Ola scooters: ತಿಂಗಳ ಆರಂಭದಲ್ಲಿಯೇ ತನ್ನ ಗ್ರಾಹಕರಿಗೆ ದೊಡ್ಡ ಶಾಕ್ ಕೊಟ್ಟ ಓಲಾ
ಭಾರತದಲ್ಲಿ ಓಲಾ (Ola) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ Fame -II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ ಹಿನ್ನೆಲೆ, ತನ್ನ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ದರವನ್ನು ಏರಿಕೆ ಮಾಡಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸದ್ಯ, ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಹಿಂದೆ ರೂ.84,999 ಎಕ್ಸ್ ಶೋರೂಂ ದರ ಹೊಂದಿದ್ದ ಓಲಾ ಎಸ್1 ಏರ್ ಬೆಲೆ ರೂ.15,000 ಹೆಚ್ಚಳವಾಗಿ ರೂ.99,999 ತಲುಪಿದೆ. ರೂ.1,14,999ಕ್ಕೆ ಮಾರಾಟವಾಗುತ್ತಿದ್ದ ಓಲಾ ಎಸ್1 ದರ ರೂ.1,29,999 ಹಾಗೂ ರೂ.1,24,999 ಇದ್ದ ಟಾಪ್ ಎಂಡ್ ಮಾದರಿ ಓಲಾ ಎಸ್1 ಪ್ರೊ ಬೆಲೆ ರೂ.1,39,999 ಆಗಿದೆ.

ಮೊದಲಿಗೆ ಓಲಾ ಎಸ್1 ಪ್ರೊ ಸ್ಕೂಟರ್ ಬಗ್ಗೆ ಮಾತನಾಡೋಣ. ಇದು 4kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, 8.5 kW ಮೋಟಾರ್ ನಿಂದ ಕಾರ್ಯನಿರ್ವಹಿಸುತ್ತದೆ. ಸಂಪೂರ್ಣ ಚಾರ್ಜಿನಲ್ಲಿ 181 km ರೇಂಜ್ ನೀಡಲಿದ್ದು, 95km/h ಟಾಪ್ ಸ್ವೀಡ್ ಹೊಂದಿದೆ. ಕೇವಲ 2.9 ಸೆಕೆಂಡುಗಳಲ್ಲಿ 0 ಯಿಂದ 40 kmph ವೇಗವನ್ನು ಪಡೆಯುತ್ತದೆ.
ಮನೆಯ ವಿದ್ಯುತ್ ಬಳಕೆಯಲ್ಲಿ ಓಲಾ ಎಸ್1 ಪ್ರೊ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 6.3 ಗಂಟೆ ಬೇಕಾಗುತ್ತದೆ. ಈ ಸ್ಕೂಟರ್ ನಾಲ್ಕು ರೈಡಿಂಗ್ ಮೋಡ್ ಹೊಂದಿದೆ. ಅವುಗಳೆಂದರೆ, ನಾರ್ಮಲ್, ಇಕೋ, ಸ್ಪೋರ್ಟ್ ಮತ್ತು ಹೈಪರ್. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಮುಖ್ಯವಾಗಿ 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ.
ಈ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್, ನಿಯೋ ಮಿಂಟ್, ಕೋರಲ್ ಗ್ಲಾಮ್, ಜೆಟ್ ಬ್ಲಾಕ್, ಲಿಕ್ವಿಡ್ ಸಿಲ್ವರ್, ಮಾರ್ಷ್ ಮ್ಯಾಲೋ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. ಬಹುತೇಕ ಮಿಡ್ ವೇರಿಯೆಂಟ್ ಎಂದು ಕರೆಸಿಕೊಳ್ಳುವ ಓಲಾ ಎಸ್1, 2kWh, 3kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, ಅವುಗಳಿಗೆ ಅನುಗುಣವಾಗಿ 91 km ರಿಂದ 141 km ರೇಂಜ್ ನೀಡಲಿದೆ.
ಓಲಾ ಅತ್ಯಂತ ಕಡಿಮೆ ಬೆಲೆಯಲ್ಲಿ ಸೇಲ್ ಮಾಡುವ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು 2kWh, 3kWh ಹಾಗೂ 4kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳಿಗೆ ಅನುಗುಣವಾಗಿ 85 km ರಿಂದ 165 km ರೇಂಜ್ ಕೊಡಲಿದ್ದು, 85 km/h ಟಾಪ್ ಸ್ವೀಡ್ ಹೊಂದಿದೆ.
ಓಲಾ ಎಸ್1 ಏರ್, ಸ್ಮಾರ್ಟ್‌ಫೋನ್ ಕನೆಕ್ಟ್ದ್ 7 ಇಂಚಿನ TFT ಸ್ಕ್ರೀನ್, ಜಿಪಿಎಸ್, ಮ್ಯೂಸಿಕ್ ಪ್ಲೇಬ್ಯಾಕ್, ಸೈಡ್ ಸ್ಟ್ಯಾಂಡ್ ಅಲರ್ಟ್, ರಿವರ್ಸ್ ಮೋಡ್, ರಿಮೋಟ್ ಬೂಟ್ ಲಾಕ್/ ಅನ್‌ಲಾಕ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು, ಓಲಾದ ಏಪ್ರಿಲ್ (2023) ತಿಂಗಳ ಮಾರಾಟ ವರದಿಯನ್ನು ಗಮನಿಸಿದಾಗ 30,000 ಯುನಿಟ್ ಎಸ್1 ಸರಣಿ ಸ್ಕೂಟರ್ ಸೇಲ್ ಮಾಡಿ, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 40% ಪಾಲನ್ನು ತನ್ನದಾಗಿಸಿಕೊಂಡಿತ್ತು.
ಒಟ್ಟಾರೆ, ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ Fame -II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ ಹಿನ್ನೆಲೆ, ಕಂಪನಿಯು ದರ ಏರಿಕೆ ಮಾಡಿದೆ. ಈಗಾಗಲೇ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳು ದೇಶಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವುದರಿಂದ ಇದು ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಅಲ್ಲದೆ, ಕಂಪನಿ ಎಂಟ್ರಿ ಲೆವೆಲ್ 'ಎಸ್1 ಏರ್' ವಿತರಣೆಯನ್ನು ಜುಲೈ ತಿಂಗಳಿಂದ ಪ್ರಾರಂಭಿಸುವುದಾಗಿ ಘೋಷಿಸಿರುವುದು ಗ್ರಾಹಕರಿಗೆ ಖುಷಿ ತಂದಿದೆ.


Click it and Unblock the Notifications








