Ola Ev Bike: ಕಾದಿದ್ದು ಸಾಕು, ಕೊನೆಗೂ ಆಗಸ್ಟ್ 15ಕ್ಕೆ ಓಲಾ ಇವಿ ಬೈಕ್ ಅನಾವರಣ? 300 km ರೇಂಜ್!
ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಓಲಾದವರು ಆಗಸ್ಟ್ 15 ರಂದು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಎಲೆಕ್ಟ್ರಿಕ್ ಉತ್ಪನ್ನವನ್ನು ಬಿಡಲು ಸಿದ್ಧವಾಗಿದ್ದಾರೆ. ಈ ಸುದ್ದಿಯನ್ನು ಖಚಿತಪಡಿಸುತ್ತಾ, ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ಗುರುವಾರ ಟ್ವಿಟರ್‌ನಲ್ಲಿ ಸಣ್ಣ ಟೀಸರ್ ಜೊತೆಗೆ ಮುಂಬರುವ ಎಲೆಕ್ಟ್ರಿಕ್ ಬೈಕ್ ಫೋಟೋ ಹಂಚಿಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, MoveOS 4 ಅನ್ನು ಆಗಸ್ಟ್ 15 ರಂದು ಅನಾವರಣಗೊಳಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ವರ್ಷಾಂತ್ಯದ ಮೊದಲು ನವೀಕರಣವನ್ನು ಅಧಿಕೃತವಾಗಿ ಗ್ರಾಹಕರಿಗೆ ಹೊರತರಲಾಗುವುದು ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಹೊಸ ಬೈಕ್ ಫೋಟೋವನ್ನು ಹಂಚಿಕೊಂಡಿದ್ದು, ಇದು ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಸಿಲೂಯೆಟ್‌ನಂತೆ ತೋರುತ್ತಿದೆ.

ಇದು ದೊಡ್ಡ ಟ್ಯಾಂಕ್ ಮತ್ತು ಹಿಂಭಾಗದಲ್ಲಿ ತೀಕ್ಷ್ಣವಾದ ಡಿಸೈನ್ ಸಾಕಷ್ಟು ಸ್ಪೋರ್ಟಿಯಾಗಿ ಕಾಣುತ್ತದೆ. ವಿನ್ಯಾಸವು KTM RC ಸರಣಿಯ ಮೋಟಾರ್‌ಸೈಕಲ್‌ಗಳಂತೆಯೇ ಕಾಣುತ್ತದೆ. ಇದು ಪೂರ್ವ ನಿರ್ಮಾಣ ಅಥವಾ ಪರಿಕಲ್ಪನೆಯ ಹಂತದಲ್ಲಿದೆ ಎಂದು ನಿರೀಕ್ಷಿಸಲಾಗಿದೆ. ಓಲಾ ಎಲೆಕ್ಟ್ರಿಕ್ ತಮ್ಮ ಮೋಟಾರ್‌ಸೈಕಲ್ ಅನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಮೋಟಾರ್‌ಸೈಕಲ್‌ಗಳ ವಿನ್ಯಾಸವನ್ನು ಅಧ್ಯಯನ ಮಾಡುತ್ತಿದೆ.
ಓಲಾ ಮುಂಬರುವ ಎಲೆಕ್ಟ್ರಿಕ್ ಬೈಕ್ ರೇಂಜ್: ವದಂತಿಗಳನ್ನು ನಂಬುವುದಾದರೆ, ಮುಂಬರುವ ಎಲೆಕ್ಟ್ರಿಕ್ ಬೈಕ್ 300 ರಿಂದ 350 ಕಿ.ಮೀ ನಡುವೆ ಯೋಗ್ಯ ರೇಂಜ್ ನೀಡುವ ಸಾಧ್ಯತೆಯಿದೆ. ಹಾಗೆಯೇ ಉತ್ತಮ ಪರ್ಫಾಮೆನ್ಸ್ ಕೂಡ ನೀಡುತ್ತದೆ. ಸ್ಥಳೀಯವಾಗಿ ಪ್ರತಿದಿನ ಪ್ರಯಾಣಿಸುವವರಿಗೆ ಇ-ಬೈಕ್ ಉತ್ತಮ ಆಯ್ಕೆಯಾಗಿದೆ ಎಂದು ಕೆಲವು ವರದಿಗಳು ಹೇಳುತ್ತಿವೆ.

