ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು: ಅಗ್ಗದ ಬೆಲೆ, ಅಧಿಕ ರೇಂಜ್!
ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್, ಹೊಸ ಚೇತಕ್ ಅರ್ಬೇನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇದೀಗ ಹೆಚ್ಚಿನ ರೇಂಜ್ ಹಾಗೂ ಹೊಸ ಫೀಚರ್ ಗಳೊಂದಿಗೆ ಇತ್ತೀಚೆಗೆ ಮಾಡಿದೆ. ಈ ಸ್ಕೂಟರ್ ಬೆಲೆ, ವಿನ್ಯಾಸ, ಹೊಸ ಅಪ್‌ಡೇಟ್‌ಗಳನ್ನು ಇಲ್ಲಿ ನೋಡೋಣ.
ಬಜಾಜ್ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ ಅರ್ಬೇನ್ ಸ್ಟ್ಯಾಂಡರ್ಡ್ ವೇರಿಯೆಂಟ್ ಅನ್ನು 1.15 ಲಕ್ಷ ರೂ. ಮತ್ತು ಹೆಚ್ಚುವರಿ "Tecpac" ಗೆ 1.21 ಲಕ್ಷ ರೂ.ವನ್ನು ನಿಗದಿ ಮಾಡಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಟಾಪ್ ವೇರಿಯೆಂಟ್ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಪರ್ಫಾಮೆನ್ಸ್ ಅನ್ನು ಅನ್‌ಲಾಕ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ಚೇತಕ್ ಅರ್ಬೇನ್‌ನಲ್ಲಿ ಈ ಹಿಂದಿನ ಪ್ರೀಮಿಯಂ ವೇರಿಯೆಂಟ್‌ನ ಅದೇ ಬಣ್ಣದ LCD ಡಿಸ್ಪ್ಲೇಯನ್ನು ನೀಡಲಾಗಿದೆ. ಸ್ಟ್ಯಾಂಡರ್ಡ್ ರೂಪದಲ್ಲಿ, ಅರ್ಬೇನ್ 63kph ಗರಿಷ್ಠ ವೇಗವನ್ನು ನೀಡುತ್ತತ್ತು. ಜೊತೆಗೆ ಕೇವಲ ಒಂದು ರೈಡಿಂಗ್ ಮೋಡ್ (ಇಕೋ)ನೊಂದಿಗೆ ಬರುತ್ತಿತ್ತು. ಆದರೆ "Tecpac" ಅನ್ನು ತರುವುದರೊಂದಿಗೆ, ಗರಿಷ್ಠ ವೇಗವು 73kph ಗೆ ಏರುತ್ತಿದ್ದು, ಜೊತೆಗೆ ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಸಹ ನೀಡಲಾಗಿದೆ.
ಚಾರ್ಜಿಂಗ್ ವಿಷಯಕ್ಕೆ ಬಂದರೆ ಸ್ಟ್ಯಾಂಡರ್ಡ್ ಚಾರ್ಜರ್‌ನ ಚಾರ್ಜಿಂಗ್ ದರವು 800W ನಿಂದ 650W ಗೆ ಇಳಿದಿದೆ, ಇದರ ಪರಿಣಾಮವಾಗಿ, ಚಾರ್ಜಿಂಗ್ ಸಮಯವು 3 ಗಂಟೆ 50 ನಿಮಿಷಗಳಿಂದ 4 ಗಂಟೆ 50 ನಿಮಿಷಗಳಿಗೆ ಏರಿದೆ. ಅರ್ಬೇನ್ ವೇರಿಯೆಂಟ್ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳೊಂದಿಗೆ ಮಾತ್ರ ಬರುತ್ತದೆ. ಡಿಸ್ಕ್ ಬ್ರೇಕ್ ನೀಡಿರಬಹುದಾಗಿತ್ತು ಎಂಬುದು ನಮ್ಮ ಅನಿಸಿಕೆ.

ರೇಂಜ್‌ಗೆ ಸಂಬಧಿಸಿದಂತೆ ಹೊಸ ಬಜಾಜ್ ಅರ್ಬೇನ್ ಪ್ರಸ್ತುತ ಹಳೆಯ ಚೇತಕ್ ನೀಡುವ 108 ಕಿ.ಮೀಗಿಂತ ಸ್ವಲ್ಪ ಹೆಚ್ಚಿನ ರೇಂಜ್ 113 ಕಿ.ಮೀ ನೀಡುತ್ತದೆ ಕಂಪನಿ ಹೇಳಿದೆ. ಇದು ಬಜಾಜ್ ಚೇತಕ್ ಅರ್ಬೇನ್‌ನ IDC-ಪ್ರಮಾಣೀಕೃತ ರೇಂಜ್ ಆಗಿದೆ. ಆದರೆ ಪ್ರಸ್ತುತ ಹಳೆಯ ಚೇತಕ್ ಇವಿ ಪ್ರೀಮಿಯಂ, 108km ರಿಯಲ್ ವರ್ಲ್ಡ್ ರೇಂಜ್ ಎಂದು ಕ್ಲೈಮ್ ಮಾಡಿದ್ದರೂ ಅದರ IDC ರೇಟಿಂಗ್ 126km ಇದೆ.
ಆದ್ದರಿಂದ, ರಿಯಲ್ ವರ್ಲ್ಡ್ ಅರ್ಬೇನ್ ಸ್ವಲ್ಪ ಕಡಿಮೆ ರೇಂಜ್ ನೀಡುವ ಸಾಧ್ಯತೆಯಿದೆ, ಆದರೂ ನಿಖರವಾಗಿ ಈ ಬಗ್ಗೆ ಹೇಳಲಾಗುವುದಿಲ್ಲ. ಈಗಷ್ಟೆ ಬಿಡುಗಡೆಯಾಗಿರುವುದರಿಂದ ರೇಂಜ್ ಟೆಸ್ಟ್ ಬಳಿಕ ನೋಡಬೇಕಾಗಿದೆ. ಬಜಾಜ್ ವೆಬ್‌ಸೈಟ್ ದೃಢೀಕರಿಸುವುದೇನೆಂದರೆ, ಹೊಸ ಚೇತಕ್ ಅರ್ಬೇನ್ ಪ್ರಸ್ತುತ ಮಾದರಿಯಲ್ಲಿರುವ ಅದೇ 2.9kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಒಂದು ಕಾಲದ ಫ್ಯಾಮಿಲಿ ಸ್ಕೂಟರ್ ಎಂದು ಜನಪ್ರಿಯವಾಗಿದ್ದ ಇಂಧನ ಚಾಲಿತ ಬಜಾಜ್ ಚೇತಕ್, ದಶಕದ ಹಿಂದೆಯೇ ಸ್ಥಗಿತಗೊಂಡರು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಈ ಸ್ಕೂಟರ್‌ನೊಂದಿಗೆ ಕೇವಲ ಜನರಿಗೆ ಮಾತ್ರವಲ್ಲ, ಕಂಪನಿಗೂ ಅಷ್ಟೇ ಬಾಂಧವ್ಯವಿದೆ. ಇದೇ ಕಾರಣಕ್ಕೆ ಎಲೆಕ್ಟ್ರಿಕ್ ರೂಪದಲ್ಲಿ ಚೇತಕ್ ಅನ್ನು ಪರಿಚಯಿಸಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೊಸ ಫೀಚರ್‌ಗಳೊಂದಿಗೆ ಅಧಿಕ ರೇಂಜ್ ನೀಡುತ್ತಾ ಇವಿ ಸ್ಕೂಟರ್ ಮಾರುಕಟ್ಟೆಯಲ್ಲಿ ಕಠಿಣ ಪೈಪೋಟಿ ನೀಡುತ್ತಿವೆ. ಹಾಗಾಗಿ ಹೊಸ ಚೇತಕ್ ಅರ್ಬೇನ್ ಸ್ಕೂಟರ್ ಅನ್ನು ಕಂಪನಿ ಇದೀಗ ಹೆಚ್ಚಿನ ರೇಂಜ್ ಹಾಗೂ ಹೊಸ ಫೀಚರ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಈ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








