Ola MoveOS 4: ಭಯಾನಕ ಫೀಚರ್ಸ್... ಕಾರಿನಷ್ಟೇ ಖಡಕ್ ವೈಶಿಷ್ಟ್ಯಗಳು!
ಓಲಾ ಫುಲ್ ಜೋರಿನಲ್ಲಿದೆ, ಇದೇ ಆಗಸ್ಟ್ ತಿಂಗಳಿನಲ್ಲಿ ಕಂಪನಿಯು ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿಗಳನ್ನು ನೀಡಿದೆ. ತನ್ನ ನಾಲ್ಕು ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಅನಾವರಣಗೊಳಿಸಿರುವುದರ ಜೊತೆಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಹೊಸ MoveOS 4 ಅನ್ನು ಘೋಷಿಸಿದೆ. ಇದು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಯಾವೆಲ್ಲಾ ಅಪ್‌ಡೇಟ್‌ಗಳನ್ನು ನೀಡುತ್ತದೆ ಎಂಬುದನ್ನು ಇಲ್ಲಿ ನೋಡೋಣ.
ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ MoveOS 4 ಅನ್ನು ಘೋಷಿಸಿದೆ. ಇದು ಓಲಾ ಎಲೆಕ್ಟ್ರಿಕ್ ತಯಾರಕರು ಘೋಷಿಸಿದ ಅತಿದೊಡ್ಡ ಸಾಫ್ಟ್‌ವೇರ್ ನವೀಕರಣ ಎಂಬುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಆಪರೇಟಿಂಗ್ ಸಿಸ್ಟಂನ ಹೊಸ ವರ್ಷನ್ ಓಲಾ ಎಸ್1 ಸ್ಕೂಟರ್‌ಗಳಿಗೆ ಹೊಸ ಫೀಚರ್‌ಗಳು ಮತ್ತು ಈಗ ರನ್ನಿಂಗ್‌ನಲ್ಲಿರುವ ಫೀಚರ್‌ಗಳಿಗೆ ಅಪ್‌ಡೇಟ್‌ಗಳನ್ನು ನೀಡುತ್ತದೆ. ಈ ಮೂಲಕ ಸ್ಕೂಟರ್‌ಗಳು ಇನ್ನಷ್ಟು ಸ್ಮಾರ್ಟ್ ಆಗಲಿವೆ.

MoveOS 4 ಗಾಗಿ ಬೀಟಾ ರೋಲ್‌ಔಟ್ ಸೆಪ್ಟೆಂಬರ್ 15 ರಂದು ಪ್ರಾರಂಭವಾಗಲಿದೆ. ಸಾರ್ವಜನಿಕವಾಗಿ ರೋಲ್‌ಔಟ್ ಆಗಲು ಇನ್ನೂ ಒಂದು ತಿಂಗಳು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ಇದು ಅಕ್ಟೋಬರ್ ಅಂತ್ಯದ ವೇಳೆಗೆ ಸಿಗಬಹುದು. ನಮ್ಮ ಪ್ರಕಾರ ಗ್ರಾಹಕರು ಈಗಿನ ಎಲ್ಲಾ ಫೀಚರ್‌ಗಳನ್ನು MoveOS 4 ಮೂಲಕ ಅಪ್‌ಡೇಟ್ ಮಾಡಿಕೊಳ್ಳಲು ಒಂದು ತಿಂಗಳು ಕಾಯಬೇಕಿದೆ.
ರೀಜನರೇಷನ್ (ಪುನರುತ್ಪಾದನೆ), ಹಿಲ್ ಹೋಲ್ಡ್, ಚಾರ್ಜಿಂಗ್ ಸಮಯದ ಮುನ್ಸೂಚನೆ, ಚಾರ್ಜಿಂಗ್ ಮತ್ತು ರೈಡಿಂಗ್ ಶ್ರೇಣಿಯಂತವುಗಳನ್ನು ಈಗ ಇನ್ನಷ್ಟು ಸುಧಾರಿಸಿರುವುದಾಗಿ ಓಲಾ ಎಲೆಕ್ಟ್ರಿಕ್ ಅವರು ಹೇಳಿದ್ದಾರೆ. ಹೈಪರ್‌ಚಾರ್ಜಿಂಗ್ ಈಗ ವೇಗವಾಗಿದ್ದು, ಡಾಕ್ಯುಮೆಂಟ್ ಸಿಂಕ್ ಮಾಡುವಿಕೆ, ಕನೆಕ್ಟಿವಿಟಿ ಸಿಂಕ್ ಮಾಡುವಿಕೆ, ಪೈರಿಂಗ್ ಹಾಗೂ ಟಚ್‌ಸ್ಕ್ರೀನ್ ಪ್ರತಿಕ್ರಿಯೆಯನ್ನು ಮೆರುಗುಗೊಳಿಸಿರುವುದಾಗಿ ತಿಳಿಸಿದ್ದಾರೆ.

