ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕೇ.. Okayaದಿಂದ ಭರ್ಜರಿ ಸಿಹಿಸುದ್ದಿ

ಭಾರತದಲ್ಲಿ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಳ್ಳುತ್ತಿರುವ ಒಕಾಯಾ (Okaya) ಮಾರ್ಚ್ ತಿಂಗಳಲ್ಲಿ ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ಘೋಷಣೆ ಮಾಡಿದೆ. ಇದು ಕ್ಯಾಶ್‌ಬ್ಯಾಕ್ ಹಾಗೂ ಪ್ರವಾಸ ಪ್ಯಾಕೇಜ್ ಒಳಗೊಂಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಒಕಾಯಾದ ಯಾವುದೇ ಸ್ಕೂಟರ್ ಖರೀದಿ ಮೇಲೆ ರೂ.5000ವರೆಗೆ ಕ್ಯಾಶ್‌ಬ್ಯಾಕ್ ಸೇರಿದಂತೆ ಅತ್ಯಾಕರ್ಷಕ ಬಹುಮಾನವನ್ನು ಗೆಲ್ಲಬಹುದು. ಅದೃಷ್ಟಶಾಲಿಯೊಬ್ಬರಿಗೆ 4 ದಿನಗಳ ಥೈಲ್ಯಾಂಡ್‌ ಪ್ರವಾಸ ಹೋಗಲು ಅವಕಾಶ ಸಿಗಲಿದೆ. ಈ ಕೊಡುಗೆಗಳು ಮಾರ್ಚ್ 31ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ದೇಶಾದ್ಯಂತವಿರುವ ಒಕಾಯಾ ಡೀಲರ್ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಲಿಂಕ್ ಕಳುಹಿಸಲಾಗುತ್ತದೆ. ಅದರಲ್ಲಿ ವಿವರಗಳನ್ನು ನಮೂದಿಸಿದರೆ, ಬಹುಮಾನದ ವಿವರದ ಸ್ಕ್ರ್ಯಾಚ್ ಕಾರ್ಡ್ ಲಭ್ಯವಾಗಲಿದೆ.

Okayaದಿಂದ ದೊಡ್ಡ ಘೋಷಣೆ: ಬಂಪರ್ ಆಫರ್

ಒಕಾಯಾ ಕಂಪನಿ, ಭಾರತದ ಮಾರುಕಟ್ಟೆಯಲ್ಲಿ ಕಡಿಮೆ ಹಾಗೂ ಗರಿಷ್ಠ ವೇಗದ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಬೆಲೆಯು ಕೂಡ ಕೈಗೆಟುಕುವಂತಿದ್ದು, ಆಕರ್ಷಕ ವೈಶಿಷ್ಟ್ಯವನ್ನು ಪಡೆದುಕೊಂಡಿವೆ. ಮೆಟಾಲಿಕ್ ಬ್ಲಾಕ್, ಮೆಟಾಲಿಕ್ ಸಯಾನ್, ಮ್ಯಾಟ್ ಗ್ರೀನ್, ಮೆಟಾಲಿಕ್ ಗ್ರೇ, ಮೆಟಾಲಿಕ್ ಸಿಲ್ವರ್ ಹಾಗೂ ಮೆಟಾಲಿಕ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಸ್ಕೂಟರ್‌ಗಳು ಖರೀದಿಗೆ ದೊರೆಯಲಿದ್ದು, ಪ್ರತಿಯೊಬ್ಬ ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮೊದಲಿಗೆ ಒಕಾಯಾ ಕಂಪನಿಯ ಫಾಸ್ಟ್ ಎಫ್4 (Faast F4) ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು ರೂ.1,13,999 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದ್ದು, ಇದು ಗಂಟೆಗೆ 70 ಕಿ.ಮೀ ಟಾಪ್ ಸ್ವೀಡ್ ಪಡೆಯಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 140-160 ಕಿಲೋಮೀಟರ್ ರೇಂಜ್ ನೀಡಲಿದೆ. ಕೀಲೆಸ್ ಎಂಟ್ರಿ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಒಕಾಯಾ ಫಾಸ್ಟ್ ಎಫ್3 (Okaya Faast F3) ಎಲೆಕ್ಟ್ರಿಕ್ ಸ್ಕೂಟರ್, ರೂ.99,999 (ಎಕ್ಸ್ ಶೋರೂಂ) ದರದಲ್ಲಿ ಗ್ರಾಹಕರಿಗೆ ಸಿಗಲಿದೆ. 3.53 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 125 Kmವರೆಗೆ ರೇಂಜ್ ನೀಡಲಿದ್ದು, 70 kmph ಟಾಪ್ ಸ್ವೀಡ್ ಪಡೆದಿದೆ. ಇದರ ಬ್ಯಾಟರಿ ಪ್ಯಾಕ್, 4-5 ಗಂಟೆಗಳಲ್ಲಿ ಫುಲ್ ಚಾರ್ಜ್ ಆಗಲಿದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿ, ಮೋಟಾರ್ 3 ವರ್ಷ ವಾರಂಟಿಯೊಂದಿಗೆ ಖರೀದಿಗೆ ದೊರೆಯಲಿದೆ.

