Ola: ಓಲಾದಿಂದ ದಿಢೀರ್ ತೀರ್ಮಾನ, ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಸ್ಥಗಿತ

ಭಾರತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಓಲಾ (Ola) ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಸದ್ಯ, ಕಂಪನಿಯು ದಿಢೀರ್ ತೀರ್ಮಾನವನ್ನು ಮಾಡಿದ್ದು, ಮಿಡ್ ಲೆವೆಲ್ ಆವೃತ್ತಿ ಎಸ್1 (S1) ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದೆ. ಆದರೆ, ಈ ನಿರ್ಧಾರದ ಹಿಂದಿನ ಕಾರಣವೇನು ಎಂಬುದನ್ನು ಓಲಾ ಬಹಿರಂಗಪಡಿಸಿಲ್ಲ.

ಓಲಾ ಎಲೆಕ್ಟ್ರಿಕ್ (Ola Electric) ತನ್ನ ಅತ್ಯಂತ ಕೈಗೆಟುಕುವ ಬೆಲೆಯ ಎಸ್1 ಏರ್‌ ಸ್ಕೂಟರ್ ಗಾಗಿ ಗುರುವಾರದಿಂದ ಬುಕ್ಕಿಂಗ್ ಆರಂಭಿಸಿದೆ. ನೀರಿಕ್ಷೆಗೂ ಮೀರಿ, ಗ್ರಾಹಕರು ಅದನ್ನು ಆರ್ಡರ್ ಮಾಡಿದ್ದಾರೆ. ಜೊತೆಗೆ ಟಾಪ್ ಎಂಡ್ ಮಾದರಿ ಎಸ್1 ಪ್ರೊಗೆ ಮೊದಲಿನಿಂದ ಹೆಚ್ಚಿನ ಬೇಡಿಕೆ ಇದ್ದು, ಇವೆರೆಡು ಸ್ಕೂಟರ್ ಗಳನ್ನು ಖರೀದಿದಾರರಿಗೆ ಬೇಗನೇ ಪೂರೈಸಿ, ಮಾರಾಟವನ್ನು ದ್ವಿಗುಣಗೊಳಿಸಿಕೊಳ್ಳಲು ಕಂಪನಿ ಈ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.

Ola: ಓಲಾದಿಂದ ದಿಢೀರ್ ತೀರ್ಮಾನ, ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಸ್ಥಗಿತ

ಪ್ರಸ್ತುತ, ಮಾರಾಟದಿಂದ ಸ್ಥಗಿತಗೊಂಡಿರುವ ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಒಂದಷ್ಟು ವಿಚಾರವನ್ನು ತಿಳಿದುಕೊಳ್ಳುವುದಾದರೆ, ಇದು, 3 kWh ಬ್ಯಾಟರಿ ಪ್ಯಾಕ್ ಹೊಂದಿತ್ತು. ಸಂಪೂರ್ಣ ಚಾರ್ಜಿನಲ್ಲಿ 141 km ರೇಂಜ್ ಕೊಡುವ ಸಾಮರ್ಥ್ಯ ಪಡೆದಿತ್ತು. ಕೇವಲ 3.8 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯುತ್ತಿದ್ದ ಈ ಸ್ಕೂಟರ್, 95 kmph ಟಾಪ್ ಸ್ವೀಡ್ ಹೊಂದಿತ್ತು. ಜೊತೆಗೆ ರೂ.1.30 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿತ್ತು.

ಗುರುವಾರದಿಂದ ಬುಕ್ಕಿಂಗ್ ಪ್ರಾರಂಭವಾಗಿರುವ ಓಲಾ ಎಸ್1 ಏರ್‌ ಎಲೆಕ್ಟ್ರಿಕ್ ಸ್ಕೂಟರ್ ಗೆ ದೊಡ್ಡಮಟ್ಟದಲ್ಲಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಆರ್ಡರ್ ತೆಗೆದುಕೊಳ್ಳುವುದನ್ನು ಶುರು ಮಾಡಿದ ಒಂದೇ ಗಂಟೆಯಲ್ಲಿ 1,000 ಮಂದಿ ಕಾಯ್ದಿರಿಸಿದ್ದರು. ಮೂರು ಗಂಟೆ ಕಳೆಯುವಷ್ಟರಲ್ಲಿ 3,000 ಹೆಚ್ಚು ಬುಕ್ಕಿಂಗ್ ದಾಟಿದೆ ಎಂದು ಹೇಳಿದ್ದರು.

