ದೇಶದ ಸಣ್ಣ ನಗರಗಳಿಗೂ Ola EV... ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್‌ನೊಂದಿಗೆ ಪಾಲುದಾರಿಕೆ
ಭಾರತದ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕರಾದ ಓಲಾದವರು, ದೇಶದ ಸಣ್ಣ ನಗರಗಳಿಗೂ Ola EV ಗಳನ್ನು ತಲುಪಿಸುವ ಪ್ರಯತ್ನದ ಭಾಗವಾಗಿ ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ಈ ಪಾಲುದಾರಿಕೆಯೊಂದಿಗೆ, Ola 48 ತಿಂಗಳ ಅವಧಿಗೆ ಕೇವಲ 8.99% ಬಡ್ಡಿದರದಲ್ಲಿ ಹಣಕಾಸು ನಮ್ಯತೆಯನ್ನು ನೀಡುತ್ತಿದೆ.
ಇದಲ್ಲದೆ, ಅನುಮೋದನೆಗಳನ್ನು ನಿಮಿಷಗಳಲ್ಲಿ ನೀಡುವ ಮೂಲಕ, Ola ಎಲೆಕ್ಟ್ರಿಕ್ EVಗಳನ್ನು ಹೆಚ್ಚು ಕೈಗೆಟುಕುವ ಮತ್ತು ಎಲ್ಲರಿಗೂ ಲಭ್ಯವಾಗಿಸುವಂತೆ ಮಾಡಲಿದೆ. ಶ್ರೀರಾಮ್ ಸಿಟಿ ಯೂನಿಯನ್ ಫೈನಾನ್ಸ್ ಭಾರತದ ಪ್ರಮುಖ ಎನ್‌ಬಿಎಫ್‌ಸಿ ಮಾತ್ರವಲ್ಲ, ದೇಶದಲ್ಲಿ 2W ನ ಅತಿದೊಡ್ಡ ಹಣಕಾಸುದಾರರಲ್ಲಿ ಒಂದಾಗಿದೆ. ಸಂಸ್ಥೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 2,800 ಶಾಖೆಗಳನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ.

Ola ಮುಖ್ಯ ವ್ಯಾಪಾರ ಅಧಿಕಾರಿ ಅಂಕುಶ್ ಅಗರ್ವಾಲ್ ಮಾತನಾಡಿ "ನಾವು ನಮ್ಮ ಹೆಜ್ಜೆಗುರುತುಗಳನ್ನು ಶ್ರೇಣಿ-1 ನಗರಗಳ ಆಚೆಗೆ ವಿಸ್ತರಿಸಿದಂತೆ, ನಾವು ಹಣಕಾಸು ಪರಿಹಾರಗಳನ್ನು ಸುಲಭ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವತ್ತ ಗಮನಹರಿಸುತ್ತಿದ್ದೇವೆ. ದೇಶದ ಪ್ರತಿ ಮೂಲೆಗು ಕೈಗೆಟುಕುವ ದರದಲ್ಲಿ ನಮ್ಮ ಸ್ಕೂಟರ್‌ಗಳನ್ನು ನೀಡುವ ಗುರಿ ನಮಗಿದೆ ಎಂದರು.
ಶ್ರೀರಾಮ್ ಸಿಟಿ ಯೂನಿಯನ್ ಜೊತೆಗಿನ ನಮ್ಮ ಸಹಭಾಗಿತ್ವದೊಂದಿಗೆ, ಗ್ರಾಹಕರ ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು ಮತ್ತು ಗ್ರಾಹಕರಿಗೆ ಎಲೆಕ್ಟ್ರಿಕ್ ಮೊಬಿಲಿಟಿಯನ್ನು ನಿಜವಾಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ದೇಶಾದ್ಯಂತ ಇವಿ ಅಳವಡಿಕೆಯನ್ನು ವೇಗಗೊಳಿಸಲು ದಾರಿ ಮಾಡಿಕೊಡುತ್ತದೆ ಎಂದು ನಂಬಿದ್ದೇವೆ ಎಂದು ಅಂಕುಶ್ ಅಗರ್ವಾಲ್ ಹೇಳಿದರು.

ಗ್ರಾಹಕರು ಓಲಾ ಅಪ್ಲಿಕೇಶನ್ ಮೂಲಕ ತಮ್ಮ ಖರೀದಿಯನ್ನು ಅಂತಿಮಗೊಳಿಸುವ ಮೊದಲು ಹಣಕಾಸು ಆಯ್ಕೆಗಳ ಕುರಿತು ವಿವರವಾದ ಮಾಹಿತಿಗಾಗಿ ತಮ್ಮ ಹತ್ತಿರದ ಓಲಾ ಅನುಭವ ಕೇಂದ್ರಕ್ಕೆ ಭೇಟಿ ನೀಡಬಹುದು. ಈ ಮೂಲಕ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಈ ಹಣಕಾಸು ಆಯ್ಕೆಗಳನ್ನು ಪಡೆದು ನಂತರ ಖರೀದಿಯ ಬಗ್ಗೆ ಐಡಿಯಾ ಬಂದ ಮೇಲೆ ಕೊಳ್ಳಬಹುದು.
Ola ಪ್ರಸ್ತುತ 850+ ಅನುಭವ ಕೇಂದ್ರಗಳೊಂದಿಗೆ ಭಾರತದ ಅತಿದೊಡ್ಡ D2C ಆಟೋಮೊಬೈಲ್ ಜಾಲವನ್ನು ಹೊಂದಿದೆ. ಆಗಸ್ಟ್‌ನಲ್ಲಿ 1,000 ನೇ ಇಸಿಯನ್ನು ಪ್ರಾರಂಭಿಸಲು ಸಜ್ಜಾಗಿರುವುದಾಗಿ ಇತ್ತೀಚೆಗೆ ಓಲಾ ಪ್ರಕಟಿಸಿತ್ತು. ಇನ್ನು ಓಲಾ ತನ್ನ S1 ಲೈನ್‌ಅಪ್ ನಲ್ಲಿ ಮೂರು ಮಾದರಿಗಳೊಂದಿಗೆ ಇವಿ ಮಾರಾಟದಲ್ಲಿ ಸದ್ಯ ಭಾರತದಲ್ಲಿ ಅಗ್ರಸ್ಥಾನದಲ್ಲಿದೆ.
ಓಲಾ ಲೈನ್‌ಅಪ್ ನೋಡುವುದಾದರೆ S1 ಪ್ರೋ, S1 ಮತ್ತು S1 ಏರ್ ಮಾಚದರಿಗಳನ್ನು ಒಳಗೊಂಡಿದೆ. ಇವು ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಕಾರ್ಯಕ್ಷಮತೆಯೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿವೆ. ಕಂಪನಿಯು ಈಗ ಸತತ ಮೂರು ತ್ರೈಮಾಸಿಕಗಳಿಗಿಂತ ಹೆಚ್ಚು ಕಾಲ ಮಾರಾಟದಲ್ಲಿ 2W EV ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಸುಮಾರು 40% ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಇವಿ ನಾಯಕನಾಗಿ ಮುಂದುವರೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








