Pure EV ePluto 7G Pro ಸ್ಕೂಟರ್ ಬಿಡುಗಡೆ... ಆಕರ್ಷಕ ಬೆಲೆ, ಅದ್ಭುತ ವಿನ್ಯಾಸ

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಅಬ್ಬರ ಜೋರಾಗಿದೆ. ಅತ್ಯುತ್ತಮ ಡಿಸೈನ್, ರೇಂಜ್, ಕೈಗೆಟುಕುವ ಬೆಲೆಗೆ ಹೊಸ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ. ಇದೀಗ ಪ್ಯೂರ್ ಇವಿ ತನ್ನ ಹೊಸ ಮಾದರಿಯಾದ ePluto 7G Pro ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದು, ಹೆಚ್ಚಿನ ಮಾಹಿತಿ ಇಲ್ಲಿದೆ.

ಪ್ಯೂರ್ ಇವಿ, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ ಅಪ್ ಕಂಪನಿಯಾಗಿದೆ. ಪ್ಯೂರ್ ಇವಿ ಇಪ್ಲೂಟೋ 7ಜಿ ಪ್ರೋ ಸ್ಕೂಟರ್, ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಲೈನ್-ಅಪ್‌ನಲ್ಲಿ ಟಾಪ್ ಸ್ಪೆಕ್ ಆಯ್ಕೆಯಾಗಿದೆ. ಈ ಹೊಸ ಮಾದರಿಯ ಬೆಲೆಯನ್ನು ನೋಡುವುದಾದರೆ, ಕಂಪನಿಯು ರೂ. 94,999 ಎಕ್ಸ್ ಶೋ ರೂಂ ಬೆಲೆಗೆ ಬಿಡುಗಡೆ ಮಾಡಿದೆ.

Pure EV ePluto 7G Pro Scooter Launched... Attractive Price, Amazing Design

ಹೊಸ ಪ್ಯೂರ್ ಇವಿ ಇಪ್ಲೂಟೋ 7ಜಿ ಪ್ರೋ ಸ್ಕೂಟರ್ ಪವರ್ ಹಾಗೂ ಬ್ಯಾಟರಿ ಕುರಿತು ಹೇಳುವುದಾದರೆ, ಮೊದಲಿಗೆ ಇದು ಎಕೋಡ್ರಿಫ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದೆ. 1.5 kW ಎಲೆಕ್ಟ್ರಿಕ್ ಮೋಟಾರ್‌ನಿಂದ 2.4 kW MCU ಮತ್ತು CAN-ಆಧಾರಿತ ಚಾರ್ಜರ್‌ನೊಂದಿಗೆ ಬರುತ್ತದೆ. ಸ್ಮಾರ್ಟ್ BMS ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ 3.0 kWh AIS 156 ಪ್ರಮಾಣೀಕೃತ ಬ್ಯಾಟರಿಯನ್ನು ಪಡೆದಿರುವುದಾಗಿ ಕಂಪನಿ ತಿಳಿಸಿದೆ.

ಹೊಸ ಪ್ಯೂರ್ ಇವಿ ಇಪ್ಲೂಟೋ 7ಜಿ ಪ್ರೋ ಸ್ಕೂಟರ್ ಮೋಡ್‌ಗಳು, ಬಣ್ಣ ಹಾಗೂ ರೇಂಜ್ ನೋಡುವುದಾದರೆ, ಇದನ್ನು ಮ್ಯಾಟ್ ಬ್ಲಾಕ್, ಗ್ರೇ ಮತ್ತು ವೈಟ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಮೂರು ವಿಭಿನ್ನ ಮೋಡ್‌ಗಳಲ್ಲಿ ಸ್ಕೂಟರ್ 100 ರಿಂದ 150 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ.

