ಯಾವುದೇ ಇವಿ ಕಂಪನಿಗೆ ಸಾಧ್ಯವಾಗದ ದಾಖಲೆ ನಿರ್ಮಿಸಿದ ಓಲಾ... 2ನೇ ಸ್ಥಾನ ಟಿವಿಸ್, 3 ರಲ್ಲಿ ಎಥರ್!
ಓಲಾ ಎಲೆಕ್ಟ್ರಿಕ್ ಇದೀಗ ಮತ್ತೊಂದು ಮಾರಾಟದ ಮೈಲಿಗಲ್ಲು ದಾಖಲಿಸಿದೆ. ಜನವರಿ 1, 2023 ರಿಂದ ಡಿಸೆಂಬರ್ 21, 2023 ರವರೆಗೆ 2,52,647 ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟದೊಂದಿಗೆ ಈ ವರ್ಷ 2.5 ಲಕ್ಷ-ಯೂನಿಟ್ ಮೈಲಿಗಲ್ಲನ್ನು ಮೀರಿದ ಭಾರತದ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಾಹನ್ ಮಾಹಿತಿಯ ಪ್ರಕಾರ (ಡಿಸೆಂಬರ್ 21 ರಂತೆ) ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟವು, Ola 2023 ರಲ್ಲಿ ವರ್ಷದಿಂದ ವರ್ಷಕ್ಕೆ ಶೇ 131 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2022 ರಲ್ಲಿ ಈ ಮಾರಾಟವು 1,09,395 ಯುನಿಟ್‌ಗಳಷ್ಟಿತ್ತು. ಈ ಮಾರಾಟವು ತಿಂಗಳಿಗೆ ಸುಮಾರು 20,000 ಯೂನಿಟ್‌ಗಳೊಂದಿಗೆ, ವರ್ಷವಿಡೀ ಕಂಪನಿಗೆ ಎಷ್ಟು ಪ್ರಬಲ ಬೇಡಿಕೆಯಿದೆ ಎಂಬುದನ್ನು ತೋರಿಸಿದೆ.

Ola ಜನವರಿಯಲ್ಲಿ 18,353 ಯೂನಿಟ್ ಮಾರಾಟದೊಂದಿಗೆ 2023 ಅನ್ನು ಆರಂಭಿಸಿತು, ಮಾರ್ಚ್‌ನಲ್ಲಿ ಮೊದಲ ಬಾರಿಗೆ 20,000-ಯೂನಿಟ್ ಮಾರ್ಕ್ ಅನ್ನು ದಾಟಿತು (21,434 ಯುನಿಟ್‌ಗಳು). ಹಬ್ಬದ ತಿಂಗಳು ನವೆಂಬರ್‌ನಲ್ಲಿ ಈ ಮಾರಾಟವು ಉತ್ತುಂಗಕ್ಕೇರಿ ಬರೋಬ್ಬರಿ 29,898 ಯೂನಿಟ್‌ಗಳನ್ನು ಮಾರಾಟ ಮಾಡಿ ವರ್ಷದ ಅತ್ಯುತ್ತಮ ಮಾರಾಟವನ್ನು ದಾಖಲಿಸಿತು.
ಸಂಪೂರ್ಣ 12-ತಿಂಗಳ ಅವಧಿಗೆ, ಓಲಾ ಮಾರುಕಟ್ಟೆ ಪಾಲು ಶೇ30.50 ರಷ್ಟಿದೆ. ಇನ್ನೆರಡು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಟಿವಿಎಸ್ ಹಾಗೂ ಎಥರ್ ಈ ವರ್ಷ ಆರು ಅಂಕಿಗಳ ಮಾರಾಟವನ್ನು ದಾಟಿದ್ದಾರೆ. ಆದರೂ ಓಲಾ ಅವುಗಳಿಗಿಂತ ಹೆಚ್ಚಿನ ಮುನ್ನಡೆ ಸಾಧಿಸಿದೆ. ಟಿವಿಎಸ್ ಮೋಟಾರ್ 1,62,399 ಯುನಿಟ್‌ಗಳೊಂದಿಗೆ ಶೇ19.60 ರಷ್ಟು ಪಾಲನ್ನು ಹೊಂದಿದ್ದರೆ, ಎಥರ್ ಎನರ್ಜಿ 1,01,940 ಯುನಿಟ್‌ಗಳೊಂದಿಗೆ ಶೇ12.30 ರಷ್ಟು ಪಾಲನ್ನು ಹೊಂದಿದೆ.

