Yamaha: ಆಕರ್ಷಕ ಯಮಹಾ ಆರ್3, ಎಂಟಿ-03 ಬೈಕ್‌ಗಳ ಬಿಡುಗಡೆಗೆ ದಿನಾಂಕ ಘೋಷಣೆ, ಪ್ರತಿಸ್ಪರ್ಧಿಗಳಿಗೆ ಡವ-ಡವ!
ಭಾರತದಲ್ಲಿ ನವೀನ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಯಮಹಾ (Yamaha) ಕಂಪನಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಇದೀಗ, ಬಹುನೀರಿಕ್ಷಿತ ಆರ್3 (R3) ಹಾಗೂ ಎಂಟಿ-03 (MT-03) ಬೈಕ್ ಬಿಡುಗಡೆಗೆ ದಿನಾಂಕವನ್ನು ಘೋಷಣೆ ಮಾಡಿದ್ದು, ಗ್ರಾಹಕರು ಕಾತರದಿಂದ ಕಾಯುತ್ತಿದ್ದಾರೆ.
ನೂತನ ಯಮಹಾ ಆರ್3 ಮತ್ತು ಎಂಟಿ-03 ಬೈಕ್‌ಗಳು ಡಿಸೆಂಬರ್ 15 (December 15)ರಂದು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಈ ಮೋಟಾರ್‌ಸೈಕಲ್‌ಗಳನ್ನು ಯಮಹಾದ ಬ್ಲೂ ಸ್ಕ್ವೇರ್ (Blue Square) ಡೀಲರ್‌ಶಿಪ್ ಮೂಲಕ ಮಾರಾಟ ಮಾಡಲಾಗುತ್ತದೆ. ಶೀಘ್ರದಲ್ಲಿಯೇ ವಿತರಣೆಗಳು ಶುರುವಾಲಿದೆ. ಕೆಲವು ಡೀಲರ್‌ಶಿಪ್‌ಗಳಲ್ಲಿ ಈಗಾಗಲೇ ತೆರೆಮರೆಯಲ್ಲಿ ಬುಕ್ಕಿಂಗ್ ಆರಂಭವಾಗಿದೆ.

ಈ ಹೊಸ ಯಮಹಾ ಆರ್3 ಮತ್ತು ಎಂಟಿ-03 ಮೋಟಾರ್‌ಸೈಕಲ್‌ಗಳನ್ನು ಮೋಟೋಜಿಪಿ (Moto GP - 2023)ಯಲ್ಲಿ ಪ್ರದರ್ಶಿಸಲಾಗಿತ್ತು. ಆ ಮೂಲಕ ಎರಡು ಬೈಕ್‌ಗಳು ಬಿಡುಗಡೆಗೆ ಸಿದ್ಧವಾಗಿವೆ ಎಂದು ಯಮಹಾ ಸಂದೇಶ ನೀಡಿತ್ತು. ಇವುಗಳಿಗೆ ಭಾರತದಲ್ಲಿ ಸಾಲು - ಸಾಲು ಪ್ರತಿಸ್ಪರ್ಧಿಗಳಿವೆ. ಕವಾಸಕಿ ನಿಂಜಾ 300, ಕೆಟಿಎಂ ಆರ್‌ಸಿ 390, 390 ಡ್ಯೂಕ್, ಟಿವಿಎಸ್ ಅಪಾಚೆ ಆರ್‌ಆರ್ 310, ಬಿಎಂಡಬ್ಲ್ಯೂ ಜಿ 310 ಆರ್‌ಆರ್ ಎದುರಾಳಿಯಾಗಿವೆ.
ಈ ಹಿಂದೆ, ಯಮಹಾ ಆರ್3 (ಬಿಎಸ್4) ಖರೀದಿಗೆ ದೊರೆಯುತ್ತಿತ್ತು. ಆದರೆ, ವಿವಿಧ ಕಾರಣಗಳಿಗೆ ಅದರ ಮಾರಾಟವನ್ನು ದೇಶದಲ್ಲಿ ಸ್ಥಗಿತಗೊಳಿಸಲಾಗಿತ್ತು. ಕೆಲವೇ ದಿನಗಳಲ್ಲಿ ಬಿಡುಗಡೆಯಾಗುವ ನೂತನ ಬೈಕ್‌ಗಳು, ಕೆಟಿಎಂಗೆ ಹೋಲಿಸಿದರೆ, ಕೊಂಚ ಕಡಿಮೆ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. LED ಲೈಟಿಂಗ್, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಯಮಹಾ ಆರ್3 ಮತ್ತು ಎಂಟಿ-03 ಬೈಕ್‌ಗಳು, 321 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ಪಡೆದಿದ್ದು, 41.4 bhp ಗರಿಷ್ಠ ಪವರ್ ಹಾಗೂ 29.6 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಸ್ಲಿಪ್ & ಅಸಿಸ್ಟ್ ಕ್ಲಚ್ ಜೊತೆಗೆ 6 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಇವರೆಡು ಮೋಟಾರ್‌ಸೈಕಲ್‌ಗಳ ಪ್ಲಾಟ್‌ಫಾರ್ಮ್ ಒಂದೇ ಆಗಿದ್ದು, ಮುಂಭಾಗ ಅಪ್-ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಪಡೆದಿದೆ. ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಎರಡು ತುದಿಯಲ್ಲಿ ಡಿಸ್ಕ್ ಬ್ರೇಕ್ ಆಯ್ಕೆ ಹಾಗೂ ಡುಯಲ್ ಚಾನಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ. ಜೊತೆಗೆ 17 - ಇಂಚಿನ ಅಲಾಯ್ ವೀಲ್ಸ್ ಒಳಗೊಂಡಿದೆ.

ಯಮಹಾ, ದೇಶದಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್ ಮಾರಾಟ ಮಾಡುತ್ತದೆ. ಅದರಲ್ಲಿ ಕೆಲವೊಂದು ಮಾದರಿಗಳ ಬಗ್ಗೆ ಒಂದಷ್ಟು ತಿಲಯೋಣ. ಯಮಹಾ ಫ್ಯಾಸಿನೊ 125 (Yamaha Fascino 125) ಸ್ಕೂಟರ್, ರೂ.81,975 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 125 cc ಸಿಸಿ ಎಂಜಿನ್ ಹೊಂದಿದ್ದು, 49 kmpl ಮೈಲೇಜ್ ನೀಡುತ್ತದೆ.
ಇನ್ನುಳಿದಂತೆ, ಯಮಹಾ ಎಫ್‌ಝಡ್-ಎಸ್ ಎಫ್‌ಐ (ರೂ.1,21,979 ಎಕ್ಸ್ ಶೋರೂಂ), ಯಮಹಾ ಎಫ್‌ಝಡ್ಎಸ್ ಎಫ್‌ಐ ವಿ4 (ರೂ.1,29,982), ಯಮಹಾ ಆರ್15ಎಸ್ (ರೂ.1,65,756), ಯಮಹಾ ಎಫ್‌ಝಡ್ ಎಕ್ಸ್ (ರೂ.1,38,089) ಸೇರಿದಂತೆ ಅನೇಕ ದ್ವಿಚಕ್ರ ವಾಹನಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ಈಗ, ಆರ್3, ಎಂಟಿ-03 ಬೈಕ್‌ಗಳು ಬಿಡುಗಡೆಗೆ ಸಿದ್ದವಾಗಿದ್ದು, ಗ್ರಾಹಕರಿಗೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








