ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಅಧಿಪತ್ಯ ಸಾಧಿಸಿದ ಓಲಾ
ಭಾರತದ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಿಕ ಕಂಪನಿಯಾದ ಓಲಾ ಎಲೆಕ್ಟ್ರಿಕ್, ಮೇ ತಿಂಗಳಲ್ಲಿ 35,000 ವಾಹನಗಳ ಮಾರಾಟದೊಂದಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಮಾರುಕಟ್ಟೆಯ ಅಗ್ರ ಸ್ಥಾನವನ್ನು ಮತ್ತೊಮ್ಮೆ ಭದ್ರಪಡಿಸಿಕೊಂಡಿದೆ. ಒಟ್ಟಾರೆ ಮೇ ತಿಂಗಳ ಮಾರಾಟದ ವಿವರವಾದ ಮಾರಾಟವನ್ನು ಇಲ್ಲಿ ನೋಡೋಣ.
ಮೇ ತಿಂಗಳಲ್ಲಿ ತನ್ನ ಅತ್ಯಧಿಕ ಮಾಸಿಕ ಮಾರಾಟದ ಮೂಲಕ Ola ಶೇ30 ಕ್ಕಿಂತ ಹೆಚ್ಚು ಪ್ರಭಾವಶಾಲಿ ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ. ವರ್ಷದಿಂದ ವರ್ಷದ ಮಾರಾಟದಲ್ಲಿ ಕಳೆದ ವರ್ಷ ಮೇನಿಂದ ಈ ಮೇವರೆಗೆ ಶೇ300 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇದರೊಂದಿಗೆ ಕಂಪನಿಯು ಕಳೆದ 3 ತ್ರೈಮಾಸಿಕಗಳಲ್ಲಿಯೂ ಸತತವಾಗಿ ಮಾರಾಟದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಓಲಾ ಎಲೆಕ್ಟ್ರಿಕ್‌ನ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಮಾತನಾಡಿ, "ಮಾಸಿಕದಲ್ಲಿ ನಮ್ಮ ಮಾರಾಟವು ಪ್ರಭಾವಶಾಲಿಯಾಗಿ ಬೆಳೆದಿದೆ. ಓಲಾ ಭಾರತದಲ್ಲಿ EV ಕ್ರಾಂತಿಯನ್ನು ನಿರಂತರವಾಗಿ ಮುನ್ನಡೆಸುತ್ತಿದೆ. ಈ ಗಮನಾರ್ಹ ಸಾಧನೆಯು ನಮ್ಮ ಬ್ರ್ಯಾಂಡ್‌ನಲ್ಲಿ ಗ್ರಾಹಕರ ಅಚಲ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ದೇಶದಲ್ಲಿ ತಾಂತ್ರಿಕವಾಗಿ ಮುಂದುವರಿದ EV ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸೂಚಿಸುತ್ತದೆ ಎಂದರು.
ಸರ್ಕಾರದ ಸಬ್ಸಿಡಿಗಳಲ್ಲಿ ಗಮನಾರ್ಹ ಕಡಿತದ ಹೊರತಾಗಿಯೂ, ಜೂನ್‌ನಿಂದ ನಮ್ಮ ಸ್ಕೂಟರ್ ಬೆಲೆಗಳನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿದ್ದೇವೆ. Ola S1 ಅನ್ನು ಭಾರತದಲ್ಲಿ ಅತ್ಯುತ್ತಮ EV ಪ್ರತಿಪಾದನೆ ಮಾಡಿದೆ. ಓಲಾ ಎಲೆಕ್ಟ್ರಿಕ್ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಉತ್ತೇಜಿಸಲು ಮತ್ತು ಜನರು ಪ್ರಯಾಣಿಸುವ ಮಾರ್ಗವನ್ನು ಮರುವ್ಯಾಖ್ಯಾನಿಸಲು ದೃಢನಿಶ್ಚಯವನ್ನು ಹೊಂದಿದೆ ಎಂದರು.

ಪರಿಷ್ಕೃತ ಸಬ್ಸಿಡಿಗಳು ಜೂನ್‌ನಿಂದ ಜಾರಿಗೆ ಬರುವುದರೊಂದಿಗೆ, Ola S1 Pro ಈಗ ರೂ. 1,39,999, S1 (3KWh) ರೂ.1,29,999 ಮತ್ತು S1 Air (3KWh) ರೂ.1,09,999 (ಎಕ್ಸ್ ಶೋರೂಂ) ನಲ್ಲಿ ಲಭ್ಯವಿದೆ. ಸಬ್ಸಿಡಿಗಳಲ್ಲಿ ಗಮನಾರ್ಹ ಕಡಿತದ ಹೊರತಾಗಿಯೂ, ಓಲಾ ಇಂಜಿನಿಯರಿಂಗ್ ಮತ್ತು ನಾವೀನ್ಯತೆಗಳ ಮೇಲೆ ಗಮನಹರಿಸುವುದರಿಂದ ಬೆಲೆಯ ಪರಿಣಾಮವನ್ನು ಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲು ಭಾರತದಾದ್ಯಂತ ಹಲವಾರು Ola ಅನುಭವ ಕೇಂದ್ರಗಳನ್ನು (ECs) ಸ್ಥಾಪಿಸುವ ಮೂಲಕ Ola ತನ್ನ ಆಫ್ ಲೈನ್ ಉಪಸ್ಥಿತಿಯನ್ನು ಸಕ್ರಿಯವಾಗಿ ಹೆಚ್ಚಿಸುತ್ತಿದೆ. ಕಂಪನಿಯು ಇತ್ತೀಚೆಗೆ ತನ್ನ 600ನೇ ಇಸಿಯನ್ನು ಬಿಡುಗಡೆ ಮಾಡಿತು. ಆಗಸ್ಟ್ ವೇಳೆಗೆ ಈ ಸಂಖ್ಯೆಯನ್ನು 1,000ಕ್ಕೆ ಕೊಂಡೊಯ್ಯಲು ಕಂಪನಿಯು ಯೋಜಿಸಿದೆ.
ಸದ್ಯ ಓಲಾ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಅತ್ಯುತ್ತಮ ಮಾರಾಟದೊಂದಿಗೆ ಮುನ್ನುಗ್ಗುತ್ತಿದ್ದು, ಪ್ರತಿಸ್ಪರ್ಧಿಗಳಾದ ಎಥರ್, ಟಿವಿಎಸ್ ಕೂಡ ಉತ್ತಮ ಪೈಪೋಟಿ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಈ ಪೈಪೋಟಿ ಮತ್ತಷ್ಟು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಂಪನಿಗಳು ತಮ್ಮ ಮಾದರಿಗಳ ಸಾಲು ಅಪ್‌ಡೇಟ್‌ಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








