ಫೆ.10 ರಂದು ಬಿಡುಗಡೆಯಾಗಲಿರುವ ಒಕಾಯಾ ಫಾಸ್ಟ್ F3 ಇವಿ ಸ್ಕೂಟರ್ ಬೆಲೆ, ಶ್ರೇಣಿಯ ಮಾಹಿತಿ ಸೋರಿಕೆ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಒಕಾಯಾ ಎಲೆಕ್ಟ್ರಿಕ್ ವೆಹಿಕಲ್ಸ್ ತಮ್ಮ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇದೇ ಫೆಬ್ರವರಿ 10 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಆದರೆ ಕಂಪನಿಯ ಅಧಿಕೃತ ಬಿಡುಗಡೆಗೂ ಮುನ್ನವೇ ಕೆಲ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಫಾಸ್ಟ್ ಎಫ್- 4, ಫ್ರೀಡಮ್ ಮತ್ತು ಕ್ಲಾಸಿಕ್ ಐಕ್ಯೂ ನಂತರ ಒಕಾಯಾ ಕಂಪನಿಯು ಫಾಸ್ಟ್ ಎಫ್- 3 ಎಂಬ ಮಾದರಿಯನ್ನು ಬಿಡುಗಡೆಗೆ ಸಜ್ಜುಗೊಳಿಸಿದೆ. ಇದು ಭಾರತದಲ್ಲಿ ಒಕಾಯಾದ ನಾಲ್ಕನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರ ಬೆಲೆ ರೂ 99,999 (ಎಕ್ಸ್ ಶೋ ರೂಂ). ಒಕಾಯಾ ಫಾಸ್ಟ್ 3 ಇ-ಸ್ಕೂಟರ್ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಪಡೆದಿದೆ.

 ಫೆ.10 ರಂದು ಬಿಡುಗಡೆಯಾಗಲಿರುವ ಒಕಾಯಾ ಫಾಸ್ಟ್ F3 ಇವಿ ಸ್ಕೂಟರ್ ಬೆಲೆ, ಶ್ರೇಣಿಯ ಮಾಹಿತಿ ಸೋರಿಕೆ

ಇದು DRL ಗಳ ಜೊತೆಗೆ LED ಹೆಡ್‌ಲೈಟ್, ಟೈಲ್ ಲ್ಯಾಂಪ್‌ಗಳನ್ನು ಮತ್ತು CAN ಆಧಾರಿತ ಡಿಜಿಟಲ್ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ರಿವರ್ಸ್ ಮೋಡ್ ಫಂಕ್ಷನ್ ಮತ್ತು ರಿಮೋಟ್ ಕೀಯನ್ನು ವೈಶಿಷ್ಟ್ಯಗಳ ಭಾಗವಾಗಿ ನೀಡಲಾಗಿದೆ. ಸದ್ಯಕ್ಕಿರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ತಂತ್ರಜ್ಞಾನದಲ್ಲಿ ಬಹಳ ಮುಂದಿರುವ ಕಾರಣ ಒಕಾಯಾ ಕಂಪನಿ ಕೂಡ ತನ್ನ ಹೊಸ ಮಾದರಿಗಳಲ್ಲಿ ಹಲವು ಫ್ಯೂಚರಿಸ್ಟಿಕ್ ವೈಶಿಷ್ಟ್ಯಗಳನ್ನು ನೀಡುತ್ತಿರುವುದಾಗಿ ಹೇಳಿಕೊಂಡಿದೆ.

ಹೊಸ Okaya Faast F3 ಎಲೆಕ್ಟ್ರಿಕ್ ಸ್ಕೂಟರ್
ಒಕಾಯಾ ಫಾಸ್ಟ್ ಎಫ್3 ಇ-ಸ್ಕೂಟರ್ ಸುಧಾರಿತ ಮತ್ತು ಕೆಲವು ವಿಭಾಗದ ಮೊದಲ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಇದು ಅವಳಿ ಬ್ಯಾಟರಿ ಕಾನ್ಫಿಗರೇಶನ್‌ನಲ್ಲಿ 3.5kWh Li-ion LFP ಬ್ಯಾಟರಿಗಳೊಂದಿಗೆ 2500W ಗರಿಷ್ಠ ಶಕ್ತಿಯೊಂದಿಗೆ 1200W ಮೋಟಾರ್ ಅನ್ನು ಪಡೆಯುತ್ತದೆ. ಬ್ಯಾಟರಿ ಪ್ಯಾಕ್ ಬದಲಾಯಿಸಬಹುದಾದ ತಂತ್ರಜ್ಞಾನವನ್ನು ಹೊಂದಿದ್ದು, ಪ್ರತಿ ಚಾರ್ಜ್‌ನಲ್ಲಿ ಬರೋಬ್ಬರಿ 130- 160 ಕಿ.ಮೀ/ ಚಾರ್ಜ್ ವ್ಯಾಪ್ತಿಯನ್ನು ಪಡೆಯಬಹುದು.

ಸಂಪೂರ್ಣ ಚಾರ್ಜ್‌ ಮಾಡಲು ಸುಮಾರು 5 ರಿಂದ 6 ಗಂಟೆಗಳ ಸಮಯ ಬೇಕಾಗುತ್ತದೆ. ಗರಿಷ್ಠ ವೇಗವು ಗಂಟೆಗೆ 60 ರಿಂದ 70 ಕಿ.ಮೀ ಇರುತ್ತದೆ. ಹಾಗೆಯೇ ಇದರ ಬ್ಯಾಟರಿಯನ್ನು ಸೀಟಿನ ಕೆಳಗೆ ಇರಿಸಲಾಗಿದೆ. ಫಾಸ್ಟ್ ಎಫ್3 ಸ್ಕೂಟರ್ 12 ಇಂಚಿನ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳು ಕಂಡುಬರುತ್ತವೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸೆಟಪ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‌ಗಳ ಸಸ್ಪೆನಷನ್ ಸೆಟಪ್ ನೀಡಲಾಗಿದೆ.

LFP ಬ್ಯಾಟರಿಗಳಿಗೆ ಹಲವಾರು ಪ್ರಯೋಜನಗಳಿದ್ದು, NMC ಬ್ಯಾಟರಿಗಳಿಗೆ ಹೋಲಿಸಿದರೆ ಇವು 2- 4 ಪಟ್ಟು ಹೆಚ್ಚು ಜೀವಿತಾವಧಿಯನ್ನು ಹೊಂದಿವೆ. 2,500 ಚಾರ್ಜಿಂಗ್ ಸೈಕಲ್‌ಗಳ ಹೆಗ್ಗಳಿಕೆ ಹೊಂದಿದ್ದು, ಇವಕ್ಕೆ ಬೆಂಕಿ ಹಿಡಿಯುವುದಿಲ್ಲವಾದ್ದರಿಂದ ಸುರಕ್ಷಿತವಾಗಿರುತ್ತವೆ. ಹೀಗಾಗಿ, ಬ್ಯಾಟರಿ ಕಾರ್ಯಕ್ಷಮತೆಯಿಂದ ಸುಮಾರು 6 ವರ್ಷಗಳ ಬಳಕೆಯನ್ನು ನಿರೀಕ್ಷಿಸಬಹುದು. Okaya ಮೋಟಾರ್ ಮತ್ತು ಬ್ಯಾಟರಿಯ ಮೇಲೆ 3 ವರ್ಷ/30,000 ಕಿ.ಮೀ ವಾರಂಟಿಯನ್ನು ನೀಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗವು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಹಲವಾರು ಹೊಸಬರು ಹೆಚ್ಚು ಸ್ಥಾಪಿತ ಮಾದರಿಗಳೊಂದಿಗೆ ಕಣಕ್ಕೆ ಪ್ರವೇಶಿಸುತ್ತಿದ್ದಾರೆ, Okaya Faast F3 ತನ್ನ ವಿಭಾಗದಲ್ಲಿ Hero Optima CX, Okinawa Praise Pro ಮತ್ತು Ampere Magnus EX ನಂತಹ ಮಾದರಿಳೊಂದಿಗೆ ಸ್ಪರ್ಧಿಸಲಿದೆ. ಈ ಪ್ರತಿಸ್ಪರ್ಧಿಗಳಲ್ಲಿ ಇದು 99,999 ರೂ.ಗಳಲ್ಲಿ ಹೆಚ್ಚಿನ ಬೆಲೆಯನ್ನು ಹೊಂದಿದ್ದರೂ, Okaya Faast F3 ಸಬ್ಸಿಡಿಯೊಂದಿಗೆ ಬರುತ್ತದೆ.

ಫಾಸ್ಟ್ ಎಫ್3 ತನ್ನ ಇತರ ಪ್ರತಿಸ್ಪರ್ಧಿಗಳಲ್ಲಿ ಕಂಡುಬರುವ ಡಿಟ್ಯಾಚೇಬಲ್ ಬ್ಯಾಟರಿಗಳಿಗೆ ಹೋಲಿಸಿದರೆ ಸ್ಥಿರ ಬ್ಯಾಟರಿಗಳನ್ನು ಸಹ ಪಡೆಯುತ್ತದೆ. ಓಕಾಯಾ ನೀಡುವ ಇತರ 3 ಇ-ಸ್ಕೂಟರ್‌ಗಳಿಗೆ ಹೋಲಿಸಿದರೆ, ಫಾಸ್ಟ್ ಎಫ್3 ಬೆಲೆ ರೂ. 99,999 ಇದ್ದರೆ ಫ್ರೀಡಮ್ ಬೆಲೆ 74,899 ರೂ. Okaya ClassicIQ ಬೆಲೆ ರೂ. 74,499 ಮತ್ತು ಒಕಾಯಾ ಫಾಸ್ಟ್ ಎಫ್4 ಬೆಲೆ ರೂ. 1.09 ಲಕ್ಷ (ಎಲ್ಲಾ ಬೆಲೆಗಳು - ಎಕ್ಸ್ ಶೋ ರೂಂ) ಇದೆ.

More from DriveSpark

Article Published On: Wednesday, February 8, 2023, 15:03 [IST]
English summary
Okaya faast f3 ev scooter price range information leaked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+