Ola Scooters: ಓಲಾದಿಂದ ಭರ್ಜರಿ ಸಿಹಿಸುದ್ದಿ.. ಮತ್ತಷ್ಟು ಕಲರ್ ಫುಲ್!

ಬೆಂಗಳೂರು ಮೂಲದ ಓಲಾ (Ola) ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ದೇಶಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿವೆ. ಇದೇ ಕಾರಣಕ್ಕೆ ಕಂಪನಿಯು ಮಾರಾಟದಲ್ಲಿ ಹಲವು ತಿಂಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿದ್ದು, ಇದೀಗ, ಮತ್ತಷ್ಟು ಯುವ ಜನರನ್ನು ತನ್ನತ್ತ ಆಕರ್ಷಿಸಲು ಸ್ಕೂಟರ್‌ಗಳಲ್ಲಿ ಹೊಸ ಬಣ್ಣದ ಆಯ್ಕೆಯನ್ನು ನೀಡಲು ತೀರ್ಮಾನಿಸಿದೆ.

ಓಲಾ ಕಂಪನಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಎರಡು ಹೊಸ ಬಣ್ಣದ ಆಯ್ಕೆಯನ್ನು ಜುಲೈ ತಿಂಗಳಲ್ಲಿ ಪರಿಚಯಿಸಲಾಗುವುದು ಎಂದು ಘೋಷಿಸಿದೆ. ಈ ಸಂಬಂಧ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಆದರೆ, ಬಣ್ಣಗಳ ಹೆಸರನ್ನು ರಿವೀಲ್ ಮಾಡಿಲ್ಲ. ಆದರೂ ನಿಯಾನ್ ಗ್ರೀನ್ ಮತ್ತು ಬ್ಲೂ ಕಲರ್ ಸ್ಕೀಮ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.

Ola Scooters: ಓಲಾದಿಂದ ಭರ್ಜರಿ ಸಿಹಿಸುದ್ದಿ.. ಮತ್ತಷ್ಟು ಕಲರ್ ಫುಲ್!

ಓಲಾ, ಮುಂದಿನ ತಿಂಗಳು ನಡೆಯುವ ಕಾರ್ಯಕ್ರಮದಲ್ಲಿ ಈ ಹೊಸ ಬಣ್ಣದ ಆಯ್ಕೆ ಪಡೆದಿರುವ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ. ಆದರೆ, ಸಮಾರಂಭದ ನಿಖರವಾದ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಓಲಾ ಎಸ್1 ಏರ್ ಒಟ್ಟು 4, ಎಸ್1 ಸ್ಕೂಟರ್ 11 ಹಾಗೂ ಎಸ್1 ಪ್ರೊ 12 ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

ಈಗಾಗಲೇ ಓಲಾ ಜುಲೈ ತಿಂಗಳಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಇದಕ್ಕೆ ಕಾರಣ ಉಂಟು. ಅಂದು ಕಂಪನಿ ಹೊಚ್ಚ ಹೊಸ ದ್ವಿಚಕ್ರ ವಾಹನವನ್ನು ಅನಾವರಣ ಮಾಡಲಿದೆ. ಬಹುತೇಕರು, ಇದೊಂದು ಎಲೆಕ್ಟ್ರಿಕ್ ಸ್ಕೂಟರ್ ಆಗಿರಲಿದೆ ಎನ್ನುತ್ತಿದ್ದಾರೆ. ಮತ್ತಷ್ಟು ಮಂದಿ, ಓಲಾದ ಮೊದಲ ಎಲೆಕ್ಟ್ರಿಕ್ ಬೈಕ್ ಪ್ರದರ್ಶನಗೊಳ್ಳಬಹುದು ಎಂದು ನಿರಿಕ್ಷಿಸುತ್ತಿದ್ದಾರೆ.

ಓಲಾದ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ ಎಂದು ಗುರುತಿಸಿಕೊಂಡಿರುವ ಎಸ್1 ಏರ್ ವಿತರಣೆಗಳು ಜುಲೈ ತಿಂಗಳಿಂದ ಆರಂಭವಾಗಲಿದೆ. ಇದರಲ್ಲಿ 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, 4.5kW (6 bhp) ಪವರ್ ಉತ್ಪಾದಿಸುತ್ತದೆ. ಈ ಸ್ಕೂಟರ್, ಫುಲ್ ಚಾರ್ಜಿನಲ್ಲಿ 125 km ರೇಂಜ್ ನೀಡಲಿದ್ದು, 85 kmph ಟಾಪ್ ಸ್ವೀಡ್ ಹೊಂದಿದೆ.

ಮಿಡ್ ಲೆವೆಲ್ ಆವೃತ್ತಿ ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಎಸ್1 ಏರ್ ನಂತೆಯೇ 3kWh ಬ್ಯಾಟರಿ ಪ್ಯಾಕ್ ಹೊಂದಿದೆ. ಆದರೆ, 8.4kW (11.3 bhp) ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸಂಪೂರ್ಣ ಚಾರ್ಜಿನಲ್ಲಿ 141 km ರೇಂಜ್ ನೀಡುತ್ತದೆ. ಇದು, 3.8 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು, 95 kmph ಟಾಪ್ ಸ್ವೀಡ್ ಹೊಂದಿದೆ.

ಟಾಪ್ ಎಂಡ್ ಮಾದರಿ ಓಲಾ ಎಸ್1 ಪ್ರೊ ದೊಡ್ಡದಾದ 4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, 8.5kW (11.3bhp) ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಕೇವಲ 2.9 ಸೆಕೆಂಡುಗಳಲ್ಲಿ 0-40 kmph ಹಾಗೂ 4.5 ಸೆಕೆಂಡುಗಳಲ್ಲಿ 0-60 kmph ವೇಗವನ್ನು ಪಡೆಯಲಿದ್ದು, 181 km ರೇಂಜ್ ನೀಡುತ್ತದೆ.

ಕೇಂದ್ರ ಸರ್ಕಾರ FAME II ಸಬ್ಸಿಡಿಯನ್ನು ಪರಿಷ್ಕರಿಸಿದ್ದು, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಹೆಚ್ಚಳವಾಗಿದೆ. ಇದರಿಂದಾಗಿ ಎಸ್1 ಏರ್ ರೂ.1.10 ಲಕ್ಷ, ಎಸ್1 ರೂ.1.30 ಲಕ್ಷ ಹಾಗೂ ಎಸ್1 ಪ್ರೊ ರೂ.1.40 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇನ್ನು, ಕಳೆದ ಮೇ ತಿಂಗಳು 30 ಸಾವಿರಕ್ಕೂ ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿ, ಕಂಪನಿ ಮೊದಲ ಸ್ಥಾನದಲ್ಲಿದ್ದು, ಸೇಲ್ಸ್ ಅನ್ನು ಮತ್ತಷ್ಟು ವೃದಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

More from DriveSpark

Article Published On: Wednesday, June 21, 2023, 15:23 [IST]
English summary
Ola electric scooters get new colour schemes details
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+