Ola S1 Pro: ಸಿಹಿಸುದ್ದಿ.. ಜನಪ್ರಿಯ ಓಲಾ ಎಸ್1 ಪ್ರೊ ಸ್ಕೂಟರ್ ಬೆಲೆ ಇಳಿಕೆ

ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 'ಓಲಾ' ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರೀ ಜನಪ್ರಿಯತೆ ಗಳಿಸಿವೆ. ಇದೀಗ, ಟಾಪ್ ಎಂಡ್ ಮಾದರಿ ಎಸ್1 ಪ್ರೊ ಬೆಲೆ ಇಳಿಕೆ ಮಾಡಿರುವುದಾಗಿ ಕಂಪನಿ ಘೋಷಣೆ ಮಾಡಿದೆ. ಕೆಲದಿನಗಳವರೆಗೆ ಈ ಸ್ಕೂಟರ್ ಗ್ರಾಹಕರ ಕೈಗೆಟುಕುವ ದರದಲ್ಲಿ ಸಿಗಲಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಓಲಾ ಎಲೆಕ್ಟ್ರಿಕ್, ತನ್ನ ಎಸ್1 ಪ್ರೊ ಸ್ಕೂಟರ್ ಬೆಲೆಯನ್ನು ಬರೋಬ್ಬರಿ ರೂ.5,000 ಇಳಿಸಿದ್ದು, ರೂ.1,24,999 (ಎಕ್ಸ್ ಶೋರೂಂ, FAME-II ಸಬ್ಸಿಡಿ ಸೇರಿ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಆದರೆ, ನೂತನ ದರದಲ್ಲಿ ಸ್ಕೂಟರ್ ಖರೀದಿಸಲು ಏಪ್ರಿಲ್ 16ರವರೆಗೆ ಮಾತ್ರ ಅವಕಾಶವಿದೆ. ಈ ಮೊದಲು ರೂ.1,29,999 ಬೆಲೆ ಹೊಂದಿತ್ತು. ಅಲ್ಲದೆ, 2022ರ ಕೊನೆಯ ತ್ರೈಮಾಸಿಕದಲ್ಲೂ ಕಂಪನಿಯು ರೂ.10,000 ರಿಯಾಯಿತಿಯನ್ನು ನೀಡಿತ್ತು.

Ola S1 Pro: ಸಿಹಿಸುದ್ದಿ.. ಜನಪ್ರಿಯ ಓಲಾ ಎಸ್1 ಪ್ರೊ ಸ್ಕೂಟರ್ ಬೆಲೆ ದಿಢೀರ್ ಇಳಿಕೆ

ಈ ಸ್ಕೂಟರ್ ಬೆಲೆ ಇಳಿಸಲು ಎರಡು ಕಾರಣಗಳಿವೆ. ಅದರಲ್ಲೊಂದು ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕಂಪನಿಯೇ ಮೊದಲ ಸ್ಥಾನದಲ್ಲಿದ್ದು, ಅದನ್ನು ಯಾರಿಗೂ ಬಿಟ್ಟುಕೊಡಲು ತಯಾರಿಲ್ಲ. ಇನ್ನೊಂದು, ಓಲಾದ ಇತರೆ ಸ್ಕೂಟರ್‌ಗಳಾದ ಎಸ್1 ಏರ್ ಹಾಗೂ ಎಸ್1ನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿರವುದರಿಂದ ಟಾಪ್ ಎಂಡ್ ಎಸ್1 ಪ್ರೊ ಕೂಡ ಮಾರುಕಟ್ಟೆಯಲಿದ್ದು, ಕಡಿಮೆ ಬೆಲೆಯಲ್ಲಿಯೇ ಲಭ್ಯವಿದೆ ಎನ್ನುವುದನ್ನು ತಿಳಿಸುವ ಉದ್ದೇಶವೂ ಆಗಿದೆ.

