮನಗಂಡಿರುವ ಕಂಪನಿಗಳು, ವಿವಿಧ ಇ - ಬೈಕ್ ಬಿಡುಗಡೆಗೊಳಿಸುತ್ತಿವೆ. ಆ ಸಾಲಿಗೆ ಎಂಎಕ್ಸ್‌ಮೊಟೊ (mXmoto) ಸೇರ್ಪಡೆಯಾಗಿದೆ.

ದಿನನಿತ್ಯ ಕಚೇರಿಗೆ ತೆರಳಲು ಸೇರಿದಂತೆ ವಿವಿಧ ಕೆಲಸಗಳಿಗೆ ದ್ವಿಚಕ್ರ ವಾಹನ ಬಳಕೆ ಮಾಡುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ. ಆದರೆ, ಅತಿಯಾದ ಪೆಟ್ರೋಲ್ ದರ ಏರಿಕೆ ಅವರ ಜೇಬನ್ನು ಸುಡುತ್ತಿದೆ. ಅದಕ್ಕೆ ಪರಿಹಾರವಾಗಿ ಜನರು ಕೂಡ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಮೊರೆ ಹೋಗುತ್ತಿದ್ದು, ಎಂಎಕ್ಸ್‌ಮೊಟೊ ಕಂಪನಿ ರೂ.1.46 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಎಂಎಕ್ಸ್‌9 ಇ-ಬೈಕ್ ಬಿಡುಗಡೆಗೊಳಿಸಿದೆ.

mXmoto mX9: ಎಂಎಕ್ಸ್‌ಮೊಟೊ ಎಂಎಕ್ಸ್‌9 ಎಲೆಕ್ಟ್ರಿಕ್ ಬೈಕ್ ಕೈಗೆಟುಕುವ ಬೆಲೆಗೆ ಬಿಡುಗಡೆ, ಭರ್ಜರಿ ವೈಶಿಷ್ಟ್ಯಗಳಿವೆ

ನೂತನ ಎಂಎಕ್ಸ್‌ಮೊಟೊ ಎಂಎಕ್ಸ್‌9 ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ಚಾರ್ಜಿನಲ್ಲಿ 110 km ರಿಂದ 140 km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. 80 kmph ಟಾಪ್ ಸ್ವೀಡ್ ಪಡೆದಿದೆ. ಇದರ ಬ್ಯಾಟರಿ ಪ್ಯಾಕ್ ಶೇಕಡ 0 - 90% ಚಾರ್ಜ್ ಆಗಲು ಮೂರು ಗಂಟೆಗಳಿಗಿಂತ ಕಡಿಮೆ ಸಮಯ ಸಾಕು. ಅದು ಕೂಡ 1.5 ಯುನಿಟ್ ವಿದ್ಯುತ್ ಬಳಕೆಯಲ್ಲಿ.

ಈ ಎಂಎಕ್ಸ್‌ಮೊಟೊ ಎಂಎಕ್ಸ್‌9 ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದರಲ್ಲಿ 4,000 ವಾಲ್ಟ್ BLDC ಹಬ್ ಮೋಟಾರ್ ಬಳಕೆ ಮಾಲಾಗಿದೆ. 580 rpmನಲ್ಲಿ 140 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಉತ್ತಮ ರೇಂಜ್ ನೀಡಲು ಶೇಕಡ 98% ಕಾರ್ಯದಕ್ಷತೆಯನ್ನು ಒಳಗೊಂಡಿದೆ.

mXmoto mX9: ಎಂಎಕ್ಸ್‌ಮೊಟೊ ಎಂಎಕ್ಸ್‌9 ಎಲೆಕ್ಟ್ರಿಕ್ ಬೈಕ್ ಕೈಗೆಟುಕುವ ಬೆಲೆಗೆ ಬಿಡುಗಡೆ, ಭರ್ಜರಿ ವೈಶಿಷ್ಟ್ಯಗಳಿವೆ

ಹೊಸ ಎಂಎಕ್ಸ್‌9 ಎಲೆಕ್ಟ್ರಿಕ್ ಬೈಕಿನ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್, ಅಪ್-ಸೈಡ್ ಡೌನ್ ಪೋರ್ಕ್ಸ್, ರೇರ್ ಅಡ್ಜಸ್ಟ್ಏಬಲ್ ಮೋನೋಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ವಿಚಾರವಾಗಿ ಮಾತನಾವುದಾದರೆ, ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿರುವುದು ವಿಶೇಷವಾಗಿದೆ.

ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಬೈಕ್ ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮೊಬೈಲ್ ಚಾರ್ಜ್ ಮಾಡಲು USB ಪೋರ್ಟ್, LED ಟರ್ನ್ ಇಂಡಿಕೇಟರ್ಸ್, ನ್ಯಾವಿಗೇಷನ್‌ನೊಂದಿಗೆ TFT ಸ್ಕ್ರೀನ್, ಬ್ಲೂಟೂತ್ ಕನೆಕ್ಟಿವಿಟಿ, ಕ್ರೂಸ್ ಕಂಟ್ರೋಲ್, ಪಾರ್ಕ್ ಅಸಿಸ್ಟ್, ಹಿಲ್ ಅಸಿಸ್ಟ್ ಹಾಗೂ ರಿವರ್ಸ್ ಅಸಿಸ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

mXmoto mX9: ಎಂಎಕ್ಸ್‌ಮೊಟೊ ಎಂಎಕ್ಸ್‌9 ಎಲೆಕ್ಟ್ರಿಕ್ ಬೈಕ್ ಕೈಗೆಟುಕುವ ಬೆಲೆಗೆ ಬಿಡುಗಡೆ, ಭರ್ಜರಿ ವೈಶಿಷ್ಟ್ಯಗಳಿವೆ

ಎಂಎಕ್ಸ್‌ಮೊಟೊ ಎಂಎಕ್ಸ್‌9 ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಬಿಡುಗಡೆ ಬಗ್ಗೆ ಮಾತನಾಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಮಲ್ಹೋತ್ರಾ ಅವರು, 'ಸವಾರರ ಯೋಗಕ್ಷೇಮವನ್ನು ಗಮನದಲ್ಲಿ ಇಟ್ಟುಕೊಂಡು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು, ಕಠಿಣ ಪರೀಕ್ಷೆ ಮೂಲಕ ಈ ಬೈಕ್ ತಯಾರಿಸಲಾಗಿದೆ. ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುತ್ತದೆ ಎಂಬುದು ನನಗೆ ಖಾತ್ರಿಯಿದೆ' ಎಂದು ಹೇಳಿದ್ದಾರೆ.

ಇನ್ನು, ಎಂಎಕ್ಸ್‌ಮೊಟೊ ಕಂಪನಿ ಬಿಡುಗಡೆಗೊಳಿಸಿರುವ ಎಂಎಕ್ಸ್‌9 ಎಲೆಕ್ಟ್ರಿಕ್ ಬೈಕ್, ನೋಡಲು ಅತ್ಯಾಧುನಿಕವಾಗಿದ್ದು, ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆದಿದೆ. ಇದು, ಈ ಬೈಕ್ ಖರೀದಿಸುವಂತೆ ಹೆಚ್ಚಿನ ಜನರನ್ನು ಉತ್ತೇಜಿಸಬಹುದು. ಸದ್ಯ, ಹಬ್ಬದ ಋತು ಆರಂಭವಾಗುತ್ತಿರುವ ಹಿನ್ನೆಲೆ, ಈ ಮೋಟಾರ್ ಸೈಕಲ್ ಗೆ ಸಖತ್ ಬೇಡಿಕೆ ಬರಬಹುದು. ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, September 15, 2023, 12:24 [IST]
English summary
Mxmoto mx9 electric motorcycle launched rs 1 46 lakh details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+