Ola: ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆ: 4 ಇವಿ ಬೈಕ್‌ಗಳು ಅನಾವರಣ, ಕ್ರಾಂತಿ ಸೃಷ್ಟಿ!
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ತಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಭಾರತದ 77 ನೇ ಸ್ವಾತಂತ್ರ್ಯ ದಿನದಂದು, ಓಲಾ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಓಲಾ S1X (Ola S1x) ಮತ್ತು ಓಲಾ S1X+ (Ola S1x+) ಎಂಬ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ.
ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಗಳ ಬಗ್ಗೆ ಹೇಳುವುದಾದರೆ, ಹೊಸ ಓಲಾ S1X ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.79,999 ಆದರೆ, ಓಲಾ S1X+ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.99,999 ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ ಮತ್ತು ಪರಿಚಯಾತ್ಮಕವಾಗಿವೆ. ಓಲಾ S1X ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

ಆಗಸ್ಟ್ 21 ರವರೆಗೆ ಓಲಾ S1X ಎ 3 kWh ಪ್ಯಾಕ್ ಹೊಂದಿರುವ ಮಾದರಿಯ ಬೆಲೆಯುರೂ.89,999 ಆಗಿರುತ್ತದೆ, ನಂತರ ಇದರ ಬೆಲೆಯು ರೂ.99,999ಕ್ಕೆ ಏರಿಕೆಯಾಗಲಿದೆ. ಇನ್ನು ಆಗಸ್ಟ್ 21 ರವರೆಗೆ 2 ಓಲಾ S1X 2 kWh ಬ್ಯಾಟರಿ ಪ್ಯಾಕ್ ಆವೃತ್ತಿಯ ಬೆಲೆಯು ರೂ.79,999 ಆಗಿದ್ದು, ನಂತರದ ಬೆಲೆಯು ರೂ.89,999ಕ್ಕೆ ಏರಿಕೆಯಾಗಲಿದೆ. ಬಿಡುಗಡೆಯಾದ ಈ ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಯು ಡಿಸೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ.
S1X+ ಕೇವಲ 3kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಬೆಲೆಯು ರೂ.99,999 ಆಗಿದ್ದು, ಇದು ಪರಿಚಯಾತ್ಮಕ ಬೆಲೆಯಾಗಿದೆ. ಆಗಸ್ಟ್ 21ರ ನಂತರ, ಬೆಲೆಯು ರೂ.1,09,999 ಆಗಿದೆ. ಇದು ಎಕ್ಸ್ ಶೋರೂಂ ಪ್ರಕಾರವಾಗಿ ಹೆಚ್ಚಿಸಲಾಗಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಇದರ ಬೆಲೆಯು ಪ್ರಾರಂಭವಾಗುತ್ತವೆ. ಹೊಸ ಓಲಾ S1X ಮತ್ತು S1X+ ಮಾದರಿಗಳಿಗೆ ಪವರ್‌ಟ್ರೇನ್ ಕಾನ್ಫಿಗರೇಶನ್ ಸ್ಥಿರವಾಗಿ ಉಳಿದಿದೆ, S1 ಏರ್‌ನಲ್ಲಿ ಕಂಡುಬರುವ ಅದೇ 4.5kW ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸುತ್ತದೆ.

ಇದು 3.3 ಸೆಕೆಂಡುಗಳಲ್ಲಿ 0-40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇದು 90 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು 2kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವ S1X ರೂಪಾಂತರವು 85 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಇದು ಸೆಕೆಂಡುಗಳಲ್ಲಿ 0 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಗಮನಾರ್ಹವಾಗಿ, 2kWh ಬ್ಯಾಟರಿಯೊಂದಿಗೆ S1X ಅಂದಾಜು 91 ಕಿ.ಮೀ ರೇಂಜ್ ನೀಡುತ್ತದೆ.
ಆದರೆ 3kWh ಬ್ಯಾಟರಿಯೊಂದಿಗೆ S1 X ಮತ್ತು S1 X+ ಕ್ರಮವಾಗಿ 91 ಕಿ.ಮೀ ರೇಂಜ್ ಮತ್ತು 151 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ವಿನ್ಯಾಸದ ಪ್ರಕಾರ, ಹೊಸ S1X ಸರಣಿಯು ಓಲಾ S1 ಏರ್ ಅನ್ನು ಹೋಲುತ್ತದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ TFT ಟಚ್‌ಸ್ಕ್ರೀನ್ ಯುನಿಟ್ ಬದಲಾಗಿ LCD ಡಿಸ್ ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಓಲಾ ಎಲೆಕ್ಟ್ರಿಕ್ ಒಂದಲ್ಲ ನಾಲ್ಕು ಹೊಸ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್‌ಗಳನ್ನು ಅನಾವರಣಗೊಳಿಸಿದೆ.

