ಕೈಗೆಟುಕುವ ಬೆಲೆಯಲ್ಲಿ ಬರುತ್ತಿದೆ ಹಾರ್ಲೆ-ಡೇವಿಡ್ಸನ್ ಬೈಕ್: ರಾಯಲ್ ಎನ್‌ಫೀಲ್ಡ್‌ಗೆ ಆತಂಕ ಶುರು

ಜನಪ್ರಿಯ ಬೈಕ್ ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ಭಾರತೀಯ ಮಾರುಕಟ್ಟೆಯಲ್ಲಿ ನಿರ್ಗಮನವನ್ನು ಘೋಷಿಸಿದ್ದರು. ಆದರೆ ನಂತರದಲ್ಲಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ಜೊತೆಗೆ ಪಾಲುದಾರಿಕೆ ಮಾಡುವ ಮೂಲಕ ತನ್ನ ಕಾರ್ಯಾಚರಣೆಗಳನ್ನು ಉಳಿಸುವಲ್ಲಿ ಯಶಸ್ವಿಯಾದರು. ಸೇಲ್ಸ್, ಸರ್ವಿಸ್ ಮತ್ತು ಹೊಸ ಮಾದರಿಗಳ ಬಿಡುಗಡೆಯು ಕೂಡ ಪಾಲುದಾರಿಕೆಯ ಒಪ್ಪಂದದ ಭಾಗವಾಗಿದೆ.

ಇದೀಗ ಅಮೆರಿಕ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ಮತ್ತು ಭಾರತದ ಹೀರೋ ಮೋಟೋಕಾರ್ಪ್ ಕಂಪನಿಗಳ ಸಹಭಾಗಿತ್ವದ ಅಡಿಯಲ್ಲಿ ಹೊಸ ಹಾರ್ಲೆ-ಡೇವಿಡ್ಸನ್ X440 (Harley-Davidson X440) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ರೆಡಿಯಾಗಿದೆ. ಇದೀಗ ಅಮೆರಿಕ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ತನ್ನ ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ ಚಿತ್ರಗಳನ್ನು ಬಹಿರಂಗಪಡಿಸಿದೆ.

Harley-Davidson X440

ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ಜುಲೈ 3 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಹಾರ್ಲೆ-ಡೇವಿಡ್ಸನ್ X440 ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿತು. ಈ ಹೊಸ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ರೂ.25,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇದು ಭಾರತದಲ್ಲಿನ ಅಮೇರಿಕನ್ ಬೈಕ್ ತಯಾಕರಿಂದ ಅತ್ಯಂತ ಕೈಗೆಟುಕುವ ಬೈಕ್ ಆಗಿರಲಿದೆ. ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಲಾಂಗ್ ರೈಡ್‌ಗಳಿಗೂ ಸೂಕ್ತವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಅನ್ನು ಹೀರೋ ಮೋಟೋಕಾರ್ಪ್ ಕಂಪನಿಯು ತಯಾರಿಸುತ್ತಿದೆ. ಮುಂಬರುವ ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು ನಯಗೊಳಿಸಿದ ಹಿಂಭಾಗದ ವಿಭಾಗದೊಂದಿಗೆ ಬುಚ್-ಕಾಣುವ ಬೈಕ್ ಆಗಿದೆ. ಹೆಚ್ಚುವರಿಯಾಗಿ, ಮುಂಬರುವ ಹಾರ್ಲೆ-ಡೇವಿಡ್‌ಸನ್ ಮೋಟಾರ್‌ಸೈಕಲ್ ಹೆಡ್‌ಲೈಟ್‌ಗಳು, ಟರ್ನ್ ಇಂಡಿಕೇಟರ್‌ಗಳು ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೃತ್ತಾಕಾರದ ಅಂಶಗಳನ್ನು ಸಹ ಒಳಗೊಂಡಿದೆ.

Harley-Davidson X440

ಇನ್ನು ಈ ಹೊಸ ಹಾರ್ಲೆ ಬೈಕ್ ಮುಂಭಾಗದಲ್ಲಿ 18 ಇಂಚಿನ ವ್ಹೀಲ್ ಗಳನ್ನು ಮತ್ತು ಹಿಂಭಾಗದಲ್ಲಿ 17 ಇಂಚಿನ ವ್ಹೀಲ್ ಗಳನ್ನು ಒಳಗೊಂಡಿವೆ. ಇದರರ್ಥ ಮೋಟಾರ್‌ಸೈಕಲ್ ನಗರ ಸವಾರಿಗಳಿಗೆ ಮತ್ತ್ ದೂರದ ಪ್ರವಾಸಗಳಿಗೂ ಸೂಕ್ತವಾಗಿದೆ. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಚಿತ್ರಗಳನ್ನು ನೋಡಿದಾಗ, ಮೋಟಾರ್‌ಸೈಕಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ.

ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ, ಡ್ಯುಯಲ್-ಚಾನೆಲ್ ABS ಮತ್ತು ಇನ್ನಷ್ಟು ಫೀಚರ್ಸ್ ಗಳನ್ನು ಒಳಗೊಂಡಿರಲಿವೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್ ಡಿಸ್ಕ್ ಬ್ರೇಕ್‌ಗಳಂತಹ ಫೀಚರ್ಸ್ ಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಹಾರ್ಲೆ-ಡೇವಿಡ್ಸನ್ ಬೈಕಿನಲ್ಲ್ ಬ್ಲೂಟೂತ್ ಸಂಪರ್ಕದೊಂದಿಗೆ TFT ಹೊಂದಿರುವ ಸಾಧ್ಯತೆಯಿರುವ ವೃತ್ತಾಕಾರದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

Harley-Davidson X440

ಇದರೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಒಂದು ಜೋಡಿ ಯುಎಸ್‌ಡಿ ಫೋರ್ಕ್‌ಗಳು ಮತ್ತು ಗ್ಯಾಸ್-ಚಾರ್ಜ್ಡ್ ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿವೆ. ಈ ಹೊಸ ಬೈಕಿಗೆ ಬ್ಲ್ಯಾಕ್ ಎಂಜಿನ್ ಬೇ ಮತ್ತು ಎಕ್ಸಾಸ್ಟ್ ಅದರ ಲುಕ್ ಇನ್ನಷ್ಟು ಹೆಚ್ಚಿಸುತ್ತದೆ. ಈ ಬೈಕ್ ಸಿಂಗಲ್ ಹಂತದ ಸೀಟನ್ನು ಪಡೆಯುತ್ತದೆ. ಎರಡೂ ಬದಿಯಲ್ಲಿ ದಪ್ಪವಾದ ಗ್ರ್ಯಾಬ್ ರೈಲ್ ಗಳಿವೆ. ಇನ್ನು ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಈಗಾಗಲೇ ಅನಾವರಣಗೊಳಿಸಲಾಗಿದೆ.

ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, 440cc ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಸರಿಸುಮಾರು 25-30bhp ಪವರ್ ಮತ್ತು 35-40Nm ಟಾರ್ಕ್ ಅನ್ನು ಉತ್ಪಾದಿಸುವ ಸಾಧ್ಯತೆಯಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುವ ಸಾಧ್ಯತೆಯಿದೆ. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಬೆಲೆಯು 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

More from DriveSpark

Article Published On: Saturday, June 10, 2023, 16:54 [IST]
English summary
New harley davidson x440 images revealed launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+