ಕಂಪನಿಯು ಹೇಳಿರುವಂತೆ ಜುಲೈ 30ರವರೆಗೆ ಓಲಾ ಎಸ್1 ಏರ್ ಕಾಯ್ದಿರಿಸಿರುವ ಗ್ರಾಹಕರಿಗೆ ರೂ.1,09,999 ದರದಲ್ಲಿ ಈ ಸ್ಕೂಟರ್ ಸಿಗಲಿದೆ. ಜುಲೈ 31 ರಿಂದ ನೀವು ಎಸ್1 ಏರ್ ಸ್ಕೂಟರ್, ಖರೀದಿಸಬೇಕೆಂದರೆ, ರೂ.1,19,999 ಅಂದರೆ ಹೆಚ್ಚುವರಿಯಾಗಿ ರೂ.10 ಸಾವಿರ ಬೆಲೆ ಇರುತ್ತದೆ. ಆಗಸ್ಟ್ ಮೊದಲ ವಾರದಿಂದಲೇ ಎಸ್1 ಏರ್ ವಿತರಣೆ ಶುರುವಾಗಲಿದೆ.

ಕೆಲವೇ ದಿನಗಳ ಹಿಂದೆ, ಓಲಾ ತನ್ನ ಹೊಚ್ಚ ಎಸ್1 ಏರ್ ಸ್ಕೂಟರ್‌ಗೆ 'ನಿಯಾನ್' ಎಂಬ ಹೊಸ ಬಣ್ಣದ ಆಯ್ಕೆಯನ್ನು ಪರಿಚಯಿಸಿತ್ತು. ಅದರ ಟೀಸರ್ ಅನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿತ್ತು. ಇದಿಷ್ಟೇ ಅಲ್ಲದೆ, ಈ ಸ್ಕೂಟರ್, ಸ್ಟೆಲ್ಲರ್ ಬ್ಲೂ, ಪೊರ್ಚೆಲೈನ್ ವೈಟ್, ಕೋರಲ್ ಗ್ಲಾಮ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ.

ನೂತನ ಎಸ್1 ಏರ್ ಬ್ಯಾಟರಿ ಪ್ಯಾಕ್ ಹಾಗೂ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದರೆ, ಇದರಲ್ಲಿ 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹಾಗೂ ಹಬ್ ಮೋಟಾರ್ ಬಳಕೆ ಮಾಡಲಾಗಿದ್ದು, 11.3 hp ಗರಿಷ್ಠ ಪವರ್ ಹಾಗೂ 58 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜಿನಲ್ಲಿ 125 km ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ.

ಓಲಾ ಎಸ್1 ಏರ್ ಸ್ಕೂಟರ್ ದೇಶೀಯ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್‌ಡೇಟ್ಸ್, ರಿಮೋಟ್ ಬೂಟ್ ಲಾಕ್/ ಅನ್‌ಲಾಕ್ ಅನ್ನು ಹೊಂದಿದೆ. ಜೊತೆಗೆ, ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಎಂಬ ರೈಡಿಂಗ್ ಮೋಡ್ ಪಡೆದಿದ್ದು, ಡ್ರಮ್ ಬ್ರೇಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಓಲಾದ ಟಾಪ್ ಎಂಡ್ ಮಾದರಿ, ಎಸ್1 ಪ್ರೊ ಕುರಿತು ಮಾತನಾಡುವದಾದರೆ, ಇದು ಶಕ್ತಿಯುತ 4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 181 km ರೇಂಜ್ ನೀಡುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯಲಿದ್ದು, ರೂ.1.40 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಭಾರತದ ಗ್ರಾಹಕರಿಗೆ ಸಿಗುತ್ತದೆ.

More from DriveSpark

Article Published On: Saturday, July 29, 2023, 16:09 [IST]
English summary
Ola discontinues s1 electric scooter details
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+