ಹೊಸ ಇಪ್ಲೂಟೋ 7ಜಿ ಪ್ರೋ ಆವೃತ್ತಿಯು ನಾಲ್ಕು ವಿಭಿನ್ನ ಮೈಕ್ರೋ ಕಂಟ್ರೋಲರ್ ಗಳು ಮತ್ತು ಹಲವಾರು ಸೆನ್ಸಾರ್ ಗಳೊಂದಿಗೆ ಬರುತ್ತದೆ. ಇದು ಸ್ಮಾರ್ಟ್‌ ಫೋನ್‌ಗಿಂತ ಹೆಚ್ಚು ಶಕ್ತಿಯುತವಾದ ಪ್ರೊಸೆಸಿಂಗ್ ಅನ್ನು ನೀಡುತ್ತದೆ. ಇದರ ಸೆಟಪ್ ಭವಿಷ್ಯದ OTA ಫರ್ಮ್‌ ವೇರ್ ನವೀಕರಣಗಳೊಂದಿಗೆ ಹೊಂದಿಕೊಳ್ಳುತ್ತದೆ ಎಂದು ಪ್ಯೂರ್ ಇವಿ ಕಂಪನಿ ತಿಳಿಸಿದೆ.

ಬಿಡುಗಡೆಗೂ ಮುನ್ನವೇ ಈ ಸ್ಕೂಟರ್ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ತಮ್ಮ ಗ್ರಾಹಕರ ಬೇಡಿಕೆಯಂತೆ ಕಂಪನಿಯು ತನ್ನ ಟಾಪ್ ಸ್ಪೆಕ್ ಬಿಡುಗಡೆ ಮಾಡಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಗಾಗಿ ಬುಕ್ಕಿಂಗ್‌ಗಳನ್ನು ಈಗಾಗಲೇ ಪ್ಯೂರ್ EV ಡೀಲರ್‌ಶಿಪ್‌ಗಳಲ್ಲಿ ತೆರೆದಿವೆ. ಆದರೆ ವಿತರಣೆಗಳು ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗಲಿವೆ ಎಂದು ಕಂಪನಿ ತಿಳಿಸಿದೆ.

ಅತಿ ಹೆಚ್ಚು ಮಾರಾಟವಾದ 7G ಮಾದರಿಯ ಈ ನವೀಕರಿಸಿದ ಆವೃತ್ತಿಯು ನಾವೀನ್ಯತೆ, ಸುಸ್ಥಿರತೆ ಮತ್ತು ಶ್ರೇಷ್ಠತೆಯ ನಮ್ಮ ಪಟ್ಟುಬಿಡದ ಅನ್ವೇಷಣೆಯ ಫಲಿತಾಂಶವಾಗಿದೆ. ಈ ಮಾದರಿಯು ದೀರ್ಘ-ಶ್ರೇಣಿಯ ಸ್ಕೂಟರ್‌ಗಳನ್ನು ಬಯಸುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ. ಪ್ರೀ-ಲಾಂಚ್ ಸಮಯದಲ್ಲಿ 5000ಕ್ಕೂ ಹೆಚ್ಚಿನ ವಿಚಾರಣೆಗಳನ್ನು ಸ್ವೀಕರಿಸಿದ್ದಕ್ಕಾಗಿ ನಾವು ಸಂತೋಷಪಡುತ್ತೇವೆ. ಬಿಡುಗಡೆಯ ಬಳಿಕ ಮೊದಲ ತಿಂಗಳಲ್ಲಿ 2000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ನಿರೀಕ್ಷಿಸುತ್ತಿರುವುದಾಗಿ ಕಂಪನಿ ಹೇಳಿದೆ.

ಕಂಪನಿಯು ಸ್ಕೂಟರ್‌ಗಳನ್ನು ದೇಶಾದ್ಯಂತ ವಿಸ್ತರಿಸಲು 2024 ರ ಅಂತ್ಯದ ವೇಳೆಗೆ ಸುಮಾರು 300 ಟಚ್ ಪಾಯಿಂಟ್‌ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಹೊಸ ePluto 7G Pro ಮಾದರಿಯ ಮಾರಾಟವು ಸಹಕರಿಸಲಿದೆ. ಈ ಹೊಸ ಸ್ಕೂಟರ್ ಮಾರುಕಟ್ಟೆಯಲ್ಲಿನ ಇತರ ಇವಿ ಸ್ಕೂಟರ್‌ಗಳಿಗೆ ತೀರ್ವ ಪೈಪೋಟಿ ನೀಡಲಿದೆ. ಓಕಿನಾವಾ, ಆಂಪಿಯರ್, ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ನೇರ ಪ್ರತಿಸ್ಪರ್ಧಿಯಾಗಿದೆ.

More from DriveSpark

Article Published On: Thursday, May 11, 2023, 13:16 [IST]
English summary
Pure ev epluto 7g pro scooter launched price design range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+