Okinawa Praise Pro, iPrase Plus: ಕಡಿಮೆ ಖರ್ಚಿನ ಸ್ಕೂಟರ್‌ಗಳಿಗೆ ಹೊಸ ಬಣ್ಣಗಳನ್ನು ಪರಿಚಯಿಸಿದ ಭಾರತದ ಒಕಿನಾವಾ

ಭಾರತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಒಕಿನಾವಾ (Okinawa) ಈಗಷ್ಟೇ ಮುನ್ನೆಲೆಗೆ ಬರುತ್ತಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇದೀಗ, ತನ್ನ ಎರಡು ಮಾದರಿಗಳಿಗೆ 8 ಹೊಸ ಬಣ್ಣಗಳ ಆಯ್ಕೆಯನ್ನು ಪರಿಚಯಿಸಿದೆ. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.

ಒಕಿನಾವಾ ಪ್ರೈಸ್ ಪ್ರೊ ಹಾಗೂ ಐಪ್ರೇಸ್ ಪ್ಲಸ್ ರೂಪಾಂತರಗಳು ಆಕರ್ಷಕ ಬಣ್ಣಗಳನ್ನು ಪಡೆದುಕೊಂಡಿವೆ. ಅವುಗಳೆಂದರೆ, ಮೌವ್ ಪರ್ಪಲ್, ಮಿಲಿಟರಿ ಗ್ರೀನ್, ಸೀಫೊಮ್ ಗ್ರೀನ್, ಸನ್ ಆರೆಂಜ್, ಮೋಚಾ ಬ್ರೌನ್, ಎಲೆಕ್ಟ್ರಿಕ್ ಗ್ರೀನ್, ಲಿಕ್ವಿಡ್ ಮೆಟಲ್ ಹಾಗೂ ಓಷನ್ ಬ್ಲೂ. ಈ ನವೀನ ಬಣ್ಣಗಳ ಆಯ್ಕೆಯಲ್ಲಿ ಇವೆರೆಡು ಸ್ಕೂಟರ್‌ಗಳು ದೇಶೀಯ ಮಾರುಕಟ್ಟೆಗೆ ಬರುತ್ತಿರುವುದರಿಂದ ಹೆಚ್ಚಿನ ಯುವ ಖರೀದಿದಾರರಿಗೆ ಇಷ್ಟವಾಗಲಿದೆ.

Okinawa Praise Pro, iPrase Plus: ಕಡಿಮೆ ಖರ್ಚಿನ ಸ್ಕೂಟರ್‌ಗಳಿಗೆ ಹೊಸ ಬಣ್ಣಗಳನ್ನು ಪರಿಚಯಿಸಿದ ಭಾರತದ ಒಕಿನಾವಾ

ಮೊದಲಿಗೆ ಒಕಿನಾವಾ ಪ್ರೈಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 2.08 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 88 km ರೇಂಜ್ ನೀಡಲಿದೆ. ಇದರ ಬ್ಯಾಟರಿ ಕೇವಲ 3 ರಿಂದ 4 ಗಂಟೆಯಲ್ಲಿ ಫುಲ್ ಚಾರ್ಜ್ ಆಗಲಿದ್ದು, 56 kmph ಟಾಪ್ ಸ್ವೀಡ್ ಹೊಂದಿದೆ. ಈ ಸ್ಕೂಟರ್, 1 ಕಿ.ಮೀ ಕ್ರಮಿಸಲು ಕೇವಲ ರೂ.14 ಪೈಸೆ ಖರ್ಚಾಗುತ್ತದೆ.

ಒಕಿನಾವಾ ಐಪ್ರೇಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್, 3.6 kWh ಲಿಥಿಯಂ ಐಯಾನ್ ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 137 km ರೇಂಜ್ ನೀಡಲಿದೆ. ಇದರ ಬ್ಯಾಟರಿ ಪ್ಯಾಕ್ 4 ರಿಂದ 5 ಗಂಟೆಯೊಳಗೆ ಫುಲ್ ಚಾರ್ಜ್ ಆಗಲಿದೆ. ಇದು ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 'ಒಕಿನಾವಾ ಇಕೋ ಆಪ್' ಅನ್ನು ಪಡೆದಿದೆ.