ದೇಶದಲ್ಲಿ ಓಲಾದ ಎಲೆಕ್ಟ್ರಿಕ್ ಸ್ಕೂಟರ್‌ಗಳು ಎಷ್ಟರಮಟ್ಟಿಗೆ ಖ್ಯಾತಿಗಳಿಸಿವೆ ಅಂದರೇ, ಕಳೆದ ಮಾರ್ಚ್ (2023) ತಿಂಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಎಸ್1 ಸರಣಿ ಸ್ಕೂಟರ್‌ಗಳು ಮಾರಾಟವಾಗಿ ದೊಡ್ಡ ದಾಖಲೆಯೇ ನಿರ್ಮಾಣವಾಗಿ ಬಿಟ್ಟಿದೆ. ಸರಿ ಸುಮಾರು 27,000 ಯುನಿಟ್‌ ಸ್ಕೂಟರ್‌ ಸೇಲ್ ಆಗಿವೆ. ಮಾರುಕಟ್ಟೆಯಲ್ಲಿ 30% ಪಾಲನ್ನು ಕಂಪನಿ ತನ್ನದಾಗಿಸಿಕೊಂಡಿದ್ದು, ಹಲವು ತಿಂಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದೆ.

ಓಲಾ ಎಸ್1 ಪ್ರೊ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು 4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 8.5 kW ಮೋಟಾರ್ ಸಹಾಯದಿಂದ ಚಲಿಸುತ್ತದೆ. 6.3 ಗಂಟೆಗಳಲ್ಲಿ ಇದರ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್ ಆಗುತ್ತದೆ. 181 km ರೇಂಜ್ ನೀಡಲಿದ್ದು, 95km/h ಟಾಪ್ ಸ್ವೀಡ್ ಹೊಂದಿದೆ. ಜೊತೆಗೆ 2.9 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯುತ್ತದೆ

ಈ ಸ್ಕೂಟರ್, ನಾಲ್ಕು ರೈಡಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, ನಾರ್ಮಲ್, ಇಕೋ, ಸ್ಪೋರ್ಟ್ ಹಾಗೂ ಹೈಪರ್. ಜೊತೆಗೆ 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ನಿಯೋ ಮಿಂಟ್, ಕೋರಲ್ ಗ್ಲಾಮ್, ಜೆಟ್ ಬ್ಲಾಕ್, ಲಿಕ್ವಿಡ್ ಸಿಲ್ವರ್, ಮಾರ್ಷ್‌ಮ್ಯಾಲೋ, ಖಾಕಿ, ಮಿಲೇನಿಯಲ್ ಪಿಂಕ್ ಹಾಗೂ ಆಂಥ್ರಾಸೈಟ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಇನ್ನುಳಿದಂತೆ ಓಲಾದ ಎಸ್1 ಸ್ಕೂಟರ್ 2kWh, 3kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಸಿಗಲಿದ್ದು, ಕ್ರಮವಾಗಿ 91 km ಹಾಗೂ 141 km ರೇಂಜ್ ನೀಡಲಿವೆ. ರೂಪಾಂತರಗಳಿಗೆ ಅನುಗುಣವಾಗಿ ರೂ.99,999 ದಿಂದ ರೂ.1,09,999 ಆರಂಭಿಕ ಬೆಲೆಯನ್ನು ಹೊಂದಿವೆ. ಎಂಟ್ರಿ ಲೆವೆಲ್ ಸ್ಕೂಟರ್, ಎಸ್1 ಏರ್, kWh, 3kWh ಹಾಗೂ 4kWh ಬ್ಯಾಟರಿ ಪ್ಯಾಕ್ ಪಡೆದಿದ್ದು, ರೂ.84,999 ದಿಂದ ರೂ.1,09,999 ಲಕ್ಷ ಬೆಲೆಯನ್ನು ಹೊಂದಿದೆ.

ಓಲಾದ ಅಗ್ಗದ ಬೆಲೆಯ ಎಸ್1 ಏರ್ ಸ್ಕೂಟರ್ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾದ ನಂತರ, ಟಾಪ್ ಎಂಡ್ ಮಾದರಿ ಎಸ್1 ಪ್ರೊ ಬೇಡಿಕೆ ಕುಸಿತವಾಗಿದ್ದು, ಅದನ್ನು ಹೆಚ್ಚಿಸಲು ಬೆಲೆ ಇಳಿಕೆ ಮಾಡಲಾಗಿದೆ. ಆದರೆ, ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ದಿನಗಳವರೆಗೆ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ಕಂಪನಿ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

More from DriveSpark

Article Published On: Wednesday, April 5, 2023, 10:35 [IST]
English summary
Ola s1 pro scooter price cut details kannada
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+