ಒಕಾಯಾ ಫಾಸ್ಟ್ ಎಫ್2ಎಫ್ (Okaya Faast F2F) ಬಗ್ಗೆ ಹೇಳುವುದಾದರೆ, ಇದು 2.2 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹಾಗೂ 800W-BLDC-ಹಬ್ ಮೋಟಾರ್ ನಿಂದ ಕಾರ್ಯನಿರ್ವಹಿಸಲಿದೆ. ಸಂಪೂರ್ಣ ಚಾರ್ಜಿನಲ್ಲಿ 70-80 km ರೇಂಜ್ ನೀಡಲಿದ್ದು, 55 km/h ಟಾಪ್ ಸ್ವೀಡ್ ಹೊಂದಿದೆ. ರೂ.83,999 ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯಲಿದ್ದು, ಬ್ಯಾಟರಿ ಹಾಗೂ ಮೋಟಾರ್ 2 ವರ್ಷದ ವಾರಂಟಿ ಪಡೆದಿದೆ.

ಒಕಾಯಾದ ಕ್ಲಾಸಿಕ್ ಕ್ಯೂ ಪ್ಲಸ್ (Okaya ClassIQ+) ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದ್ದು, ರೂ.74,500 ಎಕ್ಸ್ ಶೋರೂಂ ದರವನ್ನು ಪಡೆದಿದೆ. ಸಂಪೂರ್ಣ ಚಾರ್ಜಿನಲ್ಲಿ 60-70 km ರೇಂಜ್ ನೀಡಲಿದ್ದು, 25 kmph ಟಾಪ್ ಸ್ವೀಡ್ ಹೊಂದಲಿದೆ. ಇದರ BLDC ಹಬ್ ಮೋಟಾರ್ 250W ಪವರ್ ಉತ್ಪಾದಿಸಲಿದ್ದು, 4-5 ಗಂಟೆಗಳಲ್ಲಿ ಇದರ ಬ್ಯಾಟರಿ ಫುಲ್ ಚಾರ್ಜ್ ಆಗಲಿದೆ.

ಒಕಾಯಾ ಫ್ರೀಡಮ್ (Freedum) ರೂ.74,900 ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಇದರ ಮೋಟಾರ್ 250w ಪವರ್ ಉತ್ಪಾದಿಸಲಿದೆ. ಸಂಪೂರ್ಣ ಚಾರ್ಜಿನಲ್ಲಿ 70-75 km ರೇಂಜ್ ನೀಡಲಿದೆ. ಮತ್ತೊಂದು ಒಕಾಯಾ ಫಾಸ್ಟ್ ಎಫ್2ಬಿ (Faast F2B), ರೂ. 89,999 ದರದಲ್ಲಿ ಗ್ರಾಹಕರಿಗೆ ಸಿಗಲಿದ್ದು, ಇದು 2.2 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಗರಿಷ್ಠ 70-80 km ರೇಂಜ್ ನೀಡಲಿದೆ.

More from DriveSpark

Article Published On: Monday, March 13, 2023, 16:30 [IST]
English summary
Okaya ev announces exciting march offers details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+