ಇವಷ್ಟೇ ಅಲ್ಲದೆ, ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು LED ಲೈಟಿಂಗ್, ಎಲೆಕ್ಟ್ರಾನಿಕ್ ಅಸಿಸ್ಟೆಡ್ ಬ್ರೇಕಿಂಗ್ ಸಿಸ್ಟಮ್, ಆಂಟಿ ಥೆಫ್ಟ್ ಅಲಾರ್ಮ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಯುಎಸ್‌ಬಿ ಚಾರ್ಜರ್, ಲೊಕೇಟ್ ಮೈ ಸ್ಕೂಟರ್ ಫುನ್ಕ್ಷನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿವೆ. ಆಸಕ್ತರು ಹೊಸ ಬಣ್ಣದ ಆಯ್ಕೆಯೊಂದಿರುವ ಇವೆರೆಡು ಸ್ಕೂಟರ್‌ಗಳನ್ನು ದೇಶಾದ್ಯಂತವಿರುವ ಒಕಿನಾವಾ ಡೀಲರ್ ಶಿಪ್ ಮೂಲಕ ಕೊಂಡುಕೊಳ್ಳಬಹುದು.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಒಕಿನಾವಾ ಪ್ರೈಸ್ ಪ್ರೊ ರೂ.99,645 ಹಾಗೂ ಐಪ್ರೇಸ್ ಪ್ಲಸ್ ರೂ.1.45 ಲಕ್ಷ ಎಕ್ಸ್ ಶೋ ರೂಂ ಬೆಲೆಯನ್ನು ಹೊಂದಿವೆ. ಕಂಪನಿಯು ಈವರೆಗೆ ದೇಶಾದ್ಯಂತ 250,000 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿರುವ ಮೈಲಿಗಲ್ಲನ್ನು ನಿರ್ಮಿಸಿದೆ. ಒಕಿನಾವಾ ಕಂಪನಿ ಪ್ರೈಸ್ ಪ್ರೊ, ಐಪ್ರೇಸ್ ಪ್ಲಸ್ ಸ್ಕೂಟರ್‌ಗಳನ್ನು ಮಾತ್ರವಲ್ಲದೆ, ಫಾಸ್ಟ್ ಎಫ್4, ಫಾಸ್ಟ್ ಎಫ್3, ಫಾಸ್ಟ್ ಎಫ್2ಎಫ್ ಸೇರಿದಂತೆ ವಿವಿಧ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

ಅವುಗಳ ಬೆಲೆ, ರೇಂಜ್ ಕುರಿತ ವಿವರವನ್ನು ನೋಡುವುದಾದರೆ, ಫಾಸ್ಟ್ ಎಫ್4 ಎಲೆಕ್ಟ್ರಿಕ್ ಸ್ಕೂಟರ್ ರೂ.1,13,999 ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 140-160 ಕಿ.ಮೀ ರೇಂಜ್ ನೀಡಲಿದೆ. ಫಾಸ್ಟ್ ಎಫ್3 ಸ್ಕೂಟರ್, ರೂ.99,999ಕ್ಕೆ ಸಿಗಲಿದ್ದು, 125 ಕಿ.ಮೀ ರೇಂಜ್ ಕೊಡಲಿದೆ. ಫಾಸ್ಟ್ ಎಫ್2ಎಫ್ ಸ್ಕೂಟರ್, 70-80 km ರೇಂಜ್ ನೀಡಲಿದ್ದು, ರೂ.83,999 ಬೆಲೆ ಹೊಂದಿದೆ.

ಒಟ್ಟಾರೆ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಒಕಿನಾವಾ ಕಂಪನಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಪ್ರೈಸ್ ಪ್ರೊ ಹಾಗೂ ಐಪ್ರೇಸ್ ಪ್ಲಸ್ ರೂಪಾಂತರಗಳನ್ನು ಪರಿಚಯಿಸಿದೆ. ಕಡಿಮೆ ನಿರ್ವಹಣಾ ಖರ್ಚು ಹೊಂದಿರುವುದರಿಂದ ಈ ಸ್ಕೂಟರ್ ಗಳನ್ನು ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು. ಮುಂಬರುವ ದಿನಗಳಲ್ಲಿ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳಿಗೆ ಒಕಿನಾವಾ ಪ್ರತಿಸ್ಪರ್ಧಿಯಾಗಬಹುದು.

More from DriveSpark

Article Published On: Wednesday, March 29, 2023, 10:30 [IST]
English summary
Okinawa praise pro iprase plus electric scooter gets new colour options details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+