ಕಂಪನಿಯು ಮುಂಬರುವ ಎಲೆಕ್ಟ್ರಿಕ್ ಬೈಕ್ ಅನ್ನು ರೂ. 2.50 ಲಕ್ಷಕ್ಕಿಂತ ಹೆಚ್ಚಿನ ಆರಂಭಿಕ ಬೆಲೆಯಲ್ಲಿ ಪರಿಚಯಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಓಲಾ ಇನ್ನೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಂಬಂಧಿತ ವಿವರಗಳನ್ನು ಹಂಚಿಕೊಂಡಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಇದು ಬೆಲೆ ವಿವರಗಳನ್ನು ಬಿಡುಗಡೆ ಮಾಡಬಹುದು.
MoveOS 4 ಅಪ್‌ಡೇಟ್: MoveOS 4 Ola S1 ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೊಸ ವೈಶಿಷ್ಟ್ಯಗಳನ್ನು ತರುತ್ತದೆ. MoveOS 4 ನೊಂದಿಗೆ ಪರಿಚಯಿಸಬಹುದಾದ ಒಂದು ವೈಶಿಷ್ಟ್ಯವೆಂದರೆ ಕನ್ಸರ್ಟ್ ಮೋಡ್, ಇದು ಪಾರ್ಟಿ ಮೋಡ್‌ನ ವಿಸ್ತರಣೆಯಾಗಿದೆ ಎಂದು ಹೇಲಲಾಗುತ್ತಿ. ಪಾರ್ಟಿ ಮೋಡ್‌ನಲ್ಲಿ, ಎಲೆಕ್ಟ್ರಿಕ್ ಸ್ಕೂಟರ್‌ನ ಲೈಟ್‌ಗಳು ಹಾಡಿಗೆ ತಕ್ಕಂತೆ ಬೆಳಗುತ್ತವೆ. ಕನ್ಸರ್ಟ್ ಮೋಡ್‌ನಲ್ಲಿ, ಲೈಟ್‌ಗಳು ಮತ್ತು ಸಂಗೀತವನ್ನು ಬಹು ಸ್ಕೂಟರ್‌ಗಳ ನಡುವೆ ಸಮನ್ವಯಗೊಳಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇದರ ಹೊರತಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚಿನ ಮೂಡ್‌ಗಳನ್ನು ಸೇರಿಸಬಹುದು. ಮೂಡ್ ಎಂದರೆ ಓಲಾ ತನ್ನ ಸ್ಕೂಟರ್‌ನಲ್ಲಿ ಡಿಜಿಟಲ್ ಡಿಸ್‌ಪ್ಲೇಗಾಗಿ ನೀಡಲಾದ ವಿಭಿನ್ನ ಹೋಮ್ ಸ್ಕ್ರೀನ್‌ಗಳಾಗಿವೆ. ಸವಾರ ಆಯ್ಕೆ ಮಾಡಿದ ಮೋಡ್ ಅನ್ನು ಆಧರಿಸಿ ಸ್ಕೂಟರ್ ಎಕ್ಸಾಸ್ಟ್ ನೋಟ್‌ನಂತೆ ಸೌಂಡ್ ಬದಲಾಯಿಸುತ್ತದೆ. ಸದ್ಯಕ್ಕೆ, ಲೈಟ್, ಆಟೋ ಮತ್ತು ಡಾರ್ಕ್ ಆಯ್ಕೆಗಳೊಂದಿಗೆ ಮೂರು ಮೂಡ್ ಆಯ್ಕೆಗಳಿವೆ.
ಕೆಲವು ತಿಂಗಳ ಹಿಂದೆ ಸಿಇಒ ಭವಿಶ್ ಅಗರ್ವಾಲ್ ಕಂಪನಿಯು ಮ್ಯಾಪ್‌ಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು. ಅವುಗಳನ್ನು ಓಲಾ ಮ್ಯಾಪ್ಸ್ ಎಂದು ಕರೆಯಲಾಗುತ್ತದೆ. ಭವಿಷ್ಯದಲ್ಲಿ ನ್ಯಾವಿಗೇಷನ್‌ಗಾಗಿ ಅವುಗಳನ್ನು ಬಳಸುವುದು ಇದರ ಉದ್ದೇಶವಾಗಿದೆ. ಹೊಸ ಮ್ಯಾಪ್ ಸಹಾಯದಿಂದ, ಇದು ಮೂಲತಃ ಸವಾರನಿಗೆ ಸಾಕಷ್ಟು ಚಾರ್ಜ್‌ನೊಂದಿಗೆ ಗಮ್ಯಸ್ಥಾನವನ್ನು ತಲುಪಲು ಅಥವಾ ಎಲ್ಲಿ ಚಾರ್ಜ್ ಮಾಡಬೇಕೆಂದು ತೋರಿಸುವ ಮೂಲಕ ರೈಡ್‌ಗೆ ಅನುವು ಮಾಡಿಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