ಈ ಹೊಸ ಎಲೆಕ್ಟ್ರಿಕ್ ಬೈಕ್‌ಗಳು ಗ್ರಾಹಕರ ಆದ್ಯತೆಗಳು ಮತ್ತು ಅವಶ್ಯಕತೆಗಳ ಅನುಗುಣವಾಗಿರುತ್ತದೆ. ಈ ಓಲಾ ಎಲೆಕ್ಟ್ರಿಕ್ ಬೈಕ್‌ಗಳು ತಾಂತ್ರಿಕ ಅಂಶಗಳ ಕುರಿತ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಇದಲ್ಲದೆ, ಈ ಕಾನ್ಸೆಪ್ಟ್ ಮಾದರಿಗಳಿಗೆ ಹೋಲಿಸಿದರೆ ಈ ಬೈಕ್‌ಗಳ ಉತ್ಪಾದನಾ ಆವೃತ್ತಿಗಳು ಸ್ವಲ್ಪ ಭಿನ್ನವಾಗಿರುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಇದರಲ್ಲಿ, ಮೊದಲಿಗೆ ಓಲಾ ಕ್ರೂಸರ್ ಬೈಕ್ ಕಾನ್ಸೆಪ್ಟ್ ಮಾದರಿಯು, ಪ್ರಸ್ತುತ ಜಗತ್ತಿನಾದ್ಯಂತ ಮಾರಾಟದಲ್ಲಿರುವ ಯಾವುದೇ ಕ್ರೂಸರ್ ಬೈಕ್‌ನಂತೆ ಕಾಣುತ್ತಿಲ್ಲ.
ಕೆಲವು ಗಮನಾರ್ಹ ವಿನ್ಯಾಸದ ವಿವರಗಳು ಟೆಲಿಸ್ಕೋಪಿಕ್ ಮುಂಭಾಗದ ಸಸ್ಪೆಕ್ಷನ್ ಮತ್ತು ಉದ್ದವಾದ ಸ್ವಿಂಗರ್ಮ್‌ನಲ್ಲಿ ದಪ್ಪವಾದ ಸಸ್ಪೆಕ್ಷನ್ ಕವರ್ ಅನ್ನು ಒಳಗೊಂಡಿವೆ. ಓಲಾ ರೋಡ್‌ಸ್ಟರ್ ನೇಕೆಡ್ ಬೈಕ್ ಆಗಿದ್ದು, ಅದು ಬಹಳ ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ. ಇದು ಬಹಳಷ್ಟು ಸರಳವಾಗಿ ಕಾಣುವ ಮೋಟಾರ್‌ಸೈಕಲ್ ಆಗಿದೆ. ಈ ಎಲೆಕ್ಟ್ರಿಕ್ ಬೈಕ್ ಮುಂಭಾಗದಲ್ಲಿ ಹೆಚ್ಚು ಅತ್ಯಾಧುನಿಕ USD ಫೋರ್ಕ್‌ಗಳನ್ನು ಹೊಂದಿದೆ.

ಇನ್ನುಓಲಾ ಅಡ್ವೆಂಚರ್ ಮತ್ತೊಂದು ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಆಗಿದ್ದು ಅದು ಬಹಳಷ್ಟು ವಿಶಿಷ್ಠವಾದ ವಿನ್ಯಾಸ ಶೈಲಿಯನ್ನು ಹೊಂದಿದೆ. ಇದು ಹೆಚ್ಚುವರಿ ರೇಂಜ್ ನೀಡಲು ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ನಿರೀಕ್ಷಿಸಲಾಗಿದೆ. ಈ ಮಾದರಿಯು ಮುಂಭಾಗದಲ್ಲಿ USD ಫೋರ್ಕ್‌ಗಳನ್ನು ಸಹ ಹೊಂದಿದೆ. ಇನ್ನು ಓಲಾ ಡೈಮಂಡ್‌ಹೆಡ್ ಸೂಪರ್‌ಸ್ಪೋರ್ಟ್ ಬೈಕ್ ಆಗಿದೆ ಮತ್ತು ಇದು ಬಹಳಷ್ಟು ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ.
ಈ ಓಲಾ ಡೈಮಂಡ್‌ಹೆಡ್ ಕಾನ್ಸೆಪ್ಟ್ ಅತ್ಯಾಧುನಿಕ ಡ್ಯುಯೊಲೆವರ್ ಮುಂಭಾಗದ ಸಸ್ಪೆನ್ಶನ್ ಅನ್ನು ಹೊಂದಿದೆ. ಓಲಾ ಎಲೆಕ್ಟ್ರಿಕ್ ಬೈಕಿನ ಈ ಪುನರಾವರ್ತನೆಯು ಅತ್ಯಂತ ದುಬಾರಿಯಾಗಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಎಲ್ಲಾ ಎಲೆಕ್ಟ್ರಿಕ್ ಬೈಕ್‌ಗಳು ದೊಡ್ಡ ಟಚ್‌ಸ್ಕ್ರೀನ್ ಇಂಟರ್ಫೇಸ್ ಸಿಸ್ಟಮ್, ಡ್ಯುಯಲ್ ಫ್ರಂಟ್ ಡಿಸ್ಕ್‌ಗಳು, ಹಿಂಭಾಗದ ಡಿಸ್ಕ್ ಬ್ರೇಕ್, ಮೊನೊ ರಿಯರ್ ಸಸ್ಪೆನ್ಶನ್ ಮತ್ತು ಫ್ಯೂಚರಿಸ್ಟಿಕ್ ವಿನ್ಯಾಸ ಥೀಮ್ ಸೇರಿದಂತೆ ಕೆಲವು ಸಾಮಾನ್ಯ ವಿಷಯಗಳನ್ನು ಹೊಂದಿವೆ.


Click it and Unblock the Notifications








