Ola S1 EV ADAS ವೈಶಿಷ್ಟ್ಯ ಪಡೆಯಲಿದೆಯೇ? ವಿಡಿಯೋದಲ್ಲಿ ಬಯಲಾಯ್ತು ಆಸಕ್ತಿಕರ ಮಾಹಿತಿ

ಓಲಾ ಎಲೆಕ್ಟ್ರಿಕ್ ದೇಶದಲ್ಲಿ ತಂತ್ರಜ್ಞಾನ ಅಳವಡಿಕೆಯಲ್ಲಿ ಇತರ ಕಂಪನಿಗಳಿಗೆ ಹೋಲಿಸಿಕೊಂಡರೆ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ. ಮಾರಾಟದ ವಿಷಯದಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ. ಇದಕ್ಕೆ ಪ್ರಮುಖ ಕಾರಣ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದ ವಿಷಯದಲ್ಲಿ ಕಂಪನಿಯು ಯಾವುದೇ ರಾಜಿಯಾಗದೇ ಗ್ರಾಹಕರಿಗೆ ಹೊಸ ಅಪ್‌ಡೇಟ್‌ಗಳನ್ನು ನೀಡುತ್ತಿರುವುದಾಗಿದೆ.

ಇದೀಗ ಮತ್ತೊಮ್ಮೆ Ola Electric ನ ಎಂಜಿನಿಯರ್‌ಗಳು ಕುತೂಹಲ ಕೆರಳಿಸುವ ಕೆಲಸವೊಂದರಲ್ಲಿ ತೊಡಗಿದ್ದು, ಈ ಕುರಿತ ಸಣ್ಣ ಟೀಸರ್ ವಿಡಿಯೋ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಸಿಇಒ ಭವಿಶ್ ಅಗರ್ವಾಲ್ ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಸಖತ್ ಸದ್ದು ಮಾಡುತ್ತಿದೆ. ಕಂಪನಿಯು ADAS ಅನ್ನು ಒಳಗೊಂಡರುವಂತೆ ಕಾಣುವ S1 ಮಾದರಿಯನ್ನು ಪರೀಕ್ಷಿಸುವ ಸಣ್ಣ ವಿಡಿಯೋವನ್ನು ಬಿಟ್ಟಿದೆ. ADAS ಎಂದರೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್, ಈ ವೈಶಿಷ್ಟ್ಯವನ್ನು ಹೆಚ್ಚಾಗಿ ದುಬಾರಿ ಕಾರುಗಳಲ್ಲಿ ನಾವು ನೋಡಬಹುದು.

Ola S1 EV ADAS ವೈಶಿಷ್ಟ್ಯ ಪಡೆಯಲಿದೆಯೇ? ವಿಡಿಯೋದಲ್ಲಿ ಬಯಲಾಯ್ತು ಆಸಕ್ತಿಕರ ಮಾಹಿತಿ

ಪ್ರಸ್ತುತ Ola S1 Pro ಅತ್ಯಂತ ಆಧುನಿಕ ಸ್ಕೂಟರ್ ಆಗಿರುವುದರಿಂದ, ಕಂಪನಿಯು ಅದನ್ನು ನಿರಂತರವಾಗಿ ನವೀಕರಿಸುತ್ತಿದೆ. ಇದರಲ್ಲಿ ಓಲಾದ ಹೊಸ ತಂತ್ರಜ್ಞಾನವನ್ನು ನೋಡಬಹುದಾಗಿದೆ. ಹೊಸ ವೀಡಿಯೊದಲ್ಲಿ, S1 ಪ್ರೊನಲ್ಲಿ ಮುಂಭಾಗದ ಕ್ಯಾಮೆರಾ ಮತ್ತು ಮೇಕ್ ಶಿಫ್ಟ್ ಸ್ಕ್ರೀನ್ ಅನ್ನು ಸ್ಥಾಪಿಸಲಾಗಿದೆ. ಇದರಲ್ಲಿನ ನೀಲಿ ಬಾಕ್ಸ್‌ನಲ್ಲಿ ಸ್ಕೂಟರ್‌ನ ಹಾದಿಯನ್ನು ಕಾಣಬಹುದು, ಹಾಗೆಯೇ ಕ್ಯಾಮೆರಾವು ರಸ್ತೆಯಲ್ಲಿ ಇತರ ವಾಹನಗಳನ್ನು ಪತ್ತೆ ಮಾಡುವುದನ್ನು ಸಹ ಕಾಣಬಹುದು.

