Ola Scooter: ಬೆಂಗಳೂರಿನ ಓಲಾಗೆ ಇನ್ನೂ ಹಿಂದಿಕ್ಕಲು ಸಾಧ್ಯವಿಲ್ಲ.. ಭರ್ಜರಿಯಾಗಿವೆ ಹೊಸ ಸ್ಕೂಟರ್‌ಗಳು

ಬೆಂಗಳೂರಿನ ಓಲಾ (Ola) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಹಲವು ತಿಂಗಳಿಂದ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿ ಮುಂದಿವರಿದಿದ್ದು, ತನ್ನ ಲೈನ್ಅಪ್ ಅನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಹೊಸ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ನೂತನ ಎಸ್1 ಎಕ್ಸ್, ಎಸ್1 ಏರ್ ಹಾಗೂ ಎಸ್1 ಪ್ರೊ ನಡುವಿನ ವ್ಯತ್ಯಾಸವನ್ನು ತಿಳಿಯೋಣ ಬನ್ನಿ.

ಮೊದಲಿಗೆ ನೂತನವಾಗಿ ಲಾಂಚ್ ಆಗಿರುವ ಎಸ್1 ಎಕ್ಸ್ ಸರಣಿ ಸ್ಕೂಟರ್‌ಗಳ ಬೆಲೆ ಬಗ್ಗೆ ಮಾತನಾಡೋಣ. ಇವು ಎಂಟ್ರಿ ಲೆವೆಲ್ ಸ್ಕೂಟರ್ ಆಗಿದ್ದು, ಮೂರು ವಿಧದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿವೆ. ಅವುಗಳೆಂದರೆ, ಎಸ್1 ಎಕ್ಸ್ (2 kWh), ಎಸ್1 ಎಕ್ಸ್ (3 kWh) ಹಾಗೂ ಎಸ್1 ಎಕ್ಸ್ ಪ್ಲಸ್. ಕ್ರಮವಾಗಿ ರೂ.80,000, ರೂ.90,000 ಮತ್ತು ರೂ.1 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿವೆ.

Ola Scooter: ಬೆಂಗಳೂರಿನ ಓಲಾಗೆ ಇನ್ನೂ ಹಿಂದಿಕ್ಕಲು ಸಾಧ್ಯವಿಲ್ಲ.. ಭರ್ಜರಿಯಾಗಿವೆ ಹೊಸ ಸ್ಕೂಟರ್‌ಗಳು

ಓಲಾ ಎಸ್1 ಎಕ್ಸ್ (2 kWh) ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜಿನಲ್ಲಿ 91 ಕಿಲೋಮೀಟರ್ ರೇಂಜ್ ಕೊಡಲಿದ್ದು, 85 kmph ಟಾಪ್ ಸ್ವೀಡ್ ಹೊಂದಿದೆ. ಎಸ್1 ಎಕ್ಸ್ (3 kWh) ಹಾಗೂ ಎಸ್1 ಎಕ್ಸ್ ಪ್ಲಸ್ ಇ-ಸ್ಕೂಟರ್‌ಗಳು, ಫುಲ್ ಚಾರ್ಜಿನಲ್ಲಿ 151 ಕಿಲೋಮೀಟರ್ ವರೆಗೆ ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಪಡೆದಿವೆ.

ಈ ಮೂರು ಸ್ಕೂಟರ್‌ಗಳ ಬ್ಯಾಟರಿ ಮನೆಯ ವಿದ್ಯುತ್ ಬಳಕೆಯಲ್ಲಿ ಸಂಪೂರ್ಣ ಚಾರ್ಜ್ ಆಗಲು 7.4 ಗಂಟೆ ತೆಗೆದುಕೊಳ್ಳುತ್ತದೆ. ವೈಶಿಷ್ಟ್ಯದ ವಿಚಾರವಾಗಿ ಮಾತನಾಡುವುದಾದರೆ, ಎಸ್1 ಎಕ್ಸ್ (2 kWh), ಎಸ್1 ಎಕ್ಸ್ (3 kWh), ದೊಡ್ಡದಾದ ಟಚ್‌ಸ್ಕ್ರೀನ್ ಅನ್ನು ಒಳಗೊಂಡಿಲ್ಲ. ಬದಲಾಗಿ, 3.5 ಇಂಚಿನ ಡಿಸ್ಪ್ಲೇಯನ್ನು ಹೊಂದಿವೆ. ಇದರೊಟ್ಟಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಕಾಲ್ ಅಲರ್ಟ್ ಹಾಗೂ ರಿವರ್ಸ್ ಮೋಡ್ ಅನ್ನು ಪಡೆದಿವೆ.

