ಓಲಾ ಎಸ್1 ಹೋಳಿ ಸ್ಪೆಷಲ್ ಎಡಿಷನ್ ಅನಾವರಣ: ಅದೃಷ್ಟ ಪರೀಕ್ಷಿಸಿ..!
ಭಾರತದಲ್ಲಿ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ 'ಓಲಾ' ಹೋಳಿ ಪ್ರಯುಕ್ತ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ನ ಸ್ಪೆಷಲ್ ಎಡಿಷನ್ ಅನಾವರಣ ಮಾಡಿದೆ. ಈ ಸ್ಕೂಟರ್ ಆರೆಂಜ್, ಗ್ರೀನ್, ಬ್ಲೂ, ಯೆಲ್ಲೋ, ಪಿಂಕ್, ಹಾಗೂ ರೆಡ್ ಬಣ್ಣಗಳ ಸಮ್ಮಿಶ್ರಣವನ್ನು ಹೊಂದಿದೆ. ಸಂಪೂರ್ಣ ವಿವರ ಇಲ್ಲಿದೆ.
ಓಲಾ ಎಸ್1 ಹೋಳಿ ಎಡಿಷನ್ ಸ್ಕೂಟರ್ ಗಳು ಕೇವಲ 5 ಯುನಿಟ್ ಗಳಿಗೆ ಮಾತ್ರ ಸೀಮಿತವಾಗಿದೆ. ಇವುಗಳನ್ನು ಕಂಪನಿ ಆಯೋಜಿಸಿರುವ ಸ್ಪರ್ಧೆಯ ಭಾಗವಾಗಿ ನೀಡಲಾಗುತ್ತದೆ. ಈ ಬಗ್ಗೆ ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ. 'ನಿಮ್ಮ ಓಲಾ ಎಸ್1 ಸ್ಕೂಟರ್‌ನೊಂದಿಗೆ ಹೋಳಿ ಹಬ್ಬ ಆಚರಣೆಯ ವೀಡಿಯೊ ಅಥವಾ ಚಿತ್ರವನ್ನು ಹಂಚಿಕೊಳ್ಳಬೇಕು. ಅತ್ಯುತ್ತಮವೆಂದು ಕಂಡುಬಂದವುಗಳಿಗೆ ಈ ಸ್ಕೂಟರ್ ಬಹುಮಾನವಾಗಿ ನೀಡಲಾಗುತ್ತದೆ' ಎಂದು ಹೇಳಿದ್ದಾರೆ.

ಇದನ್ನು ಗಮನಿಸಿದಾಗ ಈ ಸ್ಪರ್ಧೆ ಓಲಾ ಎಸ್1 ಗ್ರಾಹಕರಿಗೆ ಎಂದು ಮಾತ್ರ ತಿಳಿಯುತ್ತದೆ. ಆದರೆ, ಹೋಳಿ ಎಡಿಷನ್ ಹಣ ಪಡೆದು ವಿತರಿಸಲಾಗುತ್ತದೆಯೋ ಇಲ್ಲವೇ ಉಚಿತವಾಗಿ ನೀಡಲಾಗುತ್ತದೆಯೋ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಬಹುಮಾನವಾಗಿ ಉಚಿತವಾಗಿ ನೀಡಬಹುದು ಎಂದು ಹೇಳಲಾಗಿದೆ. ಈ ಸ್ಕೂಟರ್ ಗಳ ಬಣ್ಣವನ್ನು ಮಾತ್ರ ಬದಲಾಯಿಸಲಾಗಿದೆ. ಉಳಿದಂತೆ ಕಾರ್ಯಕ್ಷಮತೆ ಸೇರಿದಂತೆ ಬೇರೆಲ್ಲವೂ ಹಿಂದಿನ ಸ್ಕೂಟರ್ ನಂತೆಯೇ ಇರಲಿದೆ.
ಕಳೆದ ಫೆಬ್ರವರಿಯಲ್ಲಿ ಓಲಾ ಎಸ್1 ಹಾಗೂ ಎಸ್1 ಏರ್ ಸ್ಕೂಟರ್‌ಗಳ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಓಲಾ ಎಸ್1 ಸ್ಕೂಟರ್ ನ ಕಡಿಮೆ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರುವ ನೂತನ ರೂಪಾಂತರವು 2kWh ಬ್ಯಾಟರಿ, 8.5 kW ಮೋಟಾರ್ ಪಡೆದಿದ್ದು, 91 km ರೇಂಜ್ ನೀಡಲಿದೆ. 90km/h ಟಾಪ್ ಸ್ವೀಡ್ ಹೊಂದಿದ್ದು, ರೂ.99,999 ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.
