ರಾಯಲ್ ಎನ್‌ಫೀಲ್ಡ್‌ಗೆ ನಡುಕ ಹುಟ್ಟಿಸಿದ ಹಾರ್ಲೆ-ಡೇವಿಡ್ಸನ್ X440 ಬೆಲೆ ಏರಿಕೆ: ಆದರೂ ಇದು ಕೈಗೆಟುಕುವ ಬೈಕ್

ಅಮೆರಿಕ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ತನ್ನ ಬಹುನಿರೀಕ್ಷಿತ ಹೊಸ ಹಾರ್ಲೆ-ಡೇವಿಡ್ಸನ್ X440 (Harley-Davidson X440) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೊನೆಗೂ ಇತ್ತೀಚೆಗೆ ಬಿಡುಗಡೆಗೊಳಿತು. ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಂಡು ಭಾರತದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.

ಹಾರ್ಲೆ-ಡೇವಿಡ್ಸನ್ ಕಂಪನಿಯು ಅತ್ಯಂತ ಕೈಗೆಟುಕುವ ಹಾರ್ಲೆಗಾಗಿ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ಹೇಳಿಕೊಂಡಿದೆ. ಹಾರ್ಲೆ-ಡೇವಿಡ್ಸನ್‌ನಲ್ಲಿ ಕಂಡುಬರುವ ವಿಶಿಷ್ಟವಾದ ಕ್ರೂಸರ್ ಶೈಲಿಯ ಬದಲಿಗೆ ಶಕ್ತಿಯುತ ರೋಡ್‌ಸ್ಟರ್ ಅನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ. ಈ ಉದ್ದೇಶವನ್ನು ನೀವು ಈ ಹೊಸ ರ್ಲೆ-ಡೇವಿಡ್ಸನ್ X44 ಬೈಕಿನ ವಿನ್ಯಾಸದಲ್ಲಿ ಸ್ಪಷ್ಟವಾಗಿ ನೋಡಬಹುದು. ಹಾರ್ಲೆ-ಡೇವಿಡ್ಸನ್ X44 ಬೈಕಿನ ಬೆಲೆಯು ಆಗಸ್ಟ್ 04 ರಂದು ಹೆಚ್ಚಾಗಲಿದೆ.

Harley-Davidson X440

ಹಾರ್ಲೆ-ಡೇವಿಡ್ಸನ್ X44 ಬೈಕಿನ ಆಗಸ್ಟ್ 04ರಂದು ಪ್ರಾರಂಭಿಕ ಬೆಲೆ ರೂ. 2,39,500 ಆಗಲಿದೆ. ಈ ಬೈಕಿನ ಎಲಾ ರೂಪಾಂತರಗಳ ಬೆಲೆಯನ್ನು ರೂ.10,500 ಗಳವರೆಗೆ ಹೆಚ್ಚಾಗುತ್ತದೆ. ಹಾರ್ಲೆ-ಡೇವಿಡ್ಸನ್ X44 ಬೈಕಿನ ಉತ್ಪಾದನೆಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭಿಸುತ್ತದೆ. ರಾಜಸ್ಥಾನದ ನೀಮ್ರಾನಾದಲ್ಲಿರುವ ಅದರ 'ಗಾರ್ಡನ್ ಫ್ಯಾಕ್ಟರಿ'ಯಲ್ಲಿ ಉತ್ಪಾದನೆ ಮಾಡುತ್ತಾರೆ. ಅಲ್ಲಿ ಪ್ರಸ್ತುತ, ಬೇಡಿಕೆಗೆ ಪ್ರತಿಕ್ರಿಯೆಯಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ.

ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನ ಟೆಸ್ಟ್ ಡ್ರೈವ್ ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್‌ನಲ್ಲಿ ಗ್ರಾಹಕರಿಗೆ ಬೈಕ್‌ಗಳನ್ನು ವಿತರಿಸಲು ಪ್ರಾರಂಭಿಸುವುದಾಗಿ ಹೀರೋ ಹೇಳಿದೆ. ಮುಂದಿನ ಆನ್‌ಲೈನ್ ಬುಕಿಂಗ್ ವಿಂಡೋ ಯಾವಾಗ ತೆರೆಯುತ್ತದೆ ಎಂಬುದನ್ನು ಇದು ಇನ್ನೂ ಘೋಷಿಸದಿದ್ದರೂ, ಬುಕಿಂಗ್ ಮತ್ತೆ ತೆರೆದಾಗ ಬೆಲೆಗಳು ಹೆಚ್ಚಾಗುತ್ತವೆ ಎಂದು ಸೂಚಿಸಿದೆ. ಸದ್ಯ ಈ ಬೈಕಿಗೆ ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ.

Harley-Davidson X440

ಇನ್ನು ಈ ಹಾರ್ಲೆ-ಡೇವಿಡ್ಸನ್ X440 ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, 440cc ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಸರಿಸುಮಾರು 27 bhp ಪವರ್ ಮತ್ತು 38 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ 3 ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದ್ದು, ಇದು ಡೆನಿಮ್, ವಿವಿಡ್ ಮತ್ತು ಎಸ್ ಆಗಿದೆ. ಇದರಲ್ಲಿ ಈ ರೂಪಾಂತರಗಳಲ್ಲಿ, 'ಡೆನಿಮ್' ಮೂಲ ರೂಪಾಂತರವಾಗಿದೆ, ಆದರೆ 'S' ಟಾಪ್ ರೂಪಾಂತರವಾಗಿದೆ. ಹಾರ್ಲೆ-ಡೇವಿಡ್ಸನ್ ಕಂಪನಿಯ ಅತ್ಯಂತ ಕೈಗೆಟುವ ಬೈಕ್ ಇದಾಗಿದೆ. ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಆಕರ್ಷಕ ವಿನ್ಯಾಸವನ್ನು ಒಳಗೊಂಡಿದೆ.

Harley-Davidson X440

ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ದೊಡ್ಡ ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು ನಯವಾದ ಟೇಲ್ ವಿಭಾಗದೊಂದಿಗೆ ಸುಂದರವಾಗಿ ಕಾಣುತ್ತದೆ. ಹೆಚ್ಚುವರಿಯಾಗಿ, ಈ ಬೈಕ್ ನ್ಯೂ-ರೆಟ್ರೊ ಲುಕ್ ನೀಡಲು ವೃತ್ತಾಕಾರದ ವಿನ್ಯಾಸದ ಅಂಶಗಳನ್ನು ಒಳಗೊಂಡಿದೆ. ಈ ಹೊಸ ಹಾರ್ಲೆ-ಡೇವಿಡ್ಸನ್ X440ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ.

ಇದರೊಂದಿಗೆ ಹೊಸ ಬೈಕಿನಲ್ಲಿ LED ಲೈಟಿಂಗ್, ಆಂಬಿಯೆಂಟ್ ಲೈಟ್ ಸೆನ್ಸರ್‌ನೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ. ಇತರ ಗಮನಾರ್ಹ ಫೀಚರ್ಸ್ ಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್, ಮ್ಯೂಸಿಕ್ ಕಂಟ್ರೋಲ್ ಮತ್ತು ಗೇರ್ ಸ್ಥಾನವನ್ನು ಪ್ರದರ್ಶಿಸುತ್ತದೆ. ಕೈಗೆಟುಕುವ ಬೆಲೆ ಮತ್ತು ಆಕರ್ಷಕ ವಿನ್ಯಾಸದ ಮೂಲಕ ಈ ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ಮಸ್ಟರ್ಡ್ ಡೆನಿಮ್, ಮೆಟಾಲಿಕ್ ಡಾರ್ಕ್ ಸಿಲ್ವರ್, ಮೆಟಾಲಿಕ್ ಥಿಕ್ ಸಿಲ್ವರ್ ಮತ್ತು ಮ್ಯಾಟ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳ ಈ ಬಣ್ಣಗಳಲ್ಲಿ, ಮೊದಲ ಮತ್ತು ಕೊನೆಯ ಬಣ್ಣಗಳು ಕ್ರಮವಾಗಿ ಬೇಸ್ ಮತ್ತು ಟಾಪ್-ಸ್ಪೆಕ್ ಮಾದರಿಗಳಿಗೆ ಪ್ರತ್ಯೇಕಿಸುತ್ತದೆ. ಈ ಬೈಕ್ ಆಕರ್ಷಕ ಬಣ್ಣಗಳ ಆಯ್ಕೆಯು ಗ್ರಾಹಕರನ್ನು ಸೆಳೆಯುತ್ತದೆ.

More from DriveSpark

Article Published On: Wednesday, August 2, 2023, 16:44 [IST]
English summary
New harley davidson x440 price hike details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+