ಆಕರ್ಷಕ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ ಅನಾವರಣ
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದ್ದು, ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ ಅನ್ನು ಅನವರಣಗೊಳಿಸಿದೆ. ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ ಸೀಮಿತ ಆವೃತ್ತಿಯ ಫ್ಯಾಕ್ಟರಿ ಕಸ್ಟಮ್ ಆವೃತ್ತಿಯಾಗಿತ್ತು ಮತ್ತು ಉತ್ಪಾದನೆಯು ಕೇವಲ 25 ಯುನಿಟ್ ಗಳಿಗೆ ಸೀಮಿತವಾಗಿತ್ತು.
ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 (Royal Enfield Shotgun 650) ಉತ್ಪಾದನಾ ಆವೃತ್ತಿಯನ್ನು ಬಹಿರಂಗಪಡಿಸಿದೆ, ಇದನ್ನು ಮುಂದಿನ ವರ್ಷದ ಆರಂಭದಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ ಸ್ಟೆನ್ಸಿಲ್ ವೈಟ್, ಪ್ಲಾಸ್ಮಾ ಬ್ಲೂ, ಗ್ರೀನ್ ಡ್ರಿಲ್ ಮತ್ತು ಶೀಟ್‌ಮೆಟಲ್ ಗ್ರೇ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಈ ಹೊಸ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ ಸೂಪರ್ ಮೀಟಿಯರ್ 650, ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಅನ್ನು ಆಧಾರವಾಗಿರುವ RE 650-ಟ್ವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು ಮೂಲತಃ SG650 ಕಾನ್ಸೆಪ್ಟ್‌ನ ಉತ್ಪಾದನಾ ಆವೃತ್ತಿಯಾಗಿದೆ, ಇದನ್ನು EICMA 2021 ನಲ್ಲಿ ಪ್ರದರ್ಶಿಸಲಾಯಿತು.
ಈ ಬೈಕ್ ಸೂಪರ್ ಮೀಟಿಯರ್‌ನಂತೆಯೇ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಈ ಬೈಕ್ ಎಲ್‌ಇಡಿ ಹೆಡ್‌ಲೈಟ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಅನ್ನು ಒಳಗೊಂಡಿದೆ. ಗ್ರಾಹಕರು ಸಿಂಗಲ್ ಸೀಟರ್ ಅಥವಾ ಪಿಲಿಯನ್ ಸೀಟನ್ನು ಆಯ್ಕೆ ಮಾಡಬಹುದು. ಮೋಟಾರ್‌ಸೈಕಲ್ ಹೆಚ್ಚು ನೇರವಾದ ಸೀಟುಗಳೊಂದಿಗೆ ಫ್ಲಾಟರ್ ಹ್ಯಾಂಡಲ್‌ಬಾರ್ ಮತ್ತು ಹೆಚ್ಚು ಮಧ್ಯ-ಸೆಟ್ ಫುಟ್‌ಪೆಗ್‌ಗಳೊಂದಿಗೆ ಬರುತ್ತದೆ.

ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕಿನಲ್ಲಿ 648cc, ಪ್ಯಾರಲಲ್ ಟ್ವಿನ್, 4-ಸ್ಟ್ರೋಕ್, SOHC, ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7250rpm ನಲ್ಲಿ 46.3hp ಮತ್ತು 5,650rpm ನಲ್ಲಿ 52.3Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಈ ಬೈಕ್ 22 ಕಿ.ಮೀ ಮೈಲೇಜ್ ಅನು ನೀಡುತ್ತದೆ.
ಹೊಸ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ 1465 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ ಮತ್ತು 140 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇನ್ನು ಹೊಸ ಶಾಟ್‌ಗನ್ 650 2170mm ಉದ್ದ, 820mm ಅಗಲ ಮತ್ತು 1105mm ಎತ್ತರವನ್ನು ಹೊಂದಿದೆ. ಇನ್ನು ಬಾಬರ್ 240 ಕೆಜಿ ತೂಕವನ್ನು ಹೊಂದಿದೆ ಮತ್ತು 428 ಕೆಜಿ ಗರಿಷ್ಠ ಒಟ್ಟು ವಾಹನ ತೂಕ (GVW) ಹೊಂದಿದೆ. ಇದು 13.8-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, USD ಫ್ರಂಟ್ ಫೋರ್ಕ್‌ನೊಂದಿಗೆ 120mm ಟ್ರ್ಯಾವೆಲ್ ನೊಂದಿಗೆ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ಒಳಗೊಂಡಿದೆ. ಇನ್ನು ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ರೈಡ್‌ಗಳು 18-ಇಂಚಿನ ಮುಂಭಾಗದ ಚಕ್ರ ಮತ್ತು 17-ಇಂಚಿನ ಹಿಂದಿನ ಚಕ್ರ ಕ್ರಮವಾಗಿ 100/90 ಮತ್ತು 150/70 ವಿಭಾಗದ ಟೈರ್‌ಗಳಲ್ಲಿ ಒಳಗೊಂಡಿದೆ.
ಇನ್ನು ಹೊಸ ರಾಯಲ್ ಎನ್‌ಫೀಲ್ಡ್ ಕಂಪನಿಯು ಶಾಟ್‌ಗನ್ 650 ಬೈಕ್ ಬ್ರೇಂಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 320mm ಫ್ರಂಟ್ ಡಿಸ್ಕ್ ಮತ್ತು 300mm ಹಿಂಭಾಗದ ಡಿಸ್ಕ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








