Oben: ಒಂದೆರಡು ದಿನದಲ್ಲೇ ಬೆಂಗಳೂರಿನ ಓಬೆನ್ ರೋರ್ ಎಲೆಕ್ಟ್ರಿಕ್ ಬೈಕ್ ವಿತರಣೆ.. ಭರ್ಜರಿ ವಿಶೇಷತೆಗಳಿವೆ

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸಿವೆ. ಅದರಲ್ಲೂ ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳೇ ಅಬ್ಬರಿಸುತ್ತಿದ್ದು, ಹೊಸ ಸೇರ್ಪಡೆಯಾಗಿ ಓಬೆನ್ (Oben) ತನ್ನ ಹೊಚ್ಚ ಹೊಸ ರೋರ್ (Rorr) ಮೋಟಾರ್‌ಸೈಕಲ್‌ನ ವಿತರಣೆಯನ್ನು ಕೆಲವೇ ದಿನಗಳಲ್ಲಿ ಶುರು ಮಾಡಲಿದೆ.

ಸದ್ಯದ ಮಾಹಿತಿ ಪ್ರಕಾರ, ಓಬೆನ್ ರೋರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ವಿತರಣೆ ಜುಲೈ ಮೊದಲ ವಾರದಲ್ಲಿ ಆರಂಭವಾಗಲಿದೆ. ಈವರೆಗೆ 21,000ಕ್ಕೂ ಹೆಚ್ಚು ಫ್ರೀ ಬುಕ್ಕಿಂಗ್ ಅನ್ನು ಈ ಎಲೆಕ್ಟ್ರಿಕ್ ಬೈಕ್ ಪಡೆದುಕೊಂಡಿದೆ. ಕಂಪನಿಯು ಮತ್ತಷ್ಟು ಗ್ರಾಹಕರನ್ನು ತನ್ನತ್ತ ಆಕರ್ಷಿಸಲು ಇತ್ತೀಚೆಗೆ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್‌ನಲ್ಲಿ ತನ್ನ ಮೊದಲ ಎಕ್ಸ್ಪೀರಿಯೆನ್ಸ್ ಸೆಂಟರ್ ಪ್ರಾರಂಭಿಸಿತು.

Oben: ಒಂದೆರಡು ದಿನದಲ್ಲೇ ಬೆಂಗಳೂರಿನ ಓಬೆನ್ ರೋರ್ ಎಲೆಕ್ಟ್ರಿಕ್ ಬೈಕ್ ವಿತರಣೆ.. ಭರ್ಜರಿ ವಿಶೇಷತೆಗಳಿವೆ

ಯಾವುದೇ ಎಲೆಕ್ಟ್ರಿಕ್ ವಾಹನಕ್ಕೆ ಅದರ ಬ್ಯಾಟರಿ ಸುರಕ್ಷತೆ ತುಂಬಾ ಮುಖ್ಯವಾಗುತ್ತದೆ. ಇವಿ ಸ್ಟಾರ್ಟ್ಅಪ್ ಓಬೆನ್ ಕಂಪನಿ ಹೇಳುವಂತೆ ರೋರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬ್ಯಾಟರಿಯು, ಕೇಂದ್ರ ಸರ್ಕಾರದ ನಿಯಮಾನುಸಾರ ಸುರಕ್ಷತಾ ಮಾನದಂಡಗಳನ್ನು (AIS 156 ತಿದ್ದುಪಡಿ III ಹಂತ II) ಪೂರೈಸಿದೆ. ಈ ಮೂಲಕ ಓಬೆನ್ ರೋರ್ ಎಲೆಕ್ಟ್ರಿಕ್ ಬೈಕ್ ಅತ್ಯುತ್ತಮವಾಗಿದೆ.

