Ola: ಹೊಚ್ಚ ಹೊಸ ಓಲಾ S1 X+ ವಿತರಣೆ ಪ್ರಾರಂಭ: ರೇಂಜ್ 151 ಕಿ.ಮೀ, ಬೆಲೆ ರೂ. 89,999
ಭಾರತದ ಜನಪ್ರಿಯ EV ಕಂಪನಿ ಓಲಾ ಎಲೆಕ್ಟ್ರಿಕ್ (Ola Electric) S1 X+ ನ ವಿತರಣೆಯನ್ನು ದೇಶಾದ್ಯಂತ ಪ್ರಾರಂಭಿಸಿದೆ. ಇತ್ತೀಚೆಗೆ ಪರಿಚಯಿಸಲಾದ S1 X+ ಇದೀಗ ಕೇವಲ ರೂ. 89,999 ಕ್ಕೆ ರೂ. 20,000 ಫ್ಲಾಟ್ ನಗದು ರಿಯಾಯಿತಿಯೊಂದಿಗೆ ಸೀಮಿತ ಅವಧಿಗೆ ಲಭ್ಯವಿದೆ ಎಂದು ಕಂಪನಿ ಹೇಳಿಕೊಂಡಿದೆ.
ಹೌದು, ದೇಶೀಯ ಮಾರುಕಟ್ಟೆಯಲ್ಲಿ ಓಲಾ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲು ಈ ರಿಯಾಯಿತಿ ಸೌಲಭ್ಯವನ್ನು ಘೋಷಿಸಿದ್ದು, ಎಸ್1 ಎಕ್ಸ್ ಪ್ಲಸ್ ಬೆಲೆ ರೂ. 20,000 ಕಡಿಮೆಯಾಗಿದೆ. ಈಗ, ಕೆಲವೇ ರೂ. 89,999 ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಈ ಕೊಡುಗೆ ಡಿಸೆಂಬರ್ ತಿಂಗಳ ಪೂರ್ತಿಯಿರಲಿದೆ. ಈ ಹಿಂದೆ, ಓಲಾ ಎಸ್1 ಎಕ್ಸ್ ಪ್ಲಸ್ ಬೆಲೆ ರೂ.1,09,999 ಇತ್ತು.

ಹೊಸ S1 X+ ಸ್ಕೂಟರ್ ವಿಶೇಷತೆಗಳನ್ನು ನೊಡುವುದಾದ್ರೆ, ಉನ್ನತ Gen 2 ಪ್ಲಾಟ್‌ಫಾರ್ಮ್‌ನಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅತ್ಯುತ್ತಮ ಕಾರ್ಯಕ್ಷಮತೆ, ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳು ಮತ್ತು ಅತ್ಯುತ್ತಮ ಸವಾರಿ ಗುಣಮಟ್ಟವನ್ನು ನೀಡುತ್ತದೆ. ಜೊತೆಗೆ S1 X+ ಸ್ಕೂಟರ್ 3kWh ಬ್ಯಾಟರಿಯೊಂದಿಗೆ ಬರೋಬ್ಬರಿ 151 ಕಿ.ಮೀ ಪ್ರಮಾಣೀಕೃತ ರೇಂಜ್ ನೀಡುತ್ತದೆ ಎಂದು ಓಲಾ ತಿಳಿಸಿದೆ.
ಇನ್ನು ಇದರ ಮೋಟಾರ್ ವಿಷಯಕ್ಕೆ ಬಂದರೆ 6kW ಮೋಟಾರ್‌ನೊಂದಿಗೆ, S1 X+ ಕೇವಲ 3.3 ಸೆಕೆಂಡುಗಳಲ್ಲಿ 0-40 kmph ವೇಗವನ್ನು ತಲುಪಬಲ್ಲದು ಮತ್ತು 90 kmph ಗರಿಷ್ಟ ವೇಗವನ್ನು ಹೊಂದಿದೆ. ಜೊತೆಗೆ ಕಡಿಮೆ ಬೆಲೆಗೆ ವಿಸ್ತೃತ ಫೀಚರ್‌ಗಳನ್ನು ನೀಡುತ್ತಿರುವ ಕಾರಣ ಬೇಡಿಕೆ ಕೂಡ ಹೆಚ್ಚಾಗಿದ್ದು, ಗ್ರಾಹಕರನ್ನು ಹೆಚ್ಚಾಗಿ ಕಾಯಿಸದೆ ಶೀಘ್ರವಾಗಿ ಡೆಲಿವರಿ ನೀಡಲಾಗುತ್ತಿದೆ.

ಕಂಪನಿಯ 'ಡಿಸೆಂಬರ್ ಟು ರಿಮೆಂಬರ್' ಅಭಿಯಾನದ ಭಾಗವಾಗಿ, ಓಲಾ ಇಂದು ಸಮುದಾಯಕ್ಕೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಸಮುದಾಯದ ಸದಸ್ಯರು ಎಲ್ಲಾ ಸ್ಕೂಟರ್‌ಗಳ ಮೇಲೆ ವಿಸ್ತೃತ ವಾರಂಟಿಯಲ್ಲಿ ಶೇ 50 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಪ್ರತಿ ಯಶಸ್ವಿ ರೆಫರಲ್‌ನಲ್ಲಿ ರೂ. 2,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.
S1 Pro Gen-2 ಅಥವಾ S1 Air ಖರೀದಿಯ ಮೇಲೆ ರೆಫರಿಯು ರೂ. 3,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇನ್ನು Ola ಒಟ್ಟಾರೆ ಸ್ಕೂಟರ್ ವಿಭಾಗದ ಬಗ್ಗೆ ಮಾತನಾಡುವುದಾದ್ರೆ, ಕಂಪನಿಯು ಇತ್ತೀಚೆಗೆ ತನ್ನ S1 ಪೋರ್ಟ್‌ಫೋಲಿಯೊವನ್ನು ಐದು ಸ್ಕೂಟರ್‌ಗಳಿಗೆ ವಿಸ್ತರಿಸಿದ್ದು, ಆಯಾ ವಿಭಾಗದಲ್ಲಿ ಎಲ್ಲಾ ಸ್ಕೂಟರ್‌ಗಳು ಉತ್ತಮ ಬೇಡಿಕೆ ಪಡೆದಿವೆ.

S1 Pro (2 ನೇ ತಲೆಮಾರಿನ), ಕಂಪನಿಯ ಪ್ರಮುಖ ಸ್ಕೂಟರ್ ಆಗಿದ್ದು, ರೂ. 1,47,499 ನಲ್ಲಿ ಲಭ್ಯವಿದೆ. S1 Air ರೂ. 1,19,999 ನಲ್ಲಿ ಲಭ್ಯವಿದೆ. ಉಳಿದಂತೆ S1X ಅನ್ನು ಮೂರು ರೂಪಾಂತರಗಳಲ್ಲಿ ಪರಿಚಯಿಸಲಾಗಿದ್ದು, ಅವುಗಳೆಂದರೆ S1 X+, S1 X (3kWh), ಮತ್ತು S1 X (2kWh) ಮಾದರಿಗಳಾಗಿವೆ.
S1 X (3kWh) ಮತ್ತು S1 X (2kWh) ಬುಕಿಂಗ್ ಮಾಡಲು ರೂ. 999 ನೀಡಿ ಬುಕ್ ಮಾಡಿಕೊಳ್ಳಬಹುದು. S1 X (3kWh) ಮತ್ತು S1 X (2kWh) ಸ್ಕೂಟರ್‌ಗಳು ರೂ. 99,999 ಮತ್ತು ರೂ. 89,999 ರ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








