ಏನೇ ಆಗಲಿ.. ಬೆಂಗಳೂರಿನ Ola ಸ್ಕೂಟರ್‌ಗಳೇ ನಂಬರ್ 1: ಇಲ್ಲಿದೆ ಮಾಹಿತಿ

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ)ಗಳ ಅಬ್ಬರ ಶುರುವಾಗಿದೆ. ಓಲಾ, ಟಿವಿಎಸ್, ಹೀರೋ ಹಾಗೂ ಎಥರ್ ಸೇರಿದಂತೆ ವಿವಿಧ ಕಂಪನಿಗಳು ತಮ್ಮ ಇ-ಸ್ಕೂಟರ್ ಹಾಗೂ ಬೈಕ್ ಗಳನ್ನು ಸೇಲ್ ಮಾಡುತ್ತಿವೆ. ಇತ್ತೀಚೆಗೆ ಜೂನ್ (2023) ತಿಂಗಳ ಮಾರಾಟ ವರದಿ ಪ್ರಕಟಗೊಂಡಿದೆ.

ಬೆಂಗಳೂರು ಮೂಲಕ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುಸಿಕೊಂಡಿರುವ ಓಲಾ (Ola) ಕಳೆದ ಜೂನ್ ನಲ್ಲಿಯು ತನ್ನ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ. ಬರೋಬ್ಬರಿ 18,000 ಯುನಿಟ್ ವೆಹಿಕಲ್ ಸೇಲ್ ಮಾಡಿ, ದೇಶೀಯ ಇವಿ ಟೂ ವೀಲರ್ ಮಾರುಕಟ್ಟೆಯಲ್ಲಿ ಶೇಕಡ 40% ಪಾಲನ್ನು ಹೊಂದಿವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಏನೇ ಆಗಲಿ.. ಬೆಂಗಳೂರಿನ Ola ಸ್ಕೂಟರ್‌ಗಳೇ ನಂಬರ್ 1: ಇಲ್ಲಿದೆ ಮಾಹಿತಿ

ಈ ಬಗ್ಗೆ ಮಾತನಾಡಿರುವ ಕಂಪನಿಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಅಂಶುಲ್ ಖಂಡೇಲ್ವಾಲ್ ಅವರು, 'ಜೂನ್ ತಿಂಗಳಲ್ಲಿ ಮಾರಾಟ ಪ್ರಮಾಣ ನಿಧಾನಗತಿಯಲ್ಲಿ ಇದ್ದರೂ ಆರೋಗ್ಯಕಾರವಾದ ಪ್ರಗತಿ ಕಂಡಿದ್ದೇವೆ. ಸಬ್ಸಿಡಿ ಕಡಿತ ಸೇರಿದಂತೆ ಹಲವು ಕಾರಣಗಳಿಂದ ಸೇಲ್ಸ್ ನಲ್ಲಿ ಕೊಂಚ ಹಿನ್ನೆಡೆಯಾಯಿತು. ಜುಲೈ ತಿಂಗಳಲ್ಲಿ ಎಸ್1 ಏರ್‌ ಸ್ಕೂಟರ್ ಗ್ರಾಹಕರ ಕೈಸೇರಲಿದ್ದು, ನಮ್ಮ ಪೋರ್ಟ್‌ಫೋಲಿಯೊ ವಿಸ್ತರಣೆ ಮಾಡಿಕೊಳ್ಳುವಲ್ಲಿ ಉತ್ಸುಕರಾಗಿದ್ದೇವೆ' ಎಂದು ಹೇಳಿದ್ದಾರೆ.

2021ರ ಆಗಸ್ಟ್ 15ರಂದು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಓಲಾ ಕಂಪನಿ, ಕಡಿಮೆ ಅವಧಿಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಈವರೆಗೆ 2.36 ಲಕ್ಷ ಇ- ಸ್ಕೂಟರ್ ಮಾರಾಟ ಮಾಡಿದೆ. ತಿಂಗಳ ಸರಾಸರಿ ಲೆಕ್ಕವನ್ನು ನೋಡುವುದಾದರೆ, ಏನಿಲ್ಲ ಅಂದರೂ 20,000 ಯುನಿಟ್ ಸ್ಕೂಟರ್ ಸೇಲ್ ಮಾಡುತ್ತಿದೆ.

ಓಲಾ ಕಂಪನಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಟಾಪ್ ಎಂಡ್ 'ಎಸ್1 ಪ್ರೊ' ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು, 1.40 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 4 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿರುವ ಈ ಸ್ಕೂಟರ್, ಸಂಪೂರ್ಣ ಚಾರ್ಜಿನಲ್ಲಿ 181 km ರೇಂಜ್ ನೀಡಲಿದ್ದು, 95km/h ಟಾಪ್ ಸ್ವೀಡ್ ಹೊಂದಿದೆ.

ಮಿಡ್ ಲೆವೆಲ್ ಆವೃತ್ತಿಯಾಗಿರುವ ಓಲಾ ಎಸ್1, ರೂ.1.30 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದ್ದು, 3 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದೆ. ಫುಲ್ ಚಾರ್ಜಿನಲ್ಲಿ 141 km ರೇಂಜ್ ನೀಡುತ್ತದೆ. 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಓಲಾ ಎಸ್1 ಏರ್ ರೂ.1.10 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಇದು, 3 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ . ಆದರೂ ಕಡಿಮೆ ಪವರ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜಿನಲ್ಲಿ 125 km ರೇಂಜ್ ನೀಡಲು ಶಕ್ತವಾಗಿದೆ.

ಕೇಂದ್ರ ಸರ್ಕಾರ FAME ಸಬ್ಸಿಡಿ ದರಗಳಲ್ಲಿ ಪರಿಷ್ಕರಣೆ ಮಾಡಿದ ಹಿನ್ನೆಲೆ, ಓಲಾ ಕಂಪನಿ ಜೂನ್ ತಿಂಗಳಲ್ಲಿ ತನ್ನೆಲ್ಲ ಎಲೆಕ್ಟ್ರಿಕ್ ಮಾದರಿಗಳ ಬೆಲೆಯನ್ನು ಹೆಚ್ಚಿಸಿತ್ತು. ಈ ಕಾರಣಕ್ಕೆ 18,000 ಯುನಿಟ್ ಮಾರಾಟ ಮಾಡಿದ್ದರೂ ಮೇ ತಿಂಗಳಿಗೆ ಹೋಲಿಸಿದರೆ (35,000 ಯುನಿಟ್) ತೀವ್ರ ಕುಸಿತ ಕಂಡಿದೆ. ಈ ಜುಲೈ ತಿಂಗಳಲ್ಲಿ ತನ್ನ ಸೇಲ್ಸ್ ವೃದ್ಧಿಸಿಕೊಳ್ಳುವ ವಿಶ್ವಾಸದಲ್ಲಿ ಕಂಪನಿಯಿದೆ.

More from DriveSpark

Article Published On: Friday, July 7, 2023, 12:18 [IST]
English summary
Ola electric scooter june sales report
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+