Ola ಇತ್ತೀಚೆಗೆ ತನ್ನ S1 ಪೋರ್ಟ್‌ಫೋಲಿಯೊವನ್ನು ಐದು ಸ್ಕೂಟರ್‌ಗಳಿಗೆ ವಿಸ್ತರಿಸಿದೆ. 1.47 ಲಕ್ಷ ಬೆಲೆಯ S1 Pro ಕಂಪನಿಯ ಪ್ರಮುಖ ಸ್ಕೂಟರ್ ಆಗಿದ್ದರೆ, S1 X (2kWh) ರೂ. 90,000 ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿದೆ. ಇನ್ನು Ola 2023 ರ ಅಕ್ಟೋಬರ್ ಅಂತ್ಯದ ವೇಳೆಗೆ, ಭಾರತದಾದ್ಯಂತ 935 ಅನುಭವ ಕೇಂದ್ರಗಳು ಮತ್ತು 392 ಸೇವಾ ಕೇಂದ್ರಗಳನ್ನು ಹೊಂದಿದೆ.
ಹೊಸ ಓಲಾ S1 X+ ಸ್ಕೂಟರ್ ವಿಶೇಷತೆಗಳು: ಉನ್ನತ Gen 2 ಪ್ಲಾಟ್‌ಫಾರ್ಮ್‌ನಲ್ಲಿ ಹೊಸ S1 X+ ಸ್ಕೂಟರ್ ಅನ್ನು ನಿರ್ಮಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅತ್ಯುತ್ತಮ ಕಾರ್ಯಕ್ಷಮತೆ, ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳು ಮತ್ತು ಅತ್ಯುತ್ತಮ ಸವಾರಿ ಗುಣಮಟ್ಟವನ್ನು ನೀಡುತ್ತದೆ. ಜೊತೆಗೆ S1 X+ ಸ್ಕೂಟರ್ 3kWh ಬ್ಯಾಟರಿಯೊಂದಿಗೆ ಬರೋಬ್ಬರಿ 151 ಕಿ.ಮೀ ಪ್ರಮಾಣೀಕೃತ ರೇಂಜ್ ನೀಡುತ್ತದೆ ಎಂದು ಓಲಾ ತಿಳಿಸಿದೆ.

ಇನ್ನು ಇದರ ಮೋಟಾರ್ ವಿಷಯಕ್ಕೆ ಬಂದರೆ 6kW ಮೋಟಾರ್‌ನೊಂದಿಗೆ, S1 X+ ಕೇವಲ 3.3 ಸೆಕೆಂಡುಗಳಲ್ಲಿ 0-40 kmph ವೇಗವನ್ನು ತಲುಪಬಲ್ಲದು ಮತ್ತು 90 kmph ಗರಿಷ್ಟ ವೇಗವನ್ನು ಹೊಂದಿದೆ. ಜೊತೆಗೆ ಕಡಿಮೆ ಬೆಲೆಗೆ ವಿಸ್ತೃತ ಫೀಚರ್‌ಗಳನ್ನು ನೀಡುತ್ತಿರುವ ಕಾರಣ ಬೇಡಿಕೆ ಕೂಡ ಹೆಚ್ಚಾಗಿದ್ದು, ಗ್ರಾಹಕರನ್ನು ಹೆಚ್ಚಾಗಿ ಕಾಯಿಸದೆ ಶೀಘ್ರವಾಗಿ ಡೆಲಿವರಿ ನೀಡಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








