Ola S1 Air: ವರಮಹಾಲಕ್ಷ್ಮಿ ಹಬ್ಬ.. ಬೆಂಗಳೂರಿನ ಓಲಾ ಎಸ್1 ಏರ್ ವಿತರಣೆ ಶುರು, ಖುಷಿಯಲ್ಲಿ ಗ್ರಾಹಕ

ಬೆಂಗಳೂರಿನ ಓಲಾ ಎಲೆಕ್ಟ್ರಿಕ್ (Ola Electric), ತನ್ನ ಎಸ್1 (S1) ಸರಣಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೂಲದ ದೇಶದಾದ್ಯಂತ ಖ್ಯಾತಿಗಳಿಸಿದೆ. ಅದರಲ್ಲೂ ಇ-ಸ್ಕೂಟರ್ ಮಾರಾಟದಲ್ಲಿ ಹಲವು ತಿಂಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇದೀಗ, ಬಜೆಟ್ ಬೆಲೆಯ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಯನ್ನು ಶುರು ಮಾಡಿದೆ.

ಗ್ರಾಹಕರು ಕೂಡ ನೂತನ ಓಲಾ ಎಸ್1 ಏರ್ (Ola S1 Air) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಖುಷಿಯಿಂದಲೇ ಡಿಲೆವರಿ ಪಡೆದಿದ್ದಾರೆ. ಇದರ ಬುಕ್ಕಿಂಗ್ ಆರಂಭಿಸಿದ ಕೆಲವೇ ದಿನಗಳಲ್ಲಿ ಕಂಪನಿಯು ಭರ್ಜರಿಯಾಗಿ 50,000ಕ್ಕೂ ಹೆಚ್ಚಿನ ಆರ್ಡರ್ ಸ್ವೀಕರಿಸಿತ್ತು. ಆಗಸ್ಟ್ 15ರ ಮೊದಲು ಈ ಸ್ಕೂಟರ್ ಕಾಯ್ದಿರಿಸಿದವರಿಗೆ ರೂ.1,09,999 ಬೆಲೆಯಲ್ಲಿ ದೊರೆಯುತ್ತದೆ. ಸದ್ಯ, ರೂ.1.20 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ.

Ola S1 Air: ವರಮಹಾಲಕ್ಷ್ಮಿ ಹಬ್ಬ.. ಬೆಂಗಳೂರಿನ ಓಲಾ ಎಸ್1 ಏರ್ ವಿತರಣೆ ಶುರು, ಖುಷಿಯಲ್ಲಿ ಗ್ರಾಹಕ

ಓಲಾ ಕಂಪನಿಯು ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ ವಿತರಣೆಯನ್ನು ದೇಶಾದ್ಯಂತ 100ಕ್ಕೂ ಹೆಚ್ಚು ನಗರಗಳಲ್ಲಿ ಶುರು ಮಾಡಿದ್ದು, ಮುಂಬರುವ ದಿನಗಳಲ್ಲಿ ಇತರೆಡೆಗೆ ವಿಸ್ತರಿಸಲಿದೆ. ಗ್ರಾಹಕರ ಬೇಡಿಕೆಯನ್ನು ಪೂರೈಸಲು ತನ್ನ ತಯಾರಿಕ ಘಟಕದಲ್ಲಿ ಉತ್ಪಾದನೆಯನ್ನು ಸಹ ಹೆಚ್ಚಿಸಿದೆ. ಈ ಓಲಾ ಎಸ್1 ಏರ್ ಜೆನ್2 (Gen2) ಪ್ಲಾಟ್‌ಫಾರ್ಮ್ ಆಧರಿಸಿರುವುದರಿಂದ ನವೀಕರಣಗೊಂಡಿರುವ ಬ್ಯಾಟರಿ ಪ್ಯಾಕ್ ಪಡೆದಿದೆ.

ಹೊಸ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್‌, 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 151 km ರೇಂಜ್ ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ BLDC ಹಬ್ ಮೋಟಾರ್ 6 kW (8 bhp) ಪವರ್ ಉತ್ಪಾದಿಸುತ್ತದೆ. ಜೊತೆಗೆ ಈ ಸ್ಕೂಟರ್, 90 kmph ಟಾಪ್ ಸ್ವೀಡ್ ಹೊಂದಿದೆ.

ಈ ನೂತನ ಓಲಾ ಎಸ್1 ಏರ್, ಕೇವಲ 5.7 ಸೆಕೆಂಡುಗಳಲ್ಲಿ 0 - 60 kmph ವೇಗವನ್ನು ಪಡೆಯಲಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಇದರ ಬ್ಯಾಟರಿ ಪ್ಯಾಕ್ 5 ಗಂಟೆಯಲ್ಲಿ ಫುಲ್ ಚಾರ್ಜ್ ಆಗುತ್ತದೆ. ಈ ಸ್ಕೂಟರ್‌, ಟಾಪ್ ಎಂಡ್ ಮಾದರಿ ಎಸ್1 ಪ್ರೊ ನಂತೆಯೇ ಹೈಪರ್ ಮೋಡ್, ಫಾಸ್ಟ್ ಚಾರ್ಜರ್ ಹಾಗೂ ಅಲಾಯ್ ವೀಲ್ಸ್ ಅನ್ನು ಪಡೆದಿಲ್ಲ.

ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್‌, ಕೊಂಚ ಕಡಿಮೆ ಬೆಲೆಯನ್ನು ಹೊಂದಿರುವುದರಿಂದ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡಿದಿಲ್ಲ. ಬದಲಾಗಿ, ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಟ್ವಿನ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್ ಒಳಗೊಂಡಿದ್ದು, ಸ್ಟೆಲ್ಲರ್ ಬ್ಲೂ, ನಿಯಾನ್, ಕೋರಲ್ ಗ್ಲಾಮ್ ಸೇರಿದಂತೆ ಆರು ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

ಈ ಎಲೆಕ್ಟ್ರಿಕ್ ಸ್ಕೂಟರ್, 34 - ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ ಹೊಂದಿದೆ. ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಎಂಬ ಮೂರು ರೈಡಿಂಗ್ ಮೋಡ್ ಪಡೆದಿದ್ದು, ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ, 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್‌ಡೇಟ್ಸ್ ಸೇರಿವೆ.

ಇನ್ನು, ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ ದೇಶದಲ್ಲಿ 1,000ಕ್ಕೂ ಹೆಚ್ಚು ಓಲಾ ಎಕ್ಸ್ಪೀರಿಯೆನ್ಸ್ ಸೆಂಟರ್ ಮೂಲಕ ಖರೀದಿಗೆ ಲಭ್ಯವಿದ್ದು, ಆಸಕ್ತ ಗ್ರಾಹಕರು, ಕಂಪನಿಯ ಅಪ್ಲಿಕೇಶನ್ ಮೂಲಕವೂ ಬುಕ್ಕಿಂಗ್ ಮಾಡಬಹುದು. ಈ ಸ್ಕೂಟರ್, ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯದೊಂದಿಗೆ ದೊರೆಯುತ್ತಿದ್ದು, ಸದ್ಯ ವಿತರಣೆ ಶುರುವಾಗಿರುವುದರಿಂದ ಕೆಲವೇ ದಿನಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮತ್ತಷ್ಟು ಹೆಚ್ಚಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, August 24, 2023, 10:20 [IST]
English summary
Ola s1 air electric scooter deliveries begin india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+