ಹೇಗಿರಲಿದೆ ಓಲಾ ಕಂಪನಿಯ ಹೊಸ ವೈವಿಧ್ಯಮಯ ಸ್ಕೂಟರ್? ಬಿಡುಗಡೆ ಯಾವಾಗ?: ಓಲಾ ಸ್ಥಾಪಕನ ಟ್ವೀಟ್‌ ವೈರಲ್‌

ಭಾರತೀಯ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿ ಯಶಸ್ವಿಯಾಗಿ ಈ ಸೆಗ್ಮೆಂಟನ್ನು ಆಳುತ್ತಿರುವ ಓಲಾ (Ola) ಎಲೆಕ್ಟ್ರಿಕ್‌ ಈಗ ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ತಂದಿದೆ. ಓಲಾ ತನ್ನ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಲು ತೀರ್ಮಾನಿಸಿದ್ದು ಭಾರತೀಯ ಮಾರುಕಟ್ಟೆಗೆ ಅತಿ ಶೀಘ್ರದಲ್ಲಿ ಹೊಸ ಸ್ಕೂಟರನ್ನು ಲಾಂಚ್‌ ಮಾಡಲಿದೆ.

ಓಲಾ ಎಲೆಕ್ಟ್ರಿಕ್‌ ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಭವಿಷ್‌ ಅಗರ್ವಾಲ್‌ ತನ್ನ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಈ ಕುರಿತಾಗಿ ಟ್ವೀಟ್‌ ಮಾಡಿದ್ದಾರೆ. ಇದರಿಂದ ಓಲಾ ಪ್ರೇಮಿಗಳಲ್ಲಿ ಕುತೂಹಲ ಗರಿಗೆದರಿದ್ದು, ಮುಂದಿನ ಸ್ಕೂಟರ್‌ ಯಾವುದಾಗಿರಬಹುದೆಂದು ತಿಳಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

Ola Founder And CEO Teases New Ola Scooter

ಭವಿಷ್‌ ಅಗರ್ವಾಲ್‌ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಮಾಡಿರುವ ಟ್ವೀಟ್‌ನಲ್ಲಿ ಜುಲೈ ತಿಂಗಳ ಇವೆಂಟ್‌ನಲ್ಲಿ ನಮ್ಮ ಹೊಸ ಪ್ರಾಡಕ್ಟ್‌ನ ಘೋಷಣೆಯನ್ನು ನಾವು ಮಾಡಲಿದ್ದೇವೆ. ಈ ಇವೆಂಟ್‌ ಅನ್ನು ನಾವು ಹ್ಯಾಷ್‌ಟ್ಯಾಗ್ ಎಂಡ್‌ ಐಸಿಇ ಏಜ್‌ ಶೋ, ಭಾಗ ಒಂದು ಎಂದು ಕರೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಅದೇ ಟ್ವೀಟ್‌ನಲ್ಲಿ ಐಸಿಇ ಏಜ್‌ ಅನ್ನು ಎಸ್‌ ವನ್‌ ಪ್ರೋ, ಎಸ್‌ ವನ್‌ ಏರ್‌ ಮತ್ತ ‍xxxxx ನೊಂದಿಗೆ ಮುಗಿಯಲಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಜೊತೆ ಅವರು ಒಂದು ಫೋಟೋವನ್ನು ಸಹ ಹಾಕಿದ್ದು, ಇದರಲ್ಲಿ ನಾವು ಅಸ್ಪಷ್ಟವಾದ ಸ್ಕೂಟರ್‌ನ ಹೆಡ್‌ಲೈಟನ್ನು ಕಾಣಬಹುದಾಗಿದೆ.

ಇನ್ನು ಭವಿಷ್‌ ಆಗರ್ವಾಲ್‌ ಅವರು ಮಾತನಾಡುತ್ತಿರುವ ಈ ಸ್ಕೂಟರ್‌ ಬಗ್ಗೆ ಕೊಂಚ ಸುದ್ದಿಗಳು ಲೀಕ್‌ ಆಗಿದ್ದು, ವರದಿಗಳ ಪ್ರಕಾರ ಓಲಾದ ಇತರ ಸ್ಕೂಟರ್‌ಗಳಲ್ಲಿ ಇರುವ ರೀತಿಯ ಹೆಡ್‌ ಲ್ಯಾಂಪ್‌ಗಳನ್ನು ಇದರಲ್ಲಿ ನೋಡಬಹುದಾಗಿದೆ. ಇನ್ನು ಈ ಸ್ಕೂಟರ್‌ನಲ್ಲಿ ವಿಂಡ್‌ ಶೀಲ್ಡ್‌ ಇರಲಿದ್ದು ಇದು ಟೂರರ್‌ ಆಗಿರಲೂಬಹುದು ಎಂಬ ವದಂತಿಗಳು ಇವೆ.

ಇನ್ನು ಇದರ ಜೊತೆಗೆ ಓಲಾ ಈಗಿರುವ ಎಸ್‌ ವನ್‌ ಏರ್‌ ಸ್ಕೂಟರ್‌ಗೆ ಹೊಸ ಸೆಟ್‌ ಆಸೆಸರಿಗಳನ್ನು ಸಹ ಬಿಡುಗಡೆ ಮಾಡುವ ಲಕ್ಷಣ ಇದೆ ಎಂದು ವರದಿಗಳು ತಿಳಿಸಿವೆ. ಹೀಗೇನಾದರೂ ಹೊಸ ಪ್ರಾಡಕ್ಟ್‌ಗಳು ಬಿಡುಗಡೆಯಾದರೆ ಅದು ಓಲಾ ಮಾಲೀಕರಿಗೆ ಹಬ್ಬವಾಗಲಿದೆ ಎಂಬುದರಲ್ಲಿ ಸಂಶಯವಿಲ್ಲ.

ಓಲಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಸ್ಕೂಟರ್‌ ಬಿಡುಗಡೆಗೊಳಿಸಿದ ಸಮಯದಿಂದಲೂ ಜನರಿಂದ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಓಲಾ ಸಂಸ್ಥೆಯು ಭಾರತದಲ್ಲಿ ಇತರ ಎಲ್ಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗಿಂತಲೂ ಶರ ವೇಗದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬೆಳೆಯುತ್ತಿದೆ. ಇನ್ನು ಹೊಸ ಸ್ಕೂಟರ್‌ನ ಘೋಷಣೆ ಮುಂದಿನ ತಿಂಗಳು ನಡೆಯಲಿದ್ದು, ಗ್ರಾಹಕರು ಕಾಯುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, June 20, 2023, 13:33 [IST]
English summary
Ola founder and ceo teases new ola scooter in twitter
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+