ಅಗ್ಗದ ಬೆಲೆಯ ಹಾರ್ಲೆ-ಡೇವಿಡ್ಸನ್ ಬೈಕ್ ವಿತರಣೆ ಮಾಹಿತಿ ಬಹಿರಂಗ: ರಾಯಲ್ ಎನ್‌ಫೀಲ್ಡ್‌ಗೆ ಆತಂಕ ಶುರು
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ತನ್ನ ಬಹುನಿರೀಕ್ಷಿತ ಹೊಸ ಹಾರ್ಲೆ-ಡೇವಿಡ್ಸನ್ X440 (Harley-Davidson X440) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿತು. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಆಕರ್ಷಕ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಹೊಸ ಸಂಚಲನವನ್ನು ಸೃಷ್ಟಿಸಿತು.
ದ್ವಿಚಕ್ರ ವಾಹನದ ಪ್ರಮುಖ ಹೀರೋ ಮೋಟೋಕಾರ್ಪ್ ತನ್ನ ಮೊದಲ ಸಹ-ಅಭಿವೃದ್ಧಿಪಡಿಸಿದ ಪ್ರೀಮಿಯಂ ಬೈಕ್ ಹಾರ್ಲೆ-ಡೇವಿಡ್ಸನ್ X440 ಬೈಕ್ ವಿತರಣೆಯು ಅಕ್ಟೋಬರ್ 15 ರಿಂದ ಪ್ರಾರಂಭವಾಗಲಿದೆ. ಈ 2023ರ ಹಾರ್ಲೆ-ಡೇವಿಡ್ಸನ್ X440 ಬೈಕಿಗೆ ಜುಲೈ 4 ರಂದು ಬುಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದರು. ಇದೀಗ ಈ ಬೈಕಿಗೆ 25,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 65 ಪ್ರತಿಶತದಷ್ಟು ಟಾಪ್-ಎಂಡ್ S ವೇರಿಯಂಟ್‌ಗೆ ಬುಕಿಂಗ್‌ಗಳನ್ನು ಪಡೆದುಕೊಂಡಿದೆ.

ಹಾರ್ಲೆ-ಡೇವಿಡ್ಸನ್ ಅದರ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ವಿಸ್ತರಿಸಲು ಕೆಲಸ ಮಾಡುತ್ತಿದ್ದಾರೆ. ಹಾರ್ಲೆ-ಡೇವಿಡ್ಸನ್ ಕಂಪನಿಯು ತನ್ನ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ ಪರಿಚಯಾತ್ಮಕ ಬೆಲೆಗಳ ಮೇಲೆ ರೂ.10,500 ಹೆಚ್ಚಳವನ್ನು ಇತ್ತೀಚೆಗೆ ಘೋಷಿಸಿತು. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಪರಿಚಯಾತ್ಮಕ ಬೆಲೆಯು ರೂ.2,29,000 ಆಗಿದ್ದರೆ, ಇದೀಗ ಈ ಬೈಕಿನ ಬೆಲೆಯು ರೂ.2,39,500 ಆಗಿದೆ. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಪರಿಚಯಾತ್ಮಕ ಬೆಲೆಯು ಸಾಕಷ್ಟು ಸ್ಪರ್ಧಾತ್ಮಕವಾಗಿತ್ತು.
ಆದರೆ ಈಗ ತುಸು ದುಬಾರಿಯಾಗಿದೆ. ಈ ಬಹುಬೇಡಿಕೆಯ ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ ಟೆಸ್ಟ್ ಡ್ರೈವ್ ಪ್ರಾರಂಭವಾಗಿದೆ. ಇನ್ನು ಈ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, 440cc ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಸರಿಸುಮಾರು 27 bhp ಪವರ್ ಮತ್ತು 38 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ 3 ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದ್ದು, ಇದು ಡೆನಿಮ್, ವಿವಿಡ್ ಮತ್ತು ಎಸ್ ಆಗಿದೆ. ಇದರಲ್ಲಿ ಈ ರೂಪಾಂತರಗಳಲ್ಲಿ, 'ಡೆನಿಮ್' ಮೂಲ ರೂಪಾಂತರವಾಗಿದೆ, ಆದರೆ 'S' ಟಾಪ್ ರೂಪಾಂತರವಾಗಿದೆ. ಹಾರ್ಲೆ-ಡೇವಿಡ್ಸನ್ ಕಂಪನಿಯ ಅತ್ಯಂತ ಕೈಗೆಟುವ ಬೈಕ್ ಇದಾಗಿದೆ. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ.
ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ದೊಡ್ಡ ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು ನಯವಾದ ಟೇಲ್ ವಿಭಾಗದೊಂದಿಗೆ ಸುಂದರವಾಗಿ ಕಾಣುತ್ತದೆ. ಹೆಚ್ಚುವರಿಯಾಗಿ, ಈ ಬೈಕ್ ನ್ಯೂ-ರೆಟ್ರೊ ಲುಕ್ ನೀಡಲು ವೃತ್ತಾಕಾರದ ವಿನ್ಯಾಸದ ಅಂಶಗಳನ್ನು ಕೂಡಿದೆ. 2023ರ ಹಾರ್ಲೆ-ಡೇವಿಡ್ಸನ್ X440ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಒಳಗೊಂಡಿವೆ.
ಇದರೊಂದಿಗೆ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ LED ಲೈಟಿಂಗ್, ಆಂಬಿಯೆಂಟ್ ಲೈಟ್ ಸೆನ್ಸರ್‌ನೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ. ಇತರ ಗಮನಾರ್ಹ ಫೀಚರ್ಸ್ ಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್, ಮ್ಯೂಸಿಕ್ ಕಂಟ್ರೋಲ್ ಮತ್ತು ಗೇರ್ ಸ್ಥಾನವನ್ನು ಪ್ರದರ್ಶಿಸಲಾಗುತ್ತದೆ.
ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಮಸ್ಟರ್ಡ್ ಡೆನಿಮ್, ಮೆಟಾಲಿಕ್ ಡಾರ್ಕ್ ಸಿಲ್ವರ್, ಮೆಟಾಲಿಕ್ ಥಿಕ್ ಸಿಲ್ವರ್ ಮತ್ತು ಮ್ಯಾಟ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳ ಈ ಬಣ್ಣಗಳಲ್ಲಿ, ಮೊದಲ ಮತ್ತು ಕೊನೆಯ ಬಣ್ಣಗಳು ಕ್ರಮವಾಗಿ ಬೇಸ್ ಮತ್ತು ಟಾಪ್-ಸ್ಪೆಕ್ ಮಾದರಿಗಳಿಗೆ ಪ್ರತ್ಯೇಕಿಸುತ್ತದೆ. ಕೈಗೆಟುಕುವ ಬೆಲೆ ಮತ್ತು ಆಕರ್ಷಕ ವಿನ್ಯಾಸದ ಮೂಲಕ ಈ ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.


Click it and Unblock the Notifications