ಒಬೆನ್ ರೋರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬೆಲೆ ರೂ.1.50 ಲಕ್ಷ (ಸಬ್ಸಿಡಿ ನಂತರ ಎಕ್ಸ್ ಶೋರೂಂ) ಇದ್ದು, ಟಾರ್ಕ್ ಕ್ರಾಟೋಸ್ ಆರ್, ಹಾಪ್ ಆಕ್ಸೊ, ರಿವೋಲ್ಟ್ ಆರ್‌ವಿ400 ಎಲೆಕ್ಟ್ರಿಕ್ ಬೈಕ್ ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಈ ಮೋಟಾರ್‌ ಸೈಕಲ್ ಅನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಹಿನ್ನೆಲೆ, 21 ಪೇಟೆಂಟ್‌ಗಳನ್ನು ಪಡೆದುಕೊಂಡಿರುವುದು ಪ್ರಮುಖ ಸಾಧನೆಯಾಗಿದೆ.

ಈ ಮೋಟಾರ್‌ಸೈಕಲ್‌ನಲ್ಲಿ 10 kW (IPMSM) ಮೋಟಾರ್ ಬಳಕೆ ಮಾಡಲಾಗಿದ್ದು, ಕೇವಲ 3 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು, 100 kmph ಟಾಪ್ ಸ್ವೀಡ್ ಹೊಂದಿದೆ. ಇದರ 4.4 kWh ಬ್ಯಾಟರಿ ಪ್ಯಾಕ್, ಸಂಪೂರ್ಣ ಚಾರ್ಜಿನಲ್ಲಿ 187 km ರೇಂಜ್ ನೀಡುತ್ತದೆ. ಮನೆ ವಿದ್ಯುತ್ ಬಳಕೆಯಲ್ಲಿ ಬ್ಯಾಟರಿಯು 120 ನಿಮಿಷ (2 ಗಂಟೆ)ಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ.

ಓಬೆನ್ ರೋರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ LFP (ಲಿಥಿಯಂ ಫೆರಸ್ ಫಾಸ್ಫರಸ್) ಸೆಲ್ ಟೆಕ್ನಲಾಜಿ ಆಧಾರಿತ ಬ್ಯಾಟರಿ ಪ್ಯಾಕ್ ಹೊಂದಿದೆ. ಇದು, ದೀರ್ಘಕಾಲಿಕ ಬಾಳಿಕೆ ಬರುತ್ತದೆ. ಜೊತೆಗೆ ಶಾಖ ನಿರೋಧಕವಾಗಿರುವುದು (heat resistance) ಗಮನಾರ್ಹ ಅಂಶವಾಗಿದೆ. ಕಂಪನಿಯು ರೋರ್ ಎಲೆಕ್ಟ್ರಿಕ್ ಬೈಕ್ ಮಾತ್ರವಲ್ಲದೆ, ಮುಂದಿನ ವರ್ಷ (2024) ಮತ್ತೊಂದು ನೂತನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

ಈಗಾಗಲೇ, ಓಬೆನ್ ಕಂಪನಿಯ ರೋರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ದೊಡ್ಡ ಮಟ್ಟದಲ್ಲಿ ಡಿಮ್ಯಾಂಡ್ ಹೊಂದಿರುವುದರಿಂದ ಕಂಪನಿಯು ತನ್ನ ಫ್ಯಾಕ್ಟರಿಯಲ್ಲಿ ಉತ್ಪಾದನಾ ಸಾಮರ್ಥ್ಯವನ್ನು 100,000 ಯುನಿಟ್‌ಗೆ ಹೆಚ್ಚಿಸಲು ತೀರ್ಮಾನಿಸಿದೆ. ಅದಕ್ಕಾಗಿ ಮೊದಲ ಹಂತವಾಗಿ 40 ಕೋಟಿ ರೂಪಾಯಿ ಬಂಡವಾಳ ಸಂಗ್ರಹಿಸಿದೆ ಎಂದು ವರದಿಯಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಅತ್ಯುತ್ತಮ ಸುರಕ್ಷತಾ ಮಾನದಂಡ ಹೊಂದಿರುವದರಿಂದ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, July 1, 2023, 10:26 [IST]
English summary
Oben rorr electric motorcycle deliveries start july first week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+