ಮತ್ತೊಂದು, ರೂಪಾಂತರವಾದ ಓಲಾ ಎಸ್1, 3kWh ಬ್ಯಾಟರಿ ಪ್ಯಾಕ್ ಹಾಗೂ 8.5 kW ಮೋಟಾರ್ ಒಳಗೊಂಡಿದ್ದು, 141 km ರೇಂಜ್ ಹಾಗೂ 95km/h ಟಾಪ್ ಸ್ವೀಡ್ ಹೊಂದಿದೆ. ರೂ.1,09,999 ಬೆಲೆಯಲ್ಲಿ ಲಭ್ಯವಿದೆ. ಟಾಪ್ ಎಂಡ್ ಮಾದರಿ ಓಲಾ ಎಸ್1 ಪ್ರೊ, 4kWh ಬ್ಯಾಟರಿ ಪ್ಯಾಕ್, 8.5 kW ಮೋಟಾರ್ ನಿಂದ ಚಾಲಿತವಾಗಲಿದ್ದು, 181 km ರೇಂಜ್ ನೀಡಲಿದ್ದು, 95km/h ಟಾಪ್ ಸ್ವೀಡ್ ಪಡೆದಿದೆ. ರೂ.129,999 ದರದಲ್ಲಿ ದೊರೆಯಲಿದೆ.
ಓಲಾದ ಅಗ್ಗದ ಸ್ಕೂಟರ್ ಎಂದೇ ಖ್ಯಾತಿಗಳಿಸಿರುವ ಓಲಾ ಎಸ್1 ಏರ್, ಟಾಪ್ ಎಂಡ್ ಮಾದರಿ 4.5kW (6.11 hp) ಪವರ್ ಉತ್ಪಾದಿಸಲಿದ್ದು, 2 kWh, 3 kWh ಹಾಗೂ 4 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಬ್ಯಾಟರಿ ಪ್ಯಾಕ್ ಅನುಗುಣವಾಗಿ 85 km - 165 km ರೇಂಜ್ ನೀಡಲಿದ್ದು, ಗರಿಷ್ಠ 85 kmph ಟಾಪ್ ಸ್ವೀಡ್ ಹೊಂದಿದೆ. ರೂ.84,999 ದಿಂದ ರೂ.1,09,999 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಓಲಾ ಎಸ್1 ಏರ್ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದ್ದು, ಸ್ಮಾರ್ಟ್‌ಫೋನ್ ಕನೆಕ್ಟ್ದ್ 7-ಇಂಚಿನ TFT ಸ್ಕ್ರೀನ್, ಜಿಪಿಎಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಓಲಾ ಕಂಪನಿ ತನ್ನ ಸ್ಕೂಟರ್ ಮಾರಾಟದಲ್ಲೂ ಉತ್ತಮ ಸಾಧನೆಯನ್ನು ಮಾಡಿದೆ. ಫೆಬ್ರವರಿಯಲ್ಲಿ 17,667 ಯುನಿಟ್ ಮಾರಾಟ ಮಾಡಿದ್ದು, 27% ಮಾರುಕಟ್ಟೆ ಪಾಲು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದೆ. ಜೊತೆಗೆ 11 ತಿಂಗಳಲ್ಲಿ 1,29,866 ಯುನಿಟ್ ಸ್ಕೂಟರ್ ಸೇಲ್ ಮಾಡಿದೆ.
ಇನ್ನು, ಓಲಾ ಕಂಪನಿ ಎಸ್1 ಹೋಳಿ ಸ್ಪೆಷಲ್ ಎಡಿಷನ್ ಅನಾವರಣ ಮಾಡುವ ಮೂಲಕ ತನ್ನ ಗ್ರಾಹಕರ ಹತ್ತಿರವಾಗಲು ಪ್ರಯತ್ನಿಸುತ್ತಿದ್ದು, ಈ ಸ್ಕೂಟರ್ ಯಾವ ಅದೃಷ್ಟಶಾಲಿ ಕೈಸೇರಲಿದೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಓಲಾ ಕಂಪನಿ ಕಳೆದ ತಿಂಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಎಸ್1 ಬಿಡುಗಡೆ ಮಾಡಿದ್ದು, ಇದು ಗ್ರಾಹಕರನ್ನು ಆಕರ್ಷಿಸುತ್ತಿದೆ ಎಂದು ಹೇಳಬಹುದು. ಜೊತೆಗೆ ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ಬೈಕ್ ಹಾಗೂ ಕಾರು ತಯಾರಿಸಲು ಓಲಾ ಸಿದ್ಧವಾಗಿದೆ.


Click it and Unblock the Notifications








