Ola: ಬೆಂಗಳೂರಿನ ಓಲಾಗೆ ನಿರೀಕ್ಷೆಗೂ ಮೀರಿ ಯಶಸ್ಸು ತಂದುಕೊಟ್ಟ ಗ್ರಾಹಕ, 200,000 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ
ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola Electric) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ದು, ತನ್ನ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಿಂದ ಪ್ರತಿ ಬಾರಿಯೂ ಒಂದಿಲ್ಲೊಂದು ಹೊಸ ದಾಖಲೆಯನ್ನು ನಿರ್ಮಾಣ ಮಾಡುತ್ತಿರುತ್ತದೆ. ಕಳೆದ ತಿಂಗಳು ಯಾರು ಊಹಿಸಿರದಷ್ಟು ಪ್ರಗತಿ ಸಾಧಿಸಿದೆ.
ಓಲಾ ಎಲೆಕ್ಟ್ರಿಕ್ (Ola Electric) ಮಂಗಳವಾರ, ಅಕ್ಟೋಬರ್ ತಿಂಗಳು 24,000 ಯುನಿಟ್ ಸ್ಕೂಟರ್ ಮಾರಾಟ ಮಾಡಲಾಗಿದೆ ಎಂದು ಘೋಷಣೆ ಮಾಡಿದೆ. ನವರಾತ್ರಿ ಹಬ್ಬವಿದ್ದ ಕಾರಣ, ಈ ಪರಿಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಿದೆ. ಸೇಲ್ಸ್ 2.5 ಪಟ್ಟು ಹೆಚ್ಚಳಗೊಂಡಿದೆ ಎಂದು ತಿಳಿಸಿದೆ. ಜೊತೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡ 35% ಪಾಲನ್ನು ತನ್ನದಾಗಿಸಿಕೊಂಡಿದೆ.

ಪ್ರತಿ ವರ್ಷ ಹಬ್ಬದ ಋತುವಿನಲ್ಲಿ ಬಹುತೇಕ ಎಲ್ಲ ಕಂಪನಿಗಳು ಉತ್ತಮ ಮಾರಾಟವನ್ನು ದಾಖಲಿಸುತ್ತವೆ. ಓಲಾ ಕೂಡ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದೆ. ನವೆಂಬರ್‌ನಲ್ಲಿ ದೀಪಾವಳಿ ಹಬ್ಬವಿದ್ದು, ಮತ್ತೆ ಮಾರಾಟ ನಾಗಾಲೋಟ ಮುಂದುವರಿಯುವ ಸಾಧ್ಯತೆಯಿದೆ. ಜೊತೆಗೆ ಈ ವರ್ಷ (2023)ದ ಮೊದಲ 10 ತಿಂಗಳಲ್ಲಿ 200,000ಕ್ಕೂ ಅಧಿಕ ಎಲೆಕ್ಟ್ರಿಕ್ ಸ್ಕೂಟರ್ ಸೇಲ್ ಮಾಡಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಈ ಸಾಧನೆ ಮಾಡಿದ ಭಾರತದ ಏಕೈಕ ಎಲೆಕ್ಟ್ರಿಕ್ ವಾಹನ ತಯಾರಿಕ ಕಂಪನಿ ಎಂಬ ಹೆಗ್ಗಳಿಕೆಗೂ ಓಲಾ ಎಲೆಕ್ಟ್ರಿಕ್ ಪಾತ್ರವಾಗಿದೆ. ಈ ವರ್ಷದ ಜನವರಿ - ಅಕ್ಟೋಬರ್ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 100% ಗೂ ಹೆಚ್ಚಿನ ಬೆಳವಣಿಗೆ ಕಂಡಿದೆ ಎಂದು ಕಂಪನಿಯೇ ಹೇಳಿಕೊಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಒಂದು ಲಕ್ಷ ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಲಷ್ಟೇ ಓಲಾ ಶಕ್ತವಾಗಿತ್ತು.

ಓಲಾ ಸ್ಕೂಟರ್ ಗಳು ಈ ಸಂಖ್ಯೆಯಲ್ಲಿ ಮಾರಾಟವಾಗಿರುವ ಬಗ್ಗೆ ಮಾತನಾಡಿರುವ ಕಂಪನಿಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಅನ್ಶುಲ್ ಖಂಡೇಲ್ವಾಲ್, 'ಎಲೆಕ್ಟ್ರಿಕ್ ವಾಹನಗಳಿಗೆ ಹಬ್ಬದ ಋತುವಿನಲ್ಲಿ ನಂಬಲಾಗದಂತಹ ಬೇಡಿಕೆ ಬಂದಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಅದು ದೀಪಾವಳಿ ಹಬ್ಬಕ್ಕೂ ಮುಂದುವರಿಯಬಹುದು ಎಂದು ನಿರೀಕ್ಷಿಸಿದ್ದೇವೆ. ಭಾರತದ ಇವಿ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲಿಗೆ ಈ ವರ್ಷ ಸಾಕ್ಷಿಯಾಗಿದೆ' ಎಂದು ಹೇಳಿದ್ದಾರೆ.
ಓಲಾದ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಗ್ಗೆ ಮಾತನಾಡುವುದಾದರೆ, ಟಾಪ್ ಎಂಡ್ ಮಾದರಿ ಎಸ್1 ಪ್ರೊ ರೂ.1,47,499 ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಸಂಪೂರ್ಣ ಚಾರ್ಜ್ ನಲ್ಲಿ 195 ಕಿಲೋಮೀಟರ್ ರೇಂಜ್ ನೀಡುಲಿದ್ದು, 120 kmph ಟಾಪ್ ಸ್ವೀಡ್ ಹೊಂದಿದೆ. ಓಲಾ ಎಸ್1 ಏರ್, ರೂ.1,19,999 ಎಕ್ಸ್ ಶೋರೂಂ ದರದಲ್ಲಿ ಸಿಗಲಿದ್ದು, ಫುಲ್ ಚಾರ್ಜ್ ನಲ್ಲಿ 151 km ರೇಂಜ್ ಕೊಡುತ್ತದೆ.
ಓಲಾ ಎಸ್1 ಎಕ್ಸ್, ರೂ.1,09,999 ಎಕ್ಸ್ ಶೋರೂಂ ದರವನ್ನು ಪಡೆದಿದ್ದು, ಈಗಾಗಲೇ ಡೀಲರ್ ಶಿಪ್ ತಲುಪಲು ಶುರುವಾಗಿದೆ. ಇದು 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 151 ಕಿಲೋಮೀಟರ್ ರೇಂಜ್ ನೀಡುತ್ತದೆ. ಮನೆ ವಿದ್ಯುತ್ ಬಳಕೆಯಲ್ಲಿ 7.4 ಗಂಟೆಯಲ್ಲಿ ಚಾರ್ಜ್ ಆಗುತ್ತದೆ. 5-ಇಂಚಿನ LCD ಡಿಸ್ಪ್ಲೇ, OTA ಅಪ್ಡೇಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications