Ola Electric: ಓಲಾ ಓಟಕ್ಕೆ ಅಡ್ಡಿಯೇ ಇಲ್ಲ... ದೇಶದಲ್ಲಿ ನಮ್ಮ ಬೆಂಗಳೂರು ಕಂಪನಿಯೇ ಟಾಪ್

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಕಂಪನಿಯಾದ ಓಲಾ ಎಲೆಕ್ಟ್ರಿಕ್, EV ದ್ವಿಚಕ್ರ ವಾಹನ ವಲಯದಲ್ಲಿ ಕಳದ ವರ್ಷದಂತೆ ಈ ವರ್ಷ ಕೂಡ ತನ್ನ ಅಧಿಪತ್ಯವನ್ನು ಮುಂದುವರೆಸಿದೆ. ಆಗಸ್ಟ್‌ನಲ್ಲಿ 19,000 ಯುನಿಟ್‌ಗಳ ಮಾರಾಟವನ್ನು (ವಾಹನ್ ಡೇಟಾ ಪ್ರಕಾರ) ನೋಂದಾಯಿಸಿ ಶೇ400 ರಷ್ಟು ವಾ‍ರ್ಷಿಕ ಬೆಳವಣಿಗೆಯ ನಿಗಧಿತ ಮತ್ತು ಶೇ 30 ರಷ್ಟು ಮಾರುಕಟ್ಟೆ ಪಾಲನ್ನು ಸ್ವಾಧೀನಪಡಿಸಿಕೊಂಡಿದೆ.

Ola ನ ಇತ್ತೀಚಿನ S1 ಸ್ಕೂಟರ್ ಅಗಾಧ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಬಿಡುಗಡೆಯಾದ ಎರಡು ವಾರಗಳಲ್ಲಿ 75,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ. Ola FutureFactory ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆ ಬೇಡಿಕೆಯನ್ನು ಪೂರೈಸಲು ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಅನಾವರಣಗೊಳಿಸಲಾದ S1 Pro, S1 Air, S1X+, S1X (3kWh), S1X (2kWh) ವಾಹನಗಳನ್ನು ಅತ್ಯಾಧುನಿಕ Gen-2 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಿರುವುದಾಗಿ ಕಂಪನಿ ತಿಳಿಸಿದೆ.

ola-electric-scooters-august-sales

S1 ಪ್ರೊ: ಈ ಸ್ಕೂಟರ್ ರೂ. 1,47,499 ಬೆಲೆಯೊಂದಿಗೆ Gen-2 S1 Pro ಈಗ ಟ್ವಿನ್-ಫೋರ್ಕ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಫ್ಲಾಟ್ ಫ್ಲೋರ್‌ಬೋರ್ಡ್ ಜೊತೆಗೆ ಸುಧಾರಿತ 195 ಕಿ.ಮೀ ವ್ಯಾಪ್ತಿ ಮತ್ತು 120 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. S1 Pro Gen 2 ಗಾಗಿ ಖರೀದಿ ಈಗ ತೆರೆದಿದೆ, ಆದರೆ ವಿತರಣೆಗಳು ಸೆಪ್ಟೆಂಬರ್ ಮಧ್ಯದಲ್ಲಿ ಪ್ರಾರಂಭವಾಗುತ್ತವೆ.

S1 ಏರ್: ಈ ಸ್ಕೂಟರ್ ರೂ. 1,19,999 ಬೆಲೆಯೊಂದಿಗೆ ದೃಢವಾದ 3 kWh ಬ್ಯಾಟರಿ ಸಾಮರ್ಥ್ಯ, 6kW ಗರಿಷ್ಠ ಮೋಟಾರ್ ಪವರ್, 151 km ಪ್ರಮಾಣೀಕೃತ ಶ್ರೇಣಿ ಮತ್ತು 90 km/hr ಗರಿಷ್ಠ ವೇಗವನ್ನು ಹೊಂದಿದೆ. S1 ಏರ್ ವಿತರಣೆಗಳು ಇತ್ತೀಚೆಗೆ 100 ಕ್ಕೂ ಹೆಚ್ಚು ನಗರಗಳಲ್ಲಿ ಪ್ರಾರಂಭವಾಗಿವೆ.

ola-electric-scooters-august-sales

S1X: Ola Electric ತನ್ನ ICE-ಕಿಲ್ಲರ್ ಸ್ಕೂಟರ್ S1X ಅನ್ನು S1 X+, S1 X (2kWh), ಮತ್ತು S1 X (3kWh) ಮೂರು ರೂಪಾಂತರಗಳಲ್ಲಿ ಬಳಕೆದಾರರ ಅಗತ್ಯಗಳಿಗೆ ಸರಿಹೊಂದುವಂತೆ ಪರಿಚಯಿಸಿದೆ. S1 X+ (3kWh) ಮತ್ತು S1 X (3kWh) ಎರಡೂ ಶಕ್ತಿಶಾಲಿ 6kW ಮೋಟಾರ್, 3kWh ಬ್ಯಾಟರಿ, 151 ಕಿ.ಮೀ ವ್ಯಾಪ್ತಿ ಮತ್ತು 90 km/h ಗರಿಷ್ಠ ವೇಗದೊಂದಿಗೆ ಬರುತ್ತವೆ.

ಇನ್ನು ಸಾಮಾನ್ಯ S1 X (2kWh) ಶಕ್ತಿಯುತ 6kW ಮೋಟಾರ್‌ನೊಂದಿಗೆ ಬರುತ್ತದೆ. ಜೊತೆಗೆ 91 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಗರಿಷ್ಠ ವೇಗ 85 km/h ಹೊಂದಿದೆ. ಇನ್ನು S1 X+ 1,09,999 ರೂ.ಗಳಲ್ಲಿ ಖರೀದಿಗೆ ಲಭ್ಯವಿದೆ. ಮುಂದಿನ ತಿಂಗಳು ವಿತರಣೆಗಳು ಪ್ರಾರಂಭವಾಗುತ್ತವೆ. S1 X (3kWh) ಮತ್ತು S1 X (2kWh) ಪ್ರೀ ಬುಕಿಂಗ್ ಸದ್ಯಕ್ಕೆ 999 ರೂ.ಇದೆ. ವಿತರಣೆಗಳು ಡಿಸೆಂಬರ್‌ನಲ್ಲಿ ಪ್ರಾರಂಭವಾಗುತ್ತವೆ.

ola-electric-scooters-august-sales

S1 X (3kWh), ಮತ್ತು S1 X (2kWh) ಸ್ಕೂಟರ್‌ಗಳ ಬೆಲೆ ಆಕರ್ಷಕ ರೂ. 99,999 ಮತ್ತು ರೂ. 89,999 ಇದೆ. ಓಲಾ ಚೀಫ್ ಬಿಜಿನೆಸ್ ಆಫೀಸರ್ ಅಂಕುಶ್ ಅಗರ್ವಾಲ್ ಮಾತನಾಡಿ, "ಆಗಸ್ಟ್‌ನಲ್ಲಿ ನಮ್ಮ ಪೋರ್ಟ್‌ಫೋಲಿಯೋದ ಎಲ್ಲಾ ಪ್ರಸಿದ್ಧ ಪ್ರೈಸ್ ಪಾಯಿಂಟ್‌ಗಳಲ್ಲಿಯೂ ಐದು ಸ್ಕೂಟರ್‌ಗಳಿಗೆ ವಿಸ್ತರಿಸಿದೆ. ಹೆಚ್ಚಿನ ಪ್ರಮಾಣದ ಬೇಡಿಕೆಯಿಂದಾಗಿ EV ಉದ್ಯಮ ಒಂದು ಇನ್‌ಫ್ಲೆಕ್ಷನ್ ಪಾಯಿಂಟ್ ಅನ್ನು ನಾವು ನಿರೀಕ್ಷಿಸುತ್ತೇವೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Thursday, August 31, 2023, 17:47 [IST]
English summary
Ola electric scooters august sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+