ನಾವು ಈಗ ನೋಡಿರುವುದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಎಸಿಸಿ) ಆಗಿರಬಹುದು. ಇದು ಕ್ರೂಸ್ ಕಂಟ್ರೋಲ್ ಸಿಸ್ಟಮ್‌ನ ವರ್ಧನೆಯಾಗಿದೆ. ಇದು ರಾಡಾರ್ ಆಧಾರಿತ ಅಥವಾ ಕ್ಯಾಮೆರಾ ಆಧಾರಿತ ಅಡೆತಡೆಗಳು ಮತ್ತು ಇತರ ವಾಹನ ಚಾಲಕರನ್ನು ಸ್ಕ್ಯಾನ್ ಮಾಡುವ ಮೂಲಕ ವಾಹನದ ವೇಗವನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಹ್ಯುಂಡೈ ವರ್ನಾ ಮತ್ತು ಟೊಯೊಟಾ ಇನ್ನೋವಾ ಹೈಕ್ರಾಸ್‌ನಂತಹ ACC ಯನ್ನು ಹೊಂದಿರುವ ಆಧುನಿಕ ವಾಹನಗಳು ಸಾಕಷ್ಟು ಇವೆ.

Ola S1 EV ADAS ವೈಶಿಷ್ಟ್ಯ ಪಡೆಯಲಿದೆಯೇ? ವಿಡಿಯೋದಲ್ಲಿ ಬಯಲಾಯ್ತು ಆಸಕ್ತಿಕರ ಮಾಹಿತಿ

ಕೆಲವೇ ಕೆಲವು ಉನ್ನತ ಮಟ್ಟದ ದ್ವಿಚಕ್ರ ವಾಹನಗಳು ಮಾತ್ರ ಈ ತಂತ್ರಜ್ಞಾನದೊಂದಿಗೆ ಬರುತ್ತವೆ. ಇದೀಗ Ola S1 ನಲ್ಲಿಯೂ ACC ಕಾರ್ಯರೂಪಕ್ಕೆ ಬಂದರೆ, ಇದು ಡುಕಾಟಿ ಮಲ್ಟಿಸ್ಟ್ರಾಡಾ V4, BMW R 1250 RT ಮತ್ತು KTM ಸೂಪರ್ ಅಡ್ವೆಂಚರ್ R ನಂತಹ ಬೈಕ್‌ಗಳ ಪಟ್ಟಿಗೆ ಸೇರುತ್ತದೆ. ಓಲಾ ಈ ವೈಶಿಷ್ಟ್ಯವನ್ನು ನೈಜ ಜಗತ್ತಿನಲ್ಲಿ ಪರೀಕ್ಷಿಸುತ್ತಿರುವಂತೆ ತೋರುತ್ತಿದೆ. ತಂತ್ರಜ್ಞಾನ ಡೆಮೊ ಮೂಲಕ ಹೆಚ್ಚಿನ ವಿವರಗಳನ್ನು ನೀಡುವುದಾಗಿ ಅಗರ್ವಾಲ್ ಹೇಳಿದ್ದಾರೆ.

ಒಟ್ಟಾರೆಯಾಗಿ ADAS ಆಗಮನದೊಂದಿಗೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಘರ್ಷಣೆ ತಪ್ಪಿಸುವಿಕೆ, ಪಾದಚಾರಿ ಪತ್ತೆ ಮುಂತಾದ ವೈಶಿಷ್ಟ್ಯಗಳನ್ನು ಕಾಣಬಹುದು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ACC Ola S1 ಗೆ ದಾರಿ ಮಾಡಿಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ, ಏಕೆಂದರೆ ಕಂಪನಿಯು ವೈಶಿಷ್ಟ್ಯಗಳಿಗೆ ಬಂದಾಗ ನಾವೀನ್ಯತೆಯ ವಿಷಯದಲ್ಲಿ ಇಲ್ಲಿಯವರೆಗೂ ರಾಜೀ ಮಾಡಿಕೊಂಡಿಲ್ಲ. ಈಗಾಗಲೇ ಹಲವು ನವೀಕರಣಗಳನ್ನು ನೀಡಿ ಸ್ಪರ್ಧಿಗಳ ನಿದ್ದೆ ಕೆಡಿಸಿದೆ.

ಇನ್ನು ಓಲಾಗೆ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದ್ದ ಮುಂಭಾಗದ ಸಸ್ಪೆನ್ಷನ್ ಸಮಸ್ಯೆಯನ್ನು ಕಂಪನಿಯು ಗಂಭೀರವಾಗಿ ಪರಿಗಣಿಸಿದೆ. ತನ್ನ ಗ್ರಾಹಕ ಸಮುದಾಯದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರಸ್ತೆಗಳಲ್ಲಿ ಮೊದಲಿಗಿಂತ ಹೆಚ್ಚು ಕಾಲ ಉಳಿಯುವಂತೆ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ನವೀಕರಣಕ್ಕಾಗಿ ಗ್ರಾಹಕರಿಂದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳಲಾಗುವುದಿಲ್ಲ. ಗ್ರಾಹಕರು ಮಾರ್ಚ್ 22 ರಿಂದ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿ ಅಪ್‌ಗ್ರೇಡ್ ಮಾಡಲು ಹತ್ತಿರದ ಓಲಾ ಅನುಭವ ಕೇಂದ್ರ ಅಥವಾ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, March 23, 2023, 18:15 [IST]
English summary
Ola s1 ev scooter likely to get adas feature
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+