Ola: ಕಡಿಮೆ ಬೆಲೆಯ ಎಸ್1 ಏರ್ ಬಗ್ಗೆ ಓಲಾದಿಂದ ದೊಡ್ಡ ಘೋಷಣೆ.. ವಿಡಿಯೋ
ನಿಮ್ಮ ಮೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್ ಯಾವುದೆಂದು ಯಾರಿಗಾದರೂ ಕೇಳಿದರೆ ತಕ್ಷಣ ಬರುವ ಒಂದೇ ಉತ್ತರ ಓಲಾ (Ola) ಸ್ಕೂಟರ್‌ಗಳೆಂದು. ಅಷ್ಟರಮಟ್ಟಿಗೆ ಕಂಪನಿಯ ದ್ವಿಚಕ್ರ ವಾಹನಗಳು ಜನರನ್ನು ಮುಟ್ಟಿವೆ. ಇದೀಗ, ಓಲಾ ತನ್ನ ಬಹುನೀರಿಕ್ಷಿತ ಎಸ್1 ಏರ್ (S1 Air) ಸ್ಕೂಟರ್ ಕುರಿತು ಮಹತ್ವದ ಘೋಷಣೆ ಮಾಡಿದೆ.
ಓಲಾ ಎಲೆಕ್ಟ್ರಿಕ್ (Ola Electric) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದು, ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 5 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಓಡಿಸುವ ಮೂಲಕ ಪರೀಕ್ಷಿಸಲಾಗಿದೆ ಎಂದು ಹೇಳಿದೆ. ಕಂಪನಿಯು ಈ ತಿಂಗಳು ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಅಲ್ಲಿ ಒಂದಿದೆರೆಡು ಘೋಷಣೆ ಮಾಡಲಿದ್ದು, ಪ್ರಮುಖವಾಗಿ ಎಸ್1 ಏರ್ ಲಾಂಚ್ ಮಾಡಿ ವಿತರಣೆಯನ್ನು ಶುರು ಮಾಡಲಿದೆ ಎಂದು ವರದಿಯಾಗಿದೆ.

ಸದ್ಯ, ಖರೀದಿಗೆ ಲಭ್ಯವಿರುವ ಓಲಾ ಎಸ್1 ಹಾಗೂ ಎಸ್1 ಪ್ರೋ ಸ್ಕೂಟರ್‌ಗಳಲ್ಲಿ ಬಳಕೆ ಮಾಡಿರುವ ಹಬ್ ಮೋಟಾರ್ ಅನ್ನೇ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿಯು ಉಪಯೋಗಿಸಲಾಗಿದೆ. ಈ ಹಿಂದೆ, 2.7 kW ಸಾಮರ್ಥ್ಯದ ಮೋಟಾರ್ ಎಸ್1 ಏರ್ ಸ್ಕೂಟರ್‌ನಲ್ಲಿ ಇರುತ್ತದೆ ಎಂದು ಕಂಪನಿ ತಿಳಿಸಿತ್ತು. ಆದರೀಗ 4.5 kW ಸಾಮರ್ಥ್ಯದ ಮೋಟಾರ್ ಬಳಕೆ ಮಾಡಿದೆ.
ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 125 km ರೇಂಜ್ ನೀಡುತ್ತದೆ. ಜೊತೆಗೆ 85 kmph ಟಾಪ್ ಸ್ವೀಡ್ ಪಡೆಯುತ್ತದೆ. ಮೂರು ರೈಡಿಂಗ್ ಮೋಡ್ ಹೊಂದಿದೆ. ಅವುಗಳೆಂದರೆ, ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್.
ಬೆಲೆ ಕಡಿಮೆ ಇರುವುದರಿಂದ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಕೆಲವೊಂದು ವೈಶಿಷ್ಟ್ಯಗಳನ್ನು ಕಳೆದುಕೊಂಡಿದೆ. ಎಸ್1 ಸ್ಕೂಟರ್ ಗೆ ಹೋಲಿಸಿದರೆ, ಎಸ್1 ಏರ್ ಮುಂಭಾಗ ಮೊನೊಶಾಕ್ ಬದಲಿಗೆ ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ ಮೊನೊಶಾಕ್ ಅನ್ನು ಟ್ವಿನ್ ಶಾಕ್ ಅಬ್ಸಾರ್ಬರ್‌ಗೆ ಬದಲಾಯಿಸಲಾದ ಸಸ್ಪೆನ್ಷನ್ ಸೆಟಪ್ ಪಡೆದಿದೆ.
ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಇತರೆ, ಎಸ್1 ಸರಣಿ ಸ್ಕೂಟರ್ ಗಳಲ್ಲಿ ಇರುವಂತೆ ಡಿಸ್ಕ್ ಬ್ರೇಕ್ ಆಯ್ಕೆ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಇಲ್ಲ. ಇದರಲ್ಲಿ ಮುಂಭಾಗ ಹಾಗೂ ಹಿಂಭಾಗ ಡ್ರಮ್ ಬ್ರೇಕ್ ಆಯ್ಕೆಯನ್ನು ನೀಡಲಾಗಿದೆ. ಇನ್ನುಳಿದಂತೆ, 7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಕರ್ಷಕ ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್, ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. 5 ಡ್ಯುಯಲ್ ಟೋನ್ ಪೇಂಟ್ ಥೀಮ್‌ನಲ್ಲಿ ಖರೀದಿಗೆ ಲಭ್ಯವಿದೆ.

ಬೆಲೆ ವಿಚಾರವಾಗಿ ಮಾತನಾಡುವದಾದರೆ, ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ರೂ.1.10 ಲಕ್ಷ ಎಕ್ಸ್ ಶೋರೂಂ (FAME-II ಸಬ್ಸಿಡಿ) ದರದಲ್ಲಿ ಲಭ್ಯವಿದೆ. ಪ್ರಸ್ತುತ, ಕಂಪನಿಯು ಈ ಸ್ಕೂಟರ್ ಅನ್ನು 5 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಓಡಿಸುವ ಮೂಲಕ ಪರೀಕ್ಷಿಸಲಾಗಿದೆ ಎಂದು ಹೇಳಿದ್ದು, ಇದರಿಂದಲೇ ಈ ಸ್ಕೂಟರ್ ಎಷ್ಟು ಪವರ್ ಫುಲ್ ಆಗಿದೆ ಎಂಬುದು ಸುಲಭವಾಗಿ ತಿಳಿಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








