ಅಗ್ಗದ ಬೆಲೆ, ಅತ್ಯಾಧುನಿಕ ತಂತ್ರಾಜ್ಞಾನ... ಹಾಲಿವುಡ್ ಸೈ-ಫೈ ಸಿನಿಮಾ ನೆನೆಪಿಸುತ್ತಿವೆ ಓಲಾ ಇವಿ ಬೈಕ್‌ಗಳು

ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಮುನ್ನುಗ್ಗುತ್ತಿರುವ ಓಲಾ ಶೀಘ್ರದಲ್ಲೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ. ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ಇಂದು ತನ್ನ ಐದು ಎಲೆಕ್ಟ್ರಿಕ್ ಬೈಕ್‌ಗಳ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಕಂಪನಿಯು ಈ ಎಲೆಕ್ಟ್ರಿಕ್ ಬೈಕ್‌ಗಳನ್ನು ಕಮ್ಯೂಟರ್ ಟು ಸ್ಪೋರ್ಟ್ಸ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಬಿಡುಗಡೆ ಮಾಡಲಿದೆ.

ಎಲ್ಲಾ ಐದು ಮೋಟಾರ್‌ಸೈಕಲ್‌ಗಳು ಕೆಫೆ ರೇಸರ್, ಕ್ರೂಸರ್, ಸ್ಕ್ರ್ಯಾಂಬ್ಲರ್, ನೇಕ್ಡ್ ಮತ್ತು ಅಡ್ವೆಂಚರ್ ಶೈಲಿಯ ಬೈಕುಗಳನ್ನು ಒಳಗೊಂಡಿರುವ ವಿವಿಧ ವಿಭಾಗಗಳನ್ನು ಪ್ರತಿನಿಧಿಸುತ್ತವೆ. ಇಂದು ಬಿಡುಗಡೆಯಾದ ವಿಡಿಯೋದ ಕೊನೆಯಲ್ಲಿ ಬಹಿರಂಗಗೊಂಡ ಚಿತ್ರವು ಮುಂಬರುವ ಬೈಕ್‌ಗಳಿಂದ ಏನನ್ನು ನಿರೀಕ್ಷಿಸಬಹುದು ಎಂಬ ಮಸುಕಾದ ಕಲ್ಪನೆಯನ್ನು ತೋರಿಸುತ್ತದೆ. ಇವು ಪ್ರಸ್ತುತ ಪರಿಕಲ್ಪನೆಯ ಹಂತದಲ್ಲಿದ್ದು, ಆತ್ಯಾಧುನಿಕ ಡಿಸೈನ್ ಹಾಗೂ ಫೀಚರ್ಸ್ ಒಳಗೊಂಡಿರಲಿವೆ. ಇವುಗಳಲ್ಲಿ ಮೊದಲನೆಯದು ಈ ವರ್ಷ ಬಿಡುಗಡೆಯಾಗುವ ಸಾಧ್ಯತೆಯಿದೆ.

ಅಗ್ಗದ ಬೆಲೆ, ಅತ್ಯಾಧುನಿಕ ತಂತ್ರಾಜ್ಞಾನ... ಹಾಲಿವುಡ್ ಸೈ-ಫೈ ಸಿನಿಮಾ ನೆನೆಪಿಸುತ್ತಿವೆ ಓಲಾ ಇವಿ ಬೈಕ್‌ಗಳು

ವರದಿಯ ಪ್ರಕಾರ, ಓಲಾ ಎಲೆಕ್ಟ್ರಿಕ್ ತನ್ನ ಬೈಕ್‌ಗಳನ್ನು 85,000 ದಿಂದ 1.25 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆ ಮಾಡಬಹುದು. ಈ ಓಲಾ ಬೈಕ್ ಗಳು ಕೇವಲ ಸ್ಟೈಲಿಶ್ ಆಗಿರುವುದಲ್ಲದೆ, ಮೇಲೆ ತಿಳಿಸಿದಂತೆ ಹಲವು ಆಧುನಿಕ ಫೀಚರ್ ಗಳಿಂದ ಲೋಡ್ ಆಗಿವೆ. ವರದಿಗಳನ್ನು ನಂಬುವುದಾದರೆ, ಓಲಾ ತನ್ನ ಎಲೆಕ್ಟ್ರಿಕ್ ಬೈಕ್‌ನಲ್ಲಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS), ಡ್ಯುಯಲ್ ಚಾನೆಲ್ ABS, ಬ್ಲೂಟೂತ್ ಸಂಪರ್ಕದಂತಹ ಸುಧಾರಿತ ವೈಶಿಷ್ಟ್ಯಗಳನ್ನು ನೀಡುತ್ತದೆ.

ಈ ಮುಂಬರಲಿರುವ ಎಲೆಕ್ಟ್ರಿಕ್ ಬೈಕ್‌ಗಳ ಪ್ರತಿಸ್ಪರ್ಧಿಗಳ ಬಗ್ಗೆ ಮಾತನಾಡುವುದಾದರೆ, ರಿವೋಲ್ಟ್ ಮೋಟಾರ್ಸ್, ಟಾರ್ಕ್ ಮೋಟಾರ್ಸ್ ಮತ್ತು ಜಾಯ್ ಇ-ಬೈಕ್ಸ್‌ನಂತಹ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಮಾರಾಟ ಮಾಡುತ್ತಿವೆ. ಬಿಡುಗಡೆಯ ನಂತರ ಓಲಾ ಎಲೆಕ್ಟ್ರಿಕ್ ಬೈಕ್‌ಗಳು ಈ ಕಂಪನಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸುವ ನಿರೀಕ್ಷೆಯಿದೆ. ಓಲಾದ ಎಲೆಕ್ಟ್ರಿಕ್ ಬೈಕ್‌ಗಳು ಪ್ರತಿ ಚಾರ್ಜ್‌ಗೆ 150-200 ಕಿ.ಮೀ ರೇಂಜ್ ನೀಡಲಿವೆ ಎಂದು ಹೇಳಲಾಗುತ್ತಿದೆ.

ಕಂಪನಿಯು 2024 ರ ದ್ವಿತೀಯಾರ್ಧದಲ್ಲಿ ತನ್ನ ಮೊದಲ ನಾಲ್ಕು ಚಕ್ರದ ವಾಹನವನ್ನು ತಲುಪಿಸುವ ಹಾದಿಯಲ್ಲಿದೆ ಎಂದು ಓಲಾ ಮುಖ್ಯ ಹಣಕಾಸು ಅಧಿಕಾರಿ ಜಿ.ಆರ್. ಅರುಣ್ ಕುಮಾರ್ ಬಹಿರಂಗಪಡಿಸಿದ್ದಾರೆ. "ಸಾಫ್ಟ್‌ವೇರ್, ಸುರಕ್ಷತಾ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ಸ್, ಸೆಲ್‌ಗಳು, ಡ್ರೈವ್ ಟ್ರೈನ್‌ನಂತಹ ಭಾಗಗಳು ಇವಿಗಳಲ್ಲಿ ಬಹಳಷ್ಟು ಸಾಮಾನ್ಯ ವಿಷಯವಾಗಿದೆ." ಇವೆಲ್ಲವೂ ನಮ್ಮ ದ್ವಿಚಕ್ರ ವಾಹನದಲ್ಲಿ ಅಳವಡಿಸಿರುವ ಅನುಭವವಿರುವುದರಿಂದ "ನಾವು ಈಗಾಗಲೇ ಶೇ 30 -40 ರಷ್ಟು ಮುಗಿಸಿದ್ದೇವೆ ಎಂದು ಭಾವಿಸುತ್ತೇವೆ."

ಓಲಾ ತಯಾರಕರು ಮತ್ತು ಕಂಪನಿ ವಿನ್ಯಾಸದ ಮುಂದುವರಿದ ಹಂತಗಳ ಮೇಲೆ ಕೇಂದ್ರೀಕರಿಸಿದ್ದು, ಅದರ ದ್ವಿಚಕ್ರ ವಾಹನ ಉತ್ಪನ್ನಗಳಲ್ಲಿ ನಿಯೋಜಿಸಲಾದ ಕೆಲವು ತಂತ್ರಜ್ಞಾನದ ಹಂಚಿಕೆಯಿಂದ ಪ್ರಯೋಜನ ಪಡೆಯುತ್ತಿದೆ. ಈಗಾಗಲೇ ನಾವು ಪ್ರಮಾಣಿತ ರೇಂಜ್ ಹಾಗೂ ಸುರಕ್ಷಿತ ಫೀಚರ್ಸ್ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ನಮ್ಮ ಉತ್ಪನ್ನಗಳಲ್ಲಿ ಬಳಸಿದ್ದೇವೆ. ಹಾಗೆಯೇ ನಮ್ಮ ಮುಂಬರುವ ಇವಿ ಕಾರಿನಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಿದ್ದೇವೆ ಎಂದು ಇಂಡಿಯಾ ಎನರ್ಜಿ ವೀಕ್ ಫೋರಮ್‌ನಲ್ಲಿ ಕುಮಾರ್ ಹೇಳಿದರು.

ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಪ್ರಕಾರ, ಕಂಪನಿಯು ತನ್ನ ಮೊದಲ ಕಾರಿಗೆ $ 50,000 (ಸುಮಾರು 41 ಲಕ್ಷ ರೂ.) ಕ್ಕಿಂತ ಕಡಿಮೆ ಬೆಲೆಯನ್ನು ನಿಗದಿಪಡಿಸುವ ಗುರಿಯನ್ನು ಹೊಂದಿದೆ. ಕಡಿಮೆ ವೆಚ್ಚದಲ್ಲಿ ಲಿಥಿಯಂ-ಐಯಾನ್ ಸೆಲ್‌ಗಳು ಮತ್ತು ಬ್ಯಾಟರಿಗಳಂತಹ ಘಟಕಗಳನ್ನು ತಮ್ಮಲ್ಲಿಯೇ ತಯಾರಿಸುತ್ತದೆ. Ola ಟೆಸ್ಲಾ Inc., ಹ್ಯುಂಡೈ ಮೋಟಾರ್ ಕಂ. ಮತ್ತು ಭಾರತದ ಎಲೆಕ್ಟ್ರಿಕ್-ವಾಹನ ಮಾರುಕಟ್ಟೆಯಲ್ಲಿ ಸ್ಥಳೀಯ ಪ್ರತಿಸ್ಪರ್ಧಿಗಳಾದ ಟಾಟಾ ಗ್ರೂಪ್‌ನೊಂದಿಗೆ ಸ್ಪರ್ಧಿಸುವ ಗುರಿಯನ್ನು ಹೊಂದಿದೆ.

ಇದಲ್ಲದೆ, ಓಲಾ ಎಲೆಕ್ಟ್ರಿಕ್ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಣಿಜ್ಯ ವಾಹನ ವಿಭಾಗಕ್ಕೆ ಕಾಲಿಡುವುದಾಗಿ ಇತ್ತೀಚೆಗೆ ಘೋಷಿಸಿತು. ಸಂಸ್ಥಾಪಕ ಭವಿಶ್ ಅಗರ್ವಾಲ್ ಮಾತನಾಡಿ, ಓಲಾ ದ್ವಿಚಕ್ರ ವಾಹನ ವ್ಯಾಪಾರವು ಶೀಘ್ರದಲ್ಲೇ ಲಾಭವನ್ನು ತರಲಿದ್ದು, ಮುಂಬರುವ ಹೊಸ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲಾಗುವುದು. ನಮ್ಮಲ್ಲಿ ಕಾರುಗಳು, ದ್ವಿಚಕ್ರ ವಾಹನಗಳಲ್ಲಿ ಕೆಲಸ ಮಾಡುವ ತಂಡಗಳಿವೆ, ವಾಣಿಜ್ಯ ವಾಹನಗಳಲ್ಲಿ ಕೆಲಸ ಮಾಡುವ ತಂಡಗಳಿವೆ... ಒಂದೇ ಸಾಫ್ಟ್‌ವೇರ್, ಒಂದೇ ಸೆಲ್‌ಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಾದ್ಯಂತ ಬಳಸಲಾಗುತ್ತದೆ" ಎಂದು ಹೇಳಿದರು.

More from DriveSpark

Article Published On: Thursday, February 9, 2023, 20:40 [IST]
English summary
Ola electric bikes coming with advanced technology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+