Ola Scooter: ಬೆಂಗಳೂರಿನ ಓಲಾಗೆ ಇನ್ನೂ ಹಿಂದಿಕ್ಕಲು ಸಾಧ್ಯವಿಲ್ಲ.. ಭರ್ಜರಿಯಾಗಿವೆ ಹೊಸ ಸ್ಕೂಟರ್‌ಗಳು

ಓಲಾ ಎಸ್1 ಎಕ್ಸ್ ಪ್ಲಸ್ ಇ-ಸ್ಕೂಟರ್‌ ವಿಶೇಷವಾಗಿ 5 ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. ನವೀಕರಣಗೊಂಡಿರುವ ಟಾಪ್ ಎಂಡ್ ಮಾದರಿ ಓಲಾ ಎಸ್1 ಪ್ರೊ, ರೂ.1.47 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದ್ದು, ಫುಲ್ ಚಾರ್ಜಿನಲ್ಲಿ 195 ಕಿಲೋಮೀಟರ್ ವರೆಗೆ ರೇಂಜ್ ನೀಡುವ ಸಾಮರ್ಥ್ಯ ಪಡೆದಿದ್ದು, 120 kmph ಟಾಪ್ ಸ್ವೀಡ್ ಹೊಂದಿದೆ.

ಇದಿಷ್ಟೇ ಅಲ್ಲದೆ, ಅಪ್ಡೇಟೆಡ್ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್, 11 kW ಪೀಕ್ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ನಿಯೋ ಮಿಂಟ್, ಕೋರಲ್ ಗ್ಲಾಮ್, ಜೆಟ್ ಬ್ಲಾಕ್, ಲಿಕ್ವಿಡ್ ಸಿಲ್ವರ್ ಒಳಗೊಂಡಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರೆಯುವ ಈ ಸ್ಕೂಟರ್, ಡಿಸ್ಕ್ ಬ್ರೇಕ್ ಅನ್ನು ಪಡೆದಿದೆ.

ಓಲಾ ಎಸ್1 ಎಕ್ಸ್ ಬಿಡುಗಡೆಯೊಂದಿಗೆ ಎಸ್1 ಏರ್ ಮಿಡ್ ಲೆವೆಲ್ ಆವೃತ್ತಿಯಾಗಿದ್ದು, ಇತ್ತೀಚೆಗೆ ಗರಿಷ್ಠ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಂಡು ದೊಡ್ಡಮಟ್ಟದ ಸುದ್ದಿ ಮಾಡಿತ್ತು. ಈ ಸ್ಕೂಟರ್, 1.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಭಾರತದ ಗ್ರಾಹಕರಿಗೆ ಸಿಗಲಿದ್ದು, ಫುಲ್ ಚಾರ್ಜಿನಲ್ಲಿ 151 ಕಿಲೋಮೀಟರ್ ವರೆಗೆ ರೇಂಜ್ ನೀಡುತ್ತದೆ. 90 kmph ಟಾಪ್ ಸ್ವೀಡ್ ಹೊಂದಿದೆ.

ಈ ಓಲಾ ಎಸ್1 ಏರ್ ಸ್ಕೂಟರ್ ಬ್ಯಾಟರಿ ಕೇವಲ ಐದು ಗಂಟೆಯಲ್ಲಿ ಚಾರ್ಜ್ ಆಗಲಿದ್ದು, 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್‌ಡೇಟ್ಸ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿದೆ. ಮುಂಭಾಗ ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ ಟ್ವಿನ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್ ಹೊಂದಿದ್ದು, ಡ್ರಮ್ ಬ್ರೇಕ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಇನ್ನು, ಈ ಸ್ಕೂಟರ್‌ಗಳು ಒಂದಕ್ಕಿಂತ ಒಂದು ಹೆಚ್ಚು ಆಕರ್ಷಣೀಯವಾಗಿದ್ದು, ನಿಮ್ಮ ಬಜೆಟ್ ಬೆಲೆಗೆ ಯಾವುದೇ ಸೂಕ್ತವೆನಿಸುತ್ತದೆಯೋ ಅದನ್ನು ಖರೀದಿ ಮಾಡಿರಿ. ಇವೆಲ್ಲ ಒಂದು ಕಡೆಯಾದರೆ, ಓಲಾ ಮುಂಬರುವ ವರ್ಷಗಳಲ್ಲಿ ನಾಲ್ಕು ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೊಳಿಸಲು ತಯಾರಿ ನಡೆಸಿದ್ದು, ಎಲ್ಲವು ಅಂದುಕೊಂಡರೆ ನಡೆ್ದರೆ, ಕಂಪನಿಗೆ ಟಫ್ ಫೈಟ್ ನೀಡಲು ಪ್ರತಿಸ್ಪರ್ಧಿಗಳು ಇನ್ನಷ್ಟು ಬಲಗೊಳ್ಳಬೇಕು.

More from DriveSpark

Article Published On: Wednesday, August 16, 2023, 16:43 [IST]
English summary
Ola s1 x s1 air s1 pro range specs features price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+