Ola S1 Air: 'ಬುಕ್ಕಿಂಗ್ ರಾಜ' ಓಲಾ ಎಸ್1 ಏರ್ ಇ-ಸ್ಕೂಟರ್ ಶೋರೊಂಗೆ ಎಂಟ್ರಿ.. ಅದ್ದೂರಿ ಸ್ವಾಗತ
ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ (Ola) ಕಂಪನಿ ಹಲವು ತಿಂಗಳಿನಿಂದ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಜುಲೈ ತಿಂಗಳಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಸರ್ಕಾರಿ 'ವಾಹನ್' ಪೋರ್ಟಲ್ ಪ್ರಕಾರ, ಕಂಪನಿಯು 19,000 ಯುನಿಟ್ ಸ್ಕೂಟರ್ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ (YoY) ಶೇಕಡ 375% ಪ್ರಗತಿ ಸಾಧಿಸಿದೆ.
ಕಳೆದ ಗುರುವಾರದಿಂದ ಬುಕ್ಕಿಂಗ್ ಶುರುವಾದ ಓಲಾದ ಕಡಿಮೆ ಬೆಲೆಯ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಭರ್ಜರಿ ಬೇಡಿಕೆ ಬಂದಿದ್ದು, ಕಂಪನಿಯು ವಾರ ಕಳೆಯುವ ಮೊದಲೇ 50,000ಕ್ಕೂ ಹೆಚ್ಚಿನ ಆರ್ಡರ್ ಪಡೆದುಕೊಂಡಿದ್ದು, ಸಖತ್ ಕ್ರೇಜ್ ಹುಟ್ಟು ಹಾಕಿದೆ. ಸದ್ಯದ ಮಾಹಿತಿ ಪ್ರಕಾರ, ಎಸ್1 ಏರ್ ಸ್ಕೂಟರ್ ಹೊಸದಾದ ನಿಯಾನ್ ಬಣ್ಣದ ಆಯ್ಕೆಯಲ್ಲಿ ಶೋರೊಂ/ ಎಕ್ಸ್ಪೀರಿಯೆನ್ಸ್ ಸೆಂಟರ್ ತಲುಪುವುದು ಆರಂಭವಾಗಿದೆ.

ಅಲ್ಲಿನ ಸಿಬ್ಬಂದಿಯಿಂದ ಈ ಸ್ಕೂಟರ್‌ಗೆ ಅದ್ದೂರಿ ಸ್ವಾಗತ ದೊರೆತಿದೆ. ಓಲಾ ಕಂಪನಿ ಎಸ್1 ಮಾರಾಟ ಸ್ಥಗಿತಗೊಳಿಸಿದ್ದು, ಇನ್ಮುಂದೆ, ಎಂಟ್ರಿ ಲೆವೆಲ್ ಸ್ಕೂಟರ್‌ರಾಗಿ ಎಸ್1 ಏರ್ ಹಾಗೂ ಟಾಪ್ ಎಂಡ್ ಮಾದರಿಯಾಗಿ ಎಸ್1 ಪ್ರೊ ಸೇಲ್ ಮಾಡಲು ತೀರ್ಮಾನಿಸಿದೆ. ಆ ಕಾರಣಕ್ಕೆ, ಅಗ್ಗದ ಬೆಲೆಯಲ್ಲಿ ಖರೀದಿಗೆ ಸಿಗುವುದರಿಂದ ಎಸ್1 ಏರ್ ಸ್ಕೂಟರ್‌ಗೆ ದೊಡ್ಡಮಟ್ಟದಲ್ಲಿ ಬೇಡಿಕೆ ಸೃಷ್ಟಿಯಾಗಿದೆ.
ಇದನ್ನು ಮನಗಂಡಿರುವ ಕಂಪನಿ, ಗ್ರಾಹಕರ ಒತ್ತಾಯದ ಮೇರೆಗೆ ರೂ.1,09,999 ಪ್ರಾರಂಭಿಕ ಬೆಲೆಯಲ್ಲಿಯೇ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಅನ್ನು ಆಗಸ್ಟ್ 15ವರೆಗೆ ಸ್ವೀಕರಿಸಲು ನಿರ್ಧರಿಸಿದೆ. ಆ ಬಳಿಕ ನೀವು ಈ ಸ್ಕೂಟರ್ ಕೊಂಡುಕೊಳ್ಳಲು ಯೋಚಿಸಿದರೆ, ರೂ.1,19,999 ದರವಿರುತ್ತದೆ. ಈ ಎಸ್1 ಏರ್ ಇ-ಸ್ಕೂಟರ್ ಶೋರೊಂಗಳಿಗೆ ಬರುತ್ತಿರುವದನ್ನು ನೋಡಿದರೆ, ಬಹುತೇಕ ಈ ವಾರವೇ ವಿತರಣೆ ಆರಂಭವಾಗಲಿದೆ.

ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು, 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಹಬ್ ಮೋಟಾರ್ ನಿಂದ ಚಾಲಿತವಾಗುತ್ತದೆ. 6 hp ಗರಿಷ್ಠ ಪವರ್ ಉತ್ಪಾದಿಸುತ್ತದೆ. 90 kmph ಟಾಪ್ ಸ್ವೀಡ್ ಹೊಂದಿದ್ದು, ಕೇವಲ 3.3 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯಲಿದೆ. ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಎಂಬ ರೈಡಿಂಗ್ ಮೋಡ್ ಒಳಗೊಂಡಿದೆ.
ಈ ಸ್ಕೂಟರ್ ಈಗಿನ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್, ಆಕರ್ಷಕ ಹೆಡ್‌ಲ್ಯಾಂಪ್, 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್‌ಡೇಟ್ಸ್, ಮ್ಯೂಸಿಕ್ ಪ್ಲೇಬ್ಯಾಕ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ. ಸ್ಟೆಲ್ಲರ್ ಬ್ಲೂ, ಪೊರ್ಚೆಲೈನ್ ವೈಟ್, ಕೋರಲ್ ಗ್ಲಾಮ್ ಒಳಗೊಂಡಂತೆ ಐದು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ಬೆಲೆಯನ್ನು ಹೊಂದಿರುವುದರಿಂದ ಎಸ್1 ಪ್ರೊ ಒಳಗೊಂಡಂತೆ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಹೊಂದಿಲ್ಲ. ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಇದು, ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಇನ್ನು, ಓಲಾ ಎಸ್1 ಏರ್ ಇ-ಸ್ಕೂಟರ್ ಈಗಾಗಲೇ ದೊಡ್ಡಮಟ್ಟದಲ್ಲಿ ಬೇಡಿಕೆ ಪಡೆದುಕೊಂಡಿದ್ದು, ಹೊಸ ಬಣ್ಣದಲ್ಲಿ ಶೋರೊಂ ಪ್ರವೇಶಿಸುವುದನ್ನು ಶುರು ಮಾಡಿದೆ. ಅಗ್ಗದ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು, ಈ ಸ್ಕೂಟರ್ ಕೊಂಡುಕೊಳ್ಳಲು ಮನಸ್ಸು ಮಾಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