ಹೊಸ ಫಿಚರ್ಸ್: ಓಲಾದವರು ಸ್ವತಃ ಅಭಿವೃದ್ಧಿಪಡಿಸಿದ ಹೊಸ ಓಲಾ ಮ್ಯಾಪ್ಸ್, ಟೈಮ್‌ಫೆನ್ಸಿಂಗ್, ಜಿಯೋಫೆನ್ಸಿಂಗ್, ರೈಡ್ ಜರ್ನಲ್ ಮತ್ತು ಕನ್ಸರ್ಟ್ ಮೋಡ್ ಕೂಡ ಇವೆ ಎಂದು ಹೇಳಿದ್ದಾರೆ. ಓಲಾ ಅಪ್ಲಿಕೇಶನ್‌ಗೆ ಗ್ಯಾರೇಜ್ ಮೋಡ್ ಅನ್ನು ಕೂಡ ಪರಿಚಯಿಸಲಾಗಿದೆ. ಈಗ ಒಂದೇ ಅಪ್ಲಿಕೇಶನ್ ಮೂಲಕ ಹಲವಾರು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಇವಿಷ್ಟೇ ಅಲ್ಲದೇ ಸ್ಕೂಟರ್ ಸವಾರ ಎಷ್ಟು ಹಣವನ್ನು ಉಳಿಸಿದ್ದಾನೆ, ಹೊಸ ಎನರ್ಜಿಯ ಒಳನೋಟದ ವೈಶಿಷ್ಟ್ಯ, ಹೊಸ ಹಿಲ್ ಡೀಸೆಂಟ್ ಕಂಟ್ರೋಲ್ ಸಿಸ್ಟಮ್ ಕೂಡ ಇದೆ. ಇದರ ಹೊರತಾಗಿ, ಬಯೋಮೆಟ್ರಿಕ್ ಅಪ್ಲಿಕೇಶನ್ ಲಾಕ್ ಅನ್ನು ಸಪೋರ್ಟ್ ಮಾಡುತ್ತದೆ. ಅಂದರೆ ಅಪ್ಲಿಕೇಶನ್ ಓಪನ್ ಮಾಡಲು ಮುಖ ಅಥವಾ ಬೆರಳನ್ನು ಬಳಸಬೇಕಾಗುತ್ತದೆ. ಓಲಾ ಎಕೋ ರೈಡಿಂಗ್ ಮೋಡ್‌ನಲ್ಲಿ ಅಪ್ಲಿಕೇಶನ್ ವಿಜೆಟ್‌ಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ನೀಡಲಿದೆ.

MoveOS 4 ನೊಂದಿಗೆ ಬರುವ ಇತರ ವೈಶಿಷ್ಟ್ಯಗಳನ್ನು ನೋಡುವುದಾದರೆ, ಆಟೋ ಟರ್ನ್ ಇಂಡಿಕೇಟರ್-ಆಫ್, ಹೊಸ ಟ್ರಿಪ್ ಮೀಟರ್, ವೈಯಕ್ತೀಕರಿಸಿದ ಸಾಮೀಪ್ಯ (ಪರ್ಸನಲೈಸ್ಡ್ ಪ್ರೊಕ್ಸಿಮಿಟಿ), ಮ್ಯೂಸಿಕ್ ಮತ್ತು ಕಾಲ್‌ಗಾಗಿ ಹೆಡ್‌ಫೋನ್ ನಿಯಂತ್ರಣ, ಟೇಕ್-ಮಿ-ಹೋಮ್ ಲೈಟ್‌ಗಳು ಮತ್ತು ನೆಚ್ಚಿನ ಕಾಂಟಾಕ್ಟ್‌ಗಳನ್ನು ಹೊಂದಿದೆ.
ಅಪ್ಲಿಕೇಶನ್ ಅನ್ನು ಸಹ ನವೀಕರಿಸಲಾಗುತ್ತದೆ: ಇದು ಡಾರ್ಕ್ ಮೋಡ್, OTA ಅಪ್‌ಡೇಟ್, ಹಿಲ್ ಹೋಲ್ಡ್ ಸೆಟ್ಟಿಂಗ್, ರೀಜೆನ್ ಸೆಟ್ಟಿಂಗ್, ಕಾಲ್ ಸೆಟ್ಟಿಂಗ್ ಮತ್ತು ವೆಕೇಶನ್ ಮೋಡ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಸ್ಕೂಟರ್‌ಗೆ ಸೇರಿಸಲಾಗುವ ಮತ್ತೊಂದು ದೊಡ್ಡ ವೈಶಿಷ್ಟ್ಯವೆಂದರೆ ಟ್ಯಾಂಪರ್ ವಾರ್ನಿಂಗ್, ಇದು ಸ್ಕೂಟರ್ ಅನ್ನು ಟ್ಯಾಂಪರ್ ಮಾಡಲಾಗುತ್ತಿದೆ ಎಂದು ಮಾಲೀಕರನ್ನು ಎಚ್ಚರಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








