TVS: ಹೊಸ ಟಿವಿಎಸ್ ಜುಪಿಟರ್ 125 'ಸ್ಮಾರ್ಟ್ ಕನೆಕ್ಟ್' ಸ್ಕೂಟರ್ ಬಿಡುಗಡೆ, ವಿಶೇಷತೆಗಳಿಗೆ ಫಿದಾ ಆಗೋದು ಪಕ್ಕಾ!

ಭಾರತದಲ್ಲಿ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಗ್ರಾಹಕರ ಕೈಗೆಟುಕುವ ಬೆಲೆಗೆ ಆಕರ್ಷಕ ಬೈಕ್ ಹಾಗೂ ಸ್ಕೂಟರ್ ಬಿಡುಗಡೆಗೊಳಿಸುತ್ತಿರುತ್ತದೆ. ಸದ್ಯ, ಕಂಪನಿಯು ಹೊಚ್ಚ ಹೊಸ ಜುಪಿಟರ್ 125 ಸ್ಮಾರ್ಟ್ ಕನೆಕ್ಟ್ (Jupiter 125 SmartXonnect) ಸ್ಕೂಟರ್ ಲಾಂಚ್ ಮಾಡಿದೆ.

ನೂತನ ಟಿವಿಎಸ್ ಜುಪಿಟರ್ 125 ಸ್ಮಾರ್ಟ್ ಕನೆಕ್ಟ್ ಸ್ಕೂಟರ್, ರೂ.96,855 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇತರೆ, ಜುಪಿಟರ್ 125 ರೂಪಾಂತರಗಳಾದ ಡಿಸ್ಕ್ ಬ್ರೇಕ್ (disc brake) ಹಾಗೂ ಅಲಾಯ್ ವೀಲ್ಸ್ (alloy wheels)ಗೆ ಹೋಲಿಕೆ ಮಾಡಿದರೆ, ರೂ.6,200 ಅಧಿಕ ದರವನ್ನು ಹೊಂದಿದ್ದು, ಬೆಲೆಗೆ ತಕ್ಕಂತೆ ನೀರಿಕ್ಷೆಗೂ ಮೀರಿದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

TVS: ಹೊಸ ಟಿವಿಎಸ್ ಜುಪಿಟರ್ 125 ಸ್ಮಾರ್ಟ್ ಕನೆಕ್ಟ್ ಸ್ಕೂಟರ್ ಬಿಡುಗಡೆ, ವಿಶೇಷತೆಗಳಿಗೆ ಪಿಧಾ ಆಗೋದು ಪಕ್ಕಾ!

ಟಿವಿಎಸ್ ಜುಪಿಟರ್ 125, ಸ್ಮಾರ್ಟ್ ಕನೆಕ್ಟ್ ತಂತ್ರಜ್ಞಾನ (SmartXonnect technology) ಹೊಂದಿದ್ದು, ಅದರಿಂದಾಗಿ ಈ ಸ್ಕೂಟರ್, ಟಿಎಫ್‌ಟಿ ಸ್ಕ್ರೀನ್ (TFT screen)ನೊಂದಿಗೆ ಸ್ಮಾರ್ಟ್ ಫೋನ್ ಸಂಪರ್ಕಿಸಬಹುದು. ಇದು, ಕಾಲ್, ಮೆಸೇಜ್, ಸೋಷಿಯಲ್ ಮೀಡಿಯಾ, ಫುಡ್ ಹಾಗೂ ಶಾಪಿಂಗ್ ಆಪ್‍ಗಳ ನೋಟಿಫಿಕೇಶನ್ ಅನ್ನು ತೋರಿಸುತ್ತದೆ. ಜೊತೆಗೆ ನ್ಯೂಸ್, ಸ್ಪೋರ್ಟ್ ಸ್ಕೋರ್ ಹಾಗೂ ವೆದರ್ (ಹವಾಮಾನ) ಮಾಹಿತಿಯನ್ನು ಒದಗಿಸುತ್ತದೆ.

ಇದರೊಟ್ಟಿಗೆ ಹೊಸ ಟಿವಿಎಸ್ ಜುಪಿಟರ್ 125 ಸ್ಕೂಟರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಹಾಗೂ ವಾಯ್ಸ್ ಅಸಿಸ್ಟ್ ಫೀಚರ್ ಅನ್ನು ಪಡೆದಿದ್ದು, ಈ ಸ್ಕೂಟರ್‌ನಲ್ಲಿ ಎರಡು ಹೊಸ ಸುರಕ್ಷತಾ ವೈಶಿಷ್ಟ್ಯಗಳು (safety features) ಇವೆ. ಅವುಗಳೆಂದರೆ ಫಾಲೋ-ಮಿ ಹೆಡ್‌ಲ್ಯಾಂಪ್ (follow-me headlamp) ಹಾಗೂ ಹಝರ್ಡ್ ಲೈಟ್ (hazard lights). ಈ ಹೆಡ್‌ಲ್ಯಾಂಪ್ ಹೆಚ್ಚು ಪ್ರಕಾಶಮಾನವಾಗಿರುತ್ತದೆ.

TVS: ಹೊಸ ಟಿವಿಎಸ್ ಜುಪಿಟರ್ 125 ಸ್ಮಾರ್ಟ್ ಕನೆಕ್ಟ್ ಸ್ಕೂಟರ್ ಬಿಡುಗಡೆ, ವಿಶೇಷತೆಗಳಿಗೆ ಪಿಧಾ ಆಗೋದು ಪಕ್ಕಾ!

ಹೊಸ ಟಿವಿಎಸ್ ಜುಪಿಟರ್ 125 ಸ್ಮಾರ್ಟ್ ಕನೆಕ್ಟ್ ಸ್ಕೂಟರ್, ಹಿಂದಿನ ಮಾದರಿಯಂತೆ 124.8 ಸಿಸಿ ಎಂಜಿನ್ ಹೊಂದಿದ್ದು, 8.04 bhp ಗರಿಷ್ಠ ಪವರ್ ಹಾಗೂ 10.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸರಿ ಸುಮಾರು 50 kmpl ಮೈಲೇಜ್ ನೀಡಬಹುದು ಎಂದು ಅಂದಾಜಿಲಾಗಿದೆ.

ಈ ಸ್ಕೂಟರ್ ನಲ್ಲಿ ಎರಡು ಹೊಸ ಬಣ್ಣದ ಆಯ್ಕೆಯನ್ನು ದೊರೆಯುತ್ತದೆ. ಅವುಗಳೆದರೆ, ಎಲಿಗೆಂಟ್ ರೆಡ್ (Elegant Red) ಹಾಗೂ ಮ್ಯಾಟ್ ಕಾಪರ್ ಬ್ರೊನ್ (Matte Copper Bronze). ನೂತನ ಜುಪಿಟರ್ 125 ಸ್ಮಾರ್ಟ್ ಕನೆಕ್ಟ್ ಸ್ಕೂಟರ್, 108 ಕೆಜಿ ತೂಕವಿದ್ದು, 12 - ಇಂಚಿನ ಅಲಾಯ್ ವೀಲ್ಸ್ ಒಳಗೊಂಡಿದೆ. 33 - ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್ ಅನ್ನು ಪಡೆದಿದೆ.

ಟಿವಿಎಸ್ ಜುಪಿಟರ್ 125 ಸ್ಮಾರ್ಟ್ ಕನೆಕ್ಟ್ ಸ್ಕೂಟರ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಮೊನೊಶಾಕ್‌ ಸೆಟಪ್ ಹೊಂದಿದೆ. ಬ್ರೇಕಿಂಗ್ ವಿಚಾರವಾಗಿ ಮಾತನಾಡುವದಾದರೆ, ಈ ಸ್ಕೂಟರ್ ಡಿಸ್ಕ್ - ಡ್ರಮ್ ಬ್ರೇಕ್ ಕಾಂಬಿನೇಷನ್ ಅನ್ನು ಹೊಂದಿದೆ. ಜೊತೆಗೆ ಡ್ಯುಯಲ್ ಡ್ರಮ್ ಬ್ರೇಕ್ ರೂಪಾಂತರದಲ್ಲೂ ಕೂಡ ಖರೀದಿಗೆ ಸಿಗುತ್ತದೆ.

ಹೊಸ ಸ್ಕೂಟರ್‌ಗೆ ಹೋಂಡಾ ಆಕ್ಟಿವಾ 125 (Honda Activa 125) ಮತ್ತು ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್‌ಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಇದೀಗ, ದಸರಾ ಹಬ್ಬದ ವೇಳೆಗೆ ಕೈಗೆಟುಕುವ ಬೆಲೆಯಲ್ಲಿ ಈ ಸ್ಕೂಟರ್ ಲಾಂಚ್ ಆಗಿರುವುದು ಅದರ ಅಭಿಮಾನಿಗಳಿಗೆ ಖುಷಿ ನೀಡಿದೆ. ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಮುಂಬರುವ ದಿನಗಳಲ್ಲಿ ಈ ಸ್ಕೂಟರ್‌ಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 17, 2023, 14:32 [IST]
English summary
New tvs jupiter 125 smartxonnect variant launched india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+