Ola: ಓಲಾ ಮುಖ್ಯಸ್ಥರಿಂದ ಭಾನುವಾರವೇ ಘೋಷಣೆ, ಆಗಸ್ಟ್ 15ರವರೆಗೆ ಮಾತ್ರ.. ತಪ್ಪಿದರೆ ಸಿಗಲ್ಲ
ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಕಂಪನಿ, ಓಲಾ ಎಲೆಕ್ಟ್ರಿಕ್ (Ola Electric) ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಇತ್ತೀಚೆಗೆ ಭಾರತದಲ್ಲಿ ಬುಕ್ಕಿಂಗ್ ಶುರು ಮಾಡಿದ್ದ ತನ್ನ ಅಗ್ಗದ ಎಸ್1 ಏರ್ (S1 Air) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ತೀರ್ಮಾನಿದೆ.
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಓಲಾ ಕಂಪನಿ ಸಿಇಒ ಭವಿಶ್ ಅಗರ್ವಾಲ್ ಅವರು, 'ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿದೆ. ಅನೇಕ ಗ್ರಾಹಕರು, ಬೆಲೆ ಹೆಚ್ಚಳ ಮಾಡದಂತೆ, ರೂ.1.1 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ನೀಡುವಂತೆ ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಲಾಗಿದ್ದು, ಆಸಕ್ತರು, ಆಗಸ್ಟ್ 15ರವರೆಗೆ ಈ ಸ್ಕೂಟರ್ ಅನ್ನು ಇದೇ ಬೆಲೆಯಲ್ಲಿ ಕಾಯ್ದಿರಿಸಬಹುದು' ಎಂದು ಹೇಳಿದ್ದಾರೆ.

ಇತ್ತೀಚೆಗೆ, ಜುಲೈ 31ರಿಂದ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕು ಅಂದುಕೊಂಡರೆ ರೂ.1,19,999 ದರವಿರುತ್ತದೆ ಎಂದು ಭವಿಶ್ ಅಗರ್ವಾಲ್ ಅವರೇ ಹೇಳಿದ್ದರು. ನೂತನ ಸ್ಕೂಟರ್ ವಿತರಣೆಗಳು ಆಗಸ್ಟ್ ಮೊದಲ ವಾರದಿಂದ ಶುರುವಾಗಲಿದ್ದು, ಕಳೆದ ಗುರುವಾರದಿಂದ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭವಾಗಿದ್ದು, ಕೇವಲ ಮೂರು ಗಂಟೆ ಕಳೆಯುವಷ್ಟರಲ್ಲಿ 3,000 ಹೆಚ್ಚು ಆರ್ಡರ್ ಪಡೆದುಕೊಳ್ಳುವ ಮೂಲಕ ದೊಡ್ಡ ದಾಖಲೆ ನಿರ್ಮಿಸಿತು.
ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಇದು 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದೆ. ಇದರಲ್ಲಿ ಬಳಕೆ ಮಾಡಿರುವ ಮೋಟಾರ್ 6 hp ಗರಿಷ್ಠ ಪವರ್ ಪವರ್ ಉತ್ಪಾದಿಸುತ್ತದೆ. ಈ ಸ್ಕೂಟರ್, ಕೇವಲ 3.3 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ.
ಕಳೆದ ಕೆಲವು ದಿನಗಳ ಹಿಂದೆ, ಈ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 5 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಓಡಿಸುವ ಮೂಲಕ ಪರೀಕ್ಷಿಸಲಾಗಿದೆ ಎಂದು ಕಂಪನಿಯೇ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಘೋಷಣೆ ಮಾಡಿತ್ತು. ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಬ್ರೇಕಿಂಗ್ ಸಿಸ್ಟಮ್ ಕುರಿತು ಮಾತನಾಡುವುದಾದರೆ, ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
LED ಹೆಡ್‌ಲ್ಯಾಂಪ್, 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್‌ಡೇಟ್ಸ್, ರಿಮೋಟ್ ಬೂಟ್ ಲಾಕ್/ಅನ್‌ಲಾಕ್, ಮ್ಯೂಸಿಕ್ ಪ್ಲೇಬ್ಯಾಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಹೊಂದಿದೆ. ಜೊತೆಗೆ ಸ್ಟೆಲ್ಲರ್ ಬ್ಲೂ, ಪೊರ್ಚೆಲೈನ್ ವೈಟ್ ಒಳಗೊಂಡಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಪ್ರಸ್ತುತ, ಓಲಾ ದೇಶೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಎಸ್1 ಏರ್ ಹಾಗೂ ಟಾಪ್ ಎಂಡ್ ಮಾದರಿ ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಮಾತ್ರ ಮಾರಾಟ ಮಾಡಲು ತೀರ್ಮಾನ ಮಾಡಿದ್ದು, ಮಿಡ್ ಲೆವೆಲ್ ಆವೃತ್ತಿ ಎಸ್1 ಸೇಲ್ಸ್ ಸ್ಥಗಿತಗೊಳಿಸಿದೆ. ಓಲಾ ಎಸ್1 ಪ್ರೋ ರೂ.1.40 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಲಿದ್ದು, ಇದು ಸಂಪೂರ್ಣ ಚಾರ್ಜಿನಲ್ಲಿ 181 km ರೇಂಜ್ ನೀಡುತ್ತದೆ.
ಒಟ್ಟಾರೆ, ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ ಅವರು, ಆಸಕ್ತ ಗ್ರಾಹಕರು ರೂ.1.1 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಆಗಸ್ಟ್ 15 ರವರೆಗೆ ಎಸ್1 ಏರ್ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಬಹುದು ಎಂದು ಹೇಳಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಇದರಿಂದ ಮುಂಬರುವ ದಿನಗಳಲ್ಲಿ ಈ ಸ್ಕೂಟರ್ ಗೆ ಭರ್ಜರಿ ಬೇಡಿಕೆ ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








