Odysse Vader Electric Bike: ದೇಶದಲ್ಲಿ ಭಾರೀ ಅಗ್ಗದ ದರಕ್ಕೆ ದಿನಬಳಕೆಯ ಒಡಿಸ್ಸೆ ವಾಡರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಈಗಾಗಲೇ, ದಿನನಿತ್ಯದ ಬಳಕೆಗೆ ವಿವಿಧ ಕಂಪನಿಗಳು ಬಗೆಬಗೆಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿವೆ. ಆದರೆ, ಮೋಟಾರ್‌ಸೈಕಲ್‌ಗಳ ಕೊರತೆ ಇತ್ತು. ಇದನ್ನು ನೀಗಿಸಲು ಮುಂಬೈ ಮೂಲದ 'ಒಡಿಸ್ಸೆ' ವಾಡರ್ ಎಲೆಕ್ಟ್ರಿಕ್ ಬೈಕ್‌ನ್ನು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.

ಈ ಒಡಿಸ್ಸೆ ವಾಡರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಬೆಲೆ ಬಗ್ಗೆ ಹೇಳುವುದಾದರೆ, ಇದು ಅಹಮದಾಬಾದ್‌ನಲ್ಲಿ ರೂ.1.09 ಲಕ್ಷ (ಎಕ್ಸ್-ಶೋರೂಂ FAME II, ಸಬ್ಸಿಡಿ ಸೇರಿ) ದರದಲ್ಲಿ ಖರೀದಿಗೆ ಲಭ್ಯವಿದೆ. ಉಳಿದಂತೆ ದೇಶದೆಲ್ಲೆಡೆ ರೂ.1.29 ಲಕ್ಷ ಬೆಲೆಯನ್ನು ಹೊಂದಿದೆ. ಸದ್ಯ, ಬುಕಿಂಗ್ ಕೂಡ ಪ್ರಾರಂಭವಾಗಿದೆ. ಆಸಕ್ತ ಗಾಹಕರು, ಕೇವಲ ರೂ.999 ಪಾವತಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಜುಲೈನಿಂದ ವಿತರಣೆಗಳು ಆರಂಭವಾಗಲಿದೆ.

Odysse Vader Electric Bike: ದೇಶದಲ್ಲಿ ಭಾರೀ ಅಗ್ಗದ ದರಕ್ಕೆ ದಿನಬಳಕೆಯ ಒಡಿಸ್ಸೆ ವಾಡರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಒಡಿಸ್ಸೆ ವಾಡರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಪವರ್‌ಟ್ರೇನ್ ಬಗ್ಗೆ ಮಾತನಾಡುವುದಾದರೆ, ಇದು, 3.7kWh ಲಿಥಿಯಂ ಐಯಾನ್ (NMC) ಬ್ಯಾಟರಿ ಪ್ಯಾಕ್ ಹೊಂದಿದ್ದು, 3kW ಎಲೆಕ್ಟ್ರಿಕ್ ಮೋಟಾರ್ 4.02 bhp ಪವರ್, 4.5kW ಮೋಟಾರ್ 6.03 bhp ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಈ ಬೈಕ್ ಬ್ಯಾಟರಿ ಪ್ಯಾಕ್ 0 - 100% ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳಲಿದೆ.

ಇದು ಮೂರು ರೈಡಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೇ ಇಕೋ, ಡ್ರೈವ್ ಹಾಗೂ ಸ್ಪೋರ್ಟ್ಸ್. ಜೊತೆಗೆ ಸಂಪೂರ್ಣ ಚಾರ್ಜಿನಲ್ಲಿ 125 km ರೇಂಜ್ ನೀಡಲಿದೆ. ಆದರೆ, ಡ್ರೈವ್ ರೈಡಿಂಗ್ ಮೋಡ್ ನಲ್ಲಿ 100 km ಹಾಗೂ ಸ್ಪೋರ್ಟ್ ಮೋಡ್ ನಲ್ಲಿ ಕೇವಲ 90 km ರೇಂಜ್ ಕೊಡಲಿದೆ. ಜೊತೆಗೆ ಈ ಒಡಿಸ್ಸೆ ವಾಡರ್ ಎಲೆಕ್ಟ್ರಿಕ್ ಬೈಕ್ 85km/h ಟಾಪ್ ಸ್ವೀಡ್ ಹೊಂದಿದೆ.

Odysse Vader Electric Bike: ದೇಶದಲ್ಲಿ ಭಾರೀ ಅಗ್ಗದ ದರಕ್ಕೆ ದಿನಬಳಕೆಯ ಒಡಿಸ್ಸೆ ವಾಡರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಮಾತನಾಡುವುದಾದರೆ, ಇದು ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಡುಯಲ್ ಸ್ಪ್ರಿಂಗ್ ಲೋಡೆಡ್ ಶಾಕ್‌ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಈ ಬೈಕ್ ಫ್ರಂಟ್ 240 ಎಂಎಂ, ರೇರ್ 220 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 17 ಇಂಚಿನ ಅಲಾಯ್ ವೀಲ್ಸ್, ಫ್ರಂಟ್ 90/90-17 ಹಾಗೂ ರೇರ್ 140/70 ಅಳತೆಯ ಟೈಯರ್ಸ್ ಅನ್ನು ಹೊಂದಿದೆ.

ಒಡಿಸ್ಸೆ ವಾಡರ್' ಎಲೆಕ್ಟ್ರಿಕ್ ಬೈಕ್, ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, ಇದು ಡಸ್ಟ್ ಹಾಗೂ ವಾಟರ್ ಪ್ರೊಫ್ 7 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಆಂಡ್ರಾಯ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ನಿಮ್ಮ ಫೋನ್‌ನಲ್ಲಿರುವ 'Odysse EV' ಆಪ್ ಸ್ಕ್ರೀನ್ ಗೆ ಕನೆಕ್ಟ್ ಆಗಲಿದ್ದು, ಬೈಕ್ ಲೊಕೇಟರ್, ಜಿಯೋಫೆನ್ಸಿಂಗ್, ಇಮೊಬಿಲೈಸೇಶನ್, ಆಂಟಿ ಥೆಫ್ಟ್, ಟ್ರ್ಯಾಕ್ & ಟ್ರೇಸ್ ಮತ್ತು ಲೊ ಬ್ಯಾಟರಿಯಂತಹ ಮಾಹಿತಿ ಸಿಗಲಿದ್ದು, LED ಲೈಟಿಂಗ್ ಅನ್ನು ಪಡೆದಿದೆ.

Odysse Vader Electric Bike: ದೇಶದಲ್ಲಿ ಭಾರೀ ಅಗ್ಗದ ದರಕ್ಕೆ ದಿನಬಳಕೆಯ ಒಡಿಸ್ಸೆ ವಾಡರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಈ ಬೈಕ್ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಮಿಡ್‌ನೈಟ್ ಬ್ಲೂ, ಫಿಯರಿ ರೆಡ್, ಗ್ಲಾಸಿ ಬ್ಲ್ಯಾಕ್, ವೆನಮ್ ಗ್ರೀನ್ ಮತ್ತು ಮಿಸ್ಟಿ ಗ್ರೇ. ಜೊತೆಗೆ ವಾಡರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌, 18 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದೆ. ಇದರ ಬಿಡುಗಡೆಯೊಂದಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್ ಗಳ ಅಬ್ಬರ ಕೊಂಚ ಮಟ್ಟಿಗೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, March 31, 2023, 15:44 [IST]
English summary
Odysse vader electric motorcycle launched at rs 1 09 lakh details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+