TVS X: ವರಮಹಾಲಕ್ಷ್ಮಿ ಹಬ್ಬಕ್ಕೆ ಟಿವಿಎಸ್ ಅದ್ಬುತ ಕೊಡುಗೆ: ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಮೊದಲೇ ಅರಿತಿದ್ದ ಟಿವಿಎಸ್ ಕಂಪನಿ ಐಕ್ಯೂಬ್ ಮೂಲಕ ಸದ್ಯ ಇವಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಆದ್ರೆ ಮುಂದಿನ ದಿನಗಳಲ್ಲಿ ಎದುರಾಗುವ ತೀವ್ರ ಪೈಪೋಟಿ ಎದುರಿಸಬೇಕಾದ್ರೆ ಐಕ್ಯೂಬ್‌ಗಿಂತ ಹೆಚ್ಚಿನ ಸಾಮರ್ಥ್ಯದ ದ್ವಿಚಕ್ರ ವಾಹನ ಇಳಿಸಲೇಬೇಕಾದ ಅನಿವಾರ್ಯತೆ ಕಂಪನಿಗಿದೆ.
ಕೊನೆಗೂ ಇಂದು (ಆಗಸ್ಟ್ 23) ಅಂದುಕೊಂಡ ಸಮಯಕ್ಕೆ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ದುಬೈನಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದ್ದು, ಟಿವಿಎಸ್ ಮೋಟಾರ್ ಇದಕ್ಕೆ X ಎಂಬ ಹೆಸರನ್ನು ನೀಡಿದೆ. ಈ ಟಿವಿಎಸ್ X ಪರ್ಫಾಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ. 2.50 ಲಕ್ಷ (ಎಕ್ಸ್ ಶೋರೂಂ) ಇದೆ.

ಮೊದಲ 2,000 ಗ್ರಾಹಕರಿಗೆ ಹೆಚ್ಚುವರಿ ರೂ. 18,000 ಮೊದಲ ಆವೃತ್ತಿಯ ಪ್ಯಾಕೇಜ್ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ. TVS X ಗಾಗಿ ಬುಕಿಂಗ್‌ಗಳು ಆಗಸ್ಟ್ 24 ರಂದು ಮಧ್ಯರಾತ್ರಿ ಪ್ರಾರಂಭವಾಗಲಿದ್ದು, ವಿತರಣೆಗಳು ನವೆಂಬರ್‌ನಿಂದ ಪ್ರಾರಂಭವಾಗುತ್ತವೆ. ಇದು iQube ನಂತರ ಕಂಪನಿಯ ಎರಡನೇ ಎಲೆಕ್ಟ್ರಿಕ್ ಕೊಡುಗೆಯಾಗಿದ್ದು, ಹೆಚ್ಚು ಪ್ರೀಮಿಯಂ ಹಾಗೂ ಪವರ್ ಮತ್ತು ತಂತ್ರಜ್ಞಾನದಲ್ಲಿ ಐಕ್ಯೂಬ್‌ಗಿಂತ ದೊಡ್ಡದಾಗಿದೆ.
ಅದ್ಬುತ ವೈಶಿಷ್ಟ್ಯಗಳು: ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ TVS ಸ್ಮಾರ್ಟ್ Xhield ಅನ್ನು ಹೊಂದಿದ್ದು, ಇದು ವೇಗದ ಮಿತಿ, ಅತಿವೇಗದ ಎಚ್ಚರಿಕೆ, ಕ್ರಾಷ್ ಡಿಟೆಕ್ಷನ್ (ಅಪಘಾತ ಪತ್ತೆ), ಜಿಯೋಫೆನ್ಸಿಂಗ್, ಟೋವಿಂಗ್ ಎಚ್ಚರಿಕೆ, ಆಟೋ-ಲಾಕಿಂಗ್ ಒಳಗೊಂಡಂತೆ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಇದರ ಇನ್ಫೋಟೈನ್‌ಮೆಂಟ್ ಸಿಸ್ಟಂ ಕಸ್ಟಮೈಸ್ ಮಾಡಬಹುದಾಗಿದೆ.

ಕಂಪನಿಯು ಆಂತರಿಕವಾಗಿ ಅಭಿವೃದ್ಧಿಪಡಿಸಿದ NavPro ಎಂಬ ಹೊಸ ತಲೆಮಾರಿನ SmartXonnect ಪ್ಲಾಟ್‌ಫಾರ್ಮ್ ಅನ್ನು ಇದಕ್ಕಾಗಿ ಪರಿಚಯಿಸಿದೆ. ಇದು 10.25-ಇಂಚಿನ HD ಟಿಲ್ಟ್ ಸ್ಕ್ರೀನ್ ಸೆಟಪ್‌ನೊಂದಿಗೆ ಬರಲಿದ್ದು, ಇನ್ಫೋಟೈನ್‌ಮೆಂಟ್ ಸಿಸ್ಟಮ್ ನ್ಯಾವಿಗೇಷನ್, ಗೇಮ್‌ಗಳು, ಸಂಗೀತ ಸೇರಿದಂತೆ ಹಲವು ಅಪ್ಲಿಕೇಶನ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊಸದೇನಿದೆ: ಹೊಸ TVS X ಹೊಸದಾಗಿ ಅಭಿವೃದ್ಧಿಪಡಿಸಿದ Xleton ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಅಂದರೆ ಇದು ಇತರ ಸಾಮಾನ್ಯ ಸ್ಕೂಟರ್‌ಗಳಿಗಿಂತ 2.5 ಪಟ್ಟು ಗಟ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ವಿಶಾಲವಾದ ಸೀಟ್‌ಗಳು ಸವಾರನಿಗೆ ಮಾತ್ರವಲ್ಲದೆ ಹಿಂಬದಿ ಕುಳಿತವರಿಗೂ ಆರಾಮವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಇನ್ನು ಇದರ ಬೂಟ್ ನೋಡಿಕೊಂಡರೆ ಸಾಮಾನ್ಯ ಸ್ಕೂಟರ್‌ಗಳಷ್ಟೇ ಜಾಗವನ್ನು ನೀಡಿದ್ದು, ಸೀಟಿನ ಕೆಳಗೆ ಯೋಗ್ಯವಾದ 19 ಲೀಟರ್ ಸಂಗ್ರಹಣೆಗೆ ಅನುವು ಮಾಡಿಕೊಡಲಾಗಿದೆ. ಉಳಿದಂತೆ ಸ್ಕೂಟರ್ Xtealth, Xtride ಮತ್ತು Xonic ಎಂಬ ಮೂರು ರೈಡಿಂಗ್ ಮೋಡ್‌ಗಳೊಂದಿಗೆ ಬರಲಿದ್ದು, ಆಯ್ಕೆ ಮಾಡಬಹುದಾದ ಪುನರುತ್ಪಾದಕ ಬ್ರೇಕಿಂಗ್ ಅನ್ನು (ರೀಜೆನ್ ಬ್ರೇಕಿಂಗ್) ಕೂಡ ಪಡೆದಿದೆ.
ಹೇಗಿದೆ ಬ್ಯಾಟರಿ ಪವರ್? TVS X 4.44 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 140 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಇನ್ನು ಇದರ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ 11 kW (14.7 bhp) ಮೋಟಾರ್ ಜೊತೆಗೆ 7 kW (9.3 bhp) ನ ಪವರ್ ಉತ್ಪಾದನೆಯೊಂದಿಗೆ ಮಿಡ್-ಡ್ರೈವ್ ಮೋಟರ್ ಅನ್ನು ಪಡೆದಿದೆ.

ಹೇಗಿದೆ ಪರ್ಫಾಮೆನ್ಸ್: ಟಿವಿಎಸ್ ಎಕ್ಸ್ ಕೇವಲ 2.6 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ಸಾಧಿಸಬಲ್ಲದು, ಹಾಗಯೇ 60 ಕಿ.ಮೀ ವೇಗವನ್ನು ಕೇವಲ 4.5 ಸೆಕೆಂಡುಗಳಲ್ಲಿ ತಲುಪಬಲ್ಲದು. ಇದರ ಟಾಪ್ ಸ್ಪೀಡ್ ಗಂಟೆಗೆ 105 ಕಿ.ಮೀ ಇರುವುದಾಗಿ ಎಂದು ಕಂಪನಿ ತಿಳಿಸಿದೆ. ಕಂಪನಿಯು 3 ಗಂಟೆ 40 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಮಾಡಬಹುದು ಎಂದು ಹೇಳಿಕೊಂಡಿದೆ.
ಉದ್ದಳತೆ, ಬ್ರೇಕಿಂಗ್, ಸಸ್ಪೆನ್ಷನ್: ಟಿವಿಎಸ್ ಎಕ್ಸ್ ಗ್ರೌಂಡ್ ಕ್ಲಿಯರೆನ್ಸ್ 175 ಎಂಎಂ ಇದ್ದರೆ, ಸೀಟ್ ಎತ್ತರ 770 ಎಂಎಂ ಇದೆ. ಮುಂಭಾಗ ಟೆಲಿಸ್ಕೋಪಿಕ್ ಹಾಗೂ ಹಿಂಭಾಗ ಮೋನೊಷಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಇದರ ಅಲಾಯ್ ವೀಲ್‌ಗಳು ಮುಂಭಾಗ 100/80 ಟೈರ್ ಮತ್ತು 110/80 ಹಿಂಭಾಗದ ಟೈರ್ ಅನ್ನು ಪಡೆದಿವೆ.

ಬ್ರೇಕಿಂಗ್ ಅನ್ನು ನೋಡುವುದಾದರೆ 220 ಎಂಎಂ ಸಿಂಗಲ್ ಫ್ರಂಟ್ ಡಿಸ್ಕ್ ಮತ್ತು ಸಿಂಗಲ್ ಚಾನೆಲ್ ಎಬಿಎಸ್‌ನೊಂದಿಗೆ 195 ಎಂಎಂ ಹಿಂಭಾಗದ ಡಿಸ್ಕ್ ಸೆಟಪ್ ಹೊಂದಿದೆ. ಒಟ್ಟಾರೆ ಸ್ಕೂಟರ್ ನೋಡಲು ಆಕ್ರಮಣಕಾರಿ ಲುಕ್ ಹಾಗೂ ಸ್ಪೋರ್ಟಿ ಡಿಸೈನ್ ಅನ್ನು ಹೊಂದಿದೆ. ಈ ಸ್ಕೂಟರ್ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications