Ola electric: ಭರ್ಜರಿ ಮಾರಾಟದೊಂದಿಗೆ ತನ್ನ ಸ್ಥಾನ ಬಲಪಡಿಸಿಕೊಂಡ ಓಲಾ ಇವಿ

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಕಂಪನಿಯಾದ ಓಲಾ ಎಲೆಕ್ಟ್ರಿಕ್ ಜುಲೈ ತಿಂಗಳಲ್ಲಿ ಪ್ರಭಾವಶಾಲಿ ಮಾರಾಟದೊಂದಿಗೆ EV ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನ ಬಲವಾದ ಸ್ಥಾನವನ್ನು ಕಾಯ್ದುಕೊಂಡಿದೆ. ಕಂಪನಿಯು ಜುಲೈನಲ್ಲಿ ಸುಮಾರು 19,000 ಯೂನಿಟ್‌ಗಳನ್ನು ಮಾರಾಟ ಮಾಡಿ ಶೇ40 ರಷ್ಟು ಪಾಲನ್ನು ಹೊಂದುವ ಮೂಲಕ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ Ola ಮಾರಾಟದಲ್ಲಿ ಶೇ 375 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟಾರೆ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ತನ್ನ ಜೋರನ್ನು ಮುಂದುವರೆಸಿದೆ. ಹಾಗೆಯೇ ಓಲಾ ಭವಿಷ್ಯದ ಯೋಜನೆಗಳ ಬಗ್ಗೆ ಕುತೂಹಲದಿಂದ ಇದ್ದು, ಬೈಕ್ ಹಾಗೂ ಕಾರು ವಲಯದಲ್ಲೂ ಜನಪ್ರಿಯತೆ ಗಳಿಸಲು ಸಜ್ಜಾಗುತ್ತಿದೆ.

ola-electric-scooter-july-sales-report

ಓಲಾ ಮುಖ್ಯ ವ್ಯಾಪಾರ ಅಧಿಕಾರಿ ಅಂಕುಶ್ ಅಗರ್ವಾಲ್ ಮಾತನಾಡಿ, "ಓಲಾ ಎಲೆಕ್ಟ್ರಿಕ್ ಮಾರುಕಟ್ಟೆ ನಾಯಕನಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. #EndICEAge ಎಂಬ ಘೋಷಣೆಯನ್ನು ನಿಜಗೊಳಿಸಲು ಬದ್ಧವಾಗಿದೆ. ಕ್ರಾಂತಿಕಾರಿ S1 ಏರ್‌ಗೆ ಅಗಾಧ ಪ್ರತಿಕ್ರಿಯೆಯೊಂದಿಗೆ, ನಮ್ಮ ಇತ್ತೀಚಿನ ಉತ್ಪನ್ನವು ಸ್ಕೂಟರ್ ವಿಭಾಗದಲ್ಲಿ EV ಸಮೂಹ ಮಾರುಕಟ್ಟೆಯನ್ನು ಅಳವಡಿಸಿಕೊಳ್ಳುತ್ತದೆ ಎಂದರು.

ಓಲಾ ಭಾರತದ EV ಮುನ್ನುಗ್ಗುವಿಕೆಯನ್ನು ವೇಗಗೊಳಿಸುವಲ್ಲಿ ಬಹಳ ದೂರ ಸಾಗಲಿದೆ. ಅತ್ಯಂತ ಕಡಿಮೆ ಬೆಲೆಯ S1 ಏರ್ ICE ಸ್ಕೂಟರ್‌ಗಳಿಗೆ ಪರಿಪೂರ್ಣ ಉತ್ತರವಾಗಿದೆ. ಅದರ ಕಡಿಮೆ TCO (ಮಾಲೀಕತ್ವದ ಒಟ್ಟು ವೆಚ್ಚ) ಜೊತೆಗೆ ಇದು #EndICEAge ಅನ್ನು ವೇಗಗೊಳಿಸುತ್ತದೆ. ಆಗಸ್ಟ್‌ನಲ್ಲಿ S1 ಏರ್ ಡೆಲಿವರಿಗಳು ಆರಂಭವಾಗಲಿವೆ ಎಂದು ಅವರು ತಿಳಿಸಿದರು.

ola-electric-scooter-july-sales-report

ಉತ್ತಮ ಬುಕಿಂಗ್: Ola S1 Air ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದು, 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ನೋಂದಾಯಿಸಿದೆ. ಕಂಪನಿ ಹೇಳಿರುವಂತೆ ಜುಲೈ 30ರವರೆಗೆ ಓಲಾ ಎಸ್1 ಏರ್ ಕಾಯ್ದಿರಿಸಿರುವ ಗ್ರಾಹಕರಿಗೆ ರೂ.1,09,999 ದರದಲ್ಲಿ ಈ ಸ್ಕೂಟರ್ ಸಿಗಲಿದೆ. ಜುಲೈ 31 ರಿಂದ ನೀವು ಎಸ್1 ಏರ್ ಸ್ಕೂಟರ್, ಖರೀದಿಸಬೇಕೆಂದರೆ, ರೂ.1,19,999 ಅಂದರೆ ಹೆಚ್ಚುವರಿಯಾಗಿ ರೂ.10 ಸಾವಿರ ಬೆಲೆ ಇರುತ್ತದೆ ಎಂದು ಹೇಳಿತ್ತು.

ಆದರೆ ಈಗ ಹೆಚ್ಚಿನ ಬೇಡಿಕೆ ಮತ್ತು ಸ್ಕೂಟರ್‌ನ ಲಭ್ಯತೆಯನ್ನು ಅದರ ಆರಂಭಿಕ ಬೆಲೆಯಲ್ಲಿ ವಿಸ್ತರಿಸಲು ಹಲವರು ವಿನಂತಿಸಿದ ಕಾರಣ, ಕಂಪನಿಯು ಎಲ್ಲಾ ಗ್ರಾಹಕರಿಗೆ ರೂ. 1,09,999 ರ ಆಕರ್ಷಕ ಆರಂಭಿಕ ಬೆಲೆಯಲ್ಲಿ ಆಗಸ್ಟ್ 15 ರವರೆಗೆ ಅವಕಾಶವನ್ನು ವಿಸ್ತರಿಸಿದೆ. ಆಗಸ್ಟ್ ಮೊದಲ ವಾರದಿಂದಲೇ ಎಸ್1 ಏರ್ ವಿತರಣೆ ಶುರುವಾಗಲಿದೆ.

ola-electric-scooter-july-sales-report

ಓಲಾ ಎಸ್1 ಏರ್ ಸ್ಕೂಟರ್ ದೇಶೀಯ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್‌ಡೇಟ್ಸ್, ರಿಮೋಟ್ ಬೂಟ್ ಲಾಕ್/ ಅನ್‌ಲಾಕ್ ಅನ್ನು ಹೊಂದಿದೆ. ಜೊತೆಗೆ, ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಎಂಬ ರೈಡಿಂಗ್ ಮೋಡ್ ಪಡೆದಿದ್ದು, ಡ್ರಮ್ ಬ್ರೇಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಕಡಿಮೆ ನಿರ್ವಹಣಾ ವೆಚ್ಚಗಳೊಂದಿಗೆ, S1 ಏರ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸ ಅಂಶಗಳನ್ನು S1 ಮತ್ತು S1 Pro ನಿಂದ ಪಡೆದುಕೊಂಡಿದೆ. ದೃಢವಾದ 3 kWh ಬ್ಯಾಟರಿ ಸಾಮರ್ಥ್ಯದೊಂದಿಗೆ, 125 ಕಿ.ಮೀ ಪ್ರಮಾಣೀಕೃತ ಶ್ರೇಣಿ ಮತ್ತು 90 km/h ಗಮನಾರ್ಹವಾದ ಗರಿಷ್ಠ ವೇಗದೊಂದಿಗೆ, Ola S1 ಏರ್ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಲಿದೆ ಎಂದು ಕಂಪನಿ ಹೇಳಿದೆ.

ola-electric-scooter-july-sales-report

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Monday, July 31, 2023, 17:47 [IST]
English summary
Ola electric scooter july sales report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+