Oben Rorr: ಬೆಂಗಳೂರು ಮೂಲದ ಇವಿ ಪರ್ಫಾಮೆನ್ಸ್ ಬೈಕ್: ಮೊದಲ ದಿನವೇ 25 ಮಂದಿಗೆ ವಿತರಣೆ

ದ್ವಿಚಕ್ರ ವಾಹನ ವಲಯದಲ್ಲಿ ಬಹುತೇಕ ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಕಂಪನಿಗಳೇ ಸದ್ದು ಮಾಡುತ್ತಿವೆ. ಇದೀಗ ಮತ್ತೊಂದು ಬೆಂಗಳೂರು ಮೂಲದ EV ಸ್ಟಾರ್ಟ್‌ಅಪ್ ಕಂಪನಿಯಾದ ಒಬೆನ್ ಎಲೆಕ್ಟ್ರಿಕ್ ತನ್ನ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ Oben Rorr ನ ಮೊದಲ 25 ಯೂನಿಟ್‌ಗಳನ್ನು ತನ್ನ ಗ್ರಾಹಕರಿಗೆ ಯಶಸ್ವಿಯಾಗಿ ವಿತರಿಸಿದೆ.

ಜುಲೈ 9 ರಂದು ಬೆಂಗಳೂರಿನ ಜಿಗಣಿಯಲ್ಲಿರುವ ತಮ್ಮ ಉತ್ಪಾದನಾ ಸೌಲಭ್ಯದಲ್ಲಿ F2R (First to Rorr) ಕಾರ್ಯಕ್ರಮವನ್ನು ನಡೆಸಿ ಮೊದಲ ಸೆಟ್ ಗ್ರಾಹಕರಿಗೆ ಒಬೆನ್ ರೋರ್ ಅನ್ನು ಹಸ್ತಾಂತರಿಸಲಾಯಿತು. ತಮ್ಮ ಮೊದಲ 25 ಗ್ರಾಹಕರಿಗೆ F2R ಈವೆಂಟ್‌ನಲ್ಲಿ ತಮ್ಮ ಹೊಸ ರೋರ್‌ನೊಂದಿಗೆ ತೆರಳಲು ವಿಶೇಷ ಒಬೆನ್ ಎಲೆಕ್ಟ್ರಿಕ್ ಸರಕುಗಳನ್ನು ನೀಡಲಾಯಿತು.

oben-rorr-bengaluru-based-ev-performance-bike-delivery

ತನ್ನ ಗ್ರಾಹಕರಿಗೆ ಮೊದಲ ವರ್ಷದಲ್ಲಿ 50,000 ಕಿ.ಮೀ ಅಥವಾ 3- ಮೊದಲ ವಿಭಾಗದಲ್ಲಿ 3 ಉಚಿತ ಸೇವೆಗಳನ್ನು ನೀಡುವುದಾಗಿ ತಿಳಿಸಿದೆ. ವಾರೆಂಟಿಯನ್ನು 5 ವರ್ಷಗಳು ಅಥವಾ 75,000 ಕಿ.ಮೀ ವರೆಗೆ ವಿಸ್ತರಿಸಬಹುದು, ಜೊತೆಗೆ 3-ವರ್ಷದ ಮೋಟಾರ್ ವಾರಂಟಿ, ಉಚಿತ ರೋಡ್ ಸೈಡ್ ಅಸಿಸ್ಟ್, ಚಾರ್ಜಿಂಗ್ ಪಾಲುದಾರರ ಮೂಲಕ 12,000+ ಚಾರ್ಜಿಂಗ್ ಸ್ಟೇಷನ್‌ಗಳಿಗೆ ರಾಷ್ಟ್ರವ್ಯಾಪಿ ಪ್ರವೇಶ ಒದಗಿಸಿರುವುದಾಗಿ ತಿಳಿಸಿದೆ.

ಕಂಪನಿಯ ಪ್ರಕಾರ, ಒಬೆನ್ ರೋರ್ ಮೋಟಾರ್‌ ಸೈಕಲ್‌ಗೆ ಕೆಲವು ಪ್ರಮುಖ ಅಂಶಗಳಿವೆ. ಓಬೆನ್ ರೋರ್ ಕೇವಲ 3 ಸೆಕೆಂಡ್‌ಗಳಲ್ಲಿ 40 ಕಿ.ಮೀ ವೇಗ ತಲುಪುವ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಎಂದು ಕಂಪನಿ ಹೇಳಿಕೊಂಡಿದೆ. ಈ ಮೂಲಕ 150 ಸಿಸಿ ಪೆಟ್ರೋಲ್ ಮೋಟಾರ್‌ಸೈಕಲ್‌ಗಿಂತ ಉತ್ತಮ ಪರ್ಫಾಮೆನ್ಸ್, ಹೊಸ ಯುಗದ ವಿನ್ಯಾಸ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿರುವುದಾಗಿ ತಿಳಿಸಿದೆ.

oben-rorr-bengaluru-based-ev-performance-bike-delivery

ಓಬೆನ್ ರೋರ್‌ನ ಆಂತರಿಕ ಆರ್&ಡಿ, ಅಭಿವೃದ್ಧಿ ಮತ್ತು ತಯಾರಿಕೆಯು ಬ್ಯಾಟರಿ ಮತ್ತು ಮೋಟರ್‌ನೊಂದಿಗೆ ಓಬೆನ್ ಎಲೆಕ್ಟ್ರಿಕ್ ತನ್ನ ಗ್ರಾಹಕರಿಗೆ ರೂ. 1,49,999 (ಎಕ್ಸ್-ಶೋರೂಮ್) ಸ್ಪರ್ಧಾತ್ಮಕ ಬೆಲೆಯಲ್ಲಿ ಬೈಕ್ ಅನ್ನು ಪರಿಚಯಿಸಿದೆ. 150cc ಪೆಟ್ರೋಲ್ ಮೋಟಾರ್‌ಸೈಕಲ್‌ಗೆ ಹೋಲಿಸಬಹುದಾದಂತಹ ಆಕರ್ಷಕ ಬೆಲೆಯಿರುವುದರಿಂದ ಗ್ರಾಹಕರು ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗೆ ಬದಲಾಗಬಹುದು ಎಂದು ಹೇಳಿದೆ.

ಪ್ರಸ್ತುತ ಈ ಬೈಕ್ ಒಟ್ಟು 21,000 ಪ್ರೀ ಆರ್ಡರ್‌ಗಳೊಂದಿಗೆ ಬ್ರ್ಯಾಂಡ್ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಸಕ್ರಿಯವಾಗಿ ವಿಸ್ತರಿಸುತ್ತಿದೆ. ಜೊತೆಗೆ ಪ್ರತಿ ನಗರ ಮತ್ತು ರಾಜ್ಯಗಳಲ್ಲಿ ಶೋರೂಮ್‌ಗಳು ಮತ್ತು ಸೇವಾ ಕೇಂದ್ರಗಳನ್ನು ತೆರೆಯುವ ಯೋಜನೆಗಳೊಂದಿಗೆ ಭಾರತದಾದ್ಯಂತ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಿದೆ. ಕಂಪನಿಯು ಮುಂಬರುವ ತಿಂಗಳುಗಳಲ್ಲಿ ತಂಡದ ಗಾತ್ರವನ್ನು ದ್ವಿಗುಣಗೊಳಿಸಲಿದೆ ಎಂದು ಹೇಳಿಕೊಂಡಿದೆ.

oben-rorr-bengaluru-based-ev-performance-bike-delivery

ಒಬೆನ್ ಎಲೆಕ್ಟ್ರಿಕ್ ಸಂಸ್ಥಾಪಕ ಮತ್ತು CEO ಮಧುಮಿತಾ ಅಗರವಾಲ್ ಮಾತನಡಿ, "ನಮ್ಮ ಮೊದಲ 25 ಒಬೆನ್ ರೋರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ವಿತರಣೆಯನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಈ ಕ್ಷಣವು ನನಗೆ ಅಪಾರವಾದ ಸಂತೋಷ ತಂದಿದೆ. ಈ ಹರ್ಷದಾಯಕ ಪ್ರಯಾಣದಲ್ಲಿ ನಮ್ಮೆ ಮೇಲಿನ ನಂಬಿಕೆ ಮತ್ತು ಬೆಂಬಲಕ್ಕಾಗಿ ನಮ್ಮ ಗ್ರಾಹಕರಿಗೆ ಧನ್ಯವಾದ ತಿಳಿಸುತ್ತಿದ್ದೇನೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

More from DriveSpark

Article Published On: Monday, July 10, 2023, 18:59 [IST]
English summary
Oben rorr bengaluru based ev